More

    ಸಂಜಯ್‌ ದತ್‌ ವಿರುದ್ಧ ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!

    ಮುಂಬೈ: ಬಾಲಿವುಡ್‌ ನಟ ಸಂಜಯ್‌ ದತ್‌ಗೆ ನಾಳೆ (ಜುಲೈ 29) 60ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಅದರ ಮುನ್ನಾದಿನವೇ ಅವರಿಗೆ ಶಾಕ್‌ ಆಗುವಂಥ ವಿಚಾರವೊಂದು ನಡೆದಿದೆ.

    ಅದೇನೆಂದರೆ ಅವರ ವಿರುದ್ಧ ಇಂದು ಬಾಂಬೆ ಹೈಕೋರ್ಟ್‌ಗೆ ಕೇಸೊಂದು ದಾಖಲಾಗಿದೆ. ಈ ಕೇಸ್‌ ದಾಖಲು ಮಾಡಿರುವವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಿ ಪೆರರಿವಾಲನ್‌.

    ಅಷ್ಟಕ್ಕೂ ಈತನಿಗೂ, ಸಂಜಯ್‌ ದತ್‌ಗೂ ಸಂಬಂಧ ಏನೆಂದರೆ, ರಾಜೀವಗಾಂಧಿ ಹತ್ಯೆ ಪ್ರಕರಣದಲ್ಲಿ ಅವರನ್ನು ಹತ್ಯೆ ಮಾಡಲು ಬಳಸಲಾಗಿದ್ದ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಇದೇ ಪೆರರಿವಾಲನ್‌ ಪೂರೈಕೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಕಾಯ್ದೆ ಅಡಿ ಈತನ ವಿರುದ್ಧ ದೂರು ದಾಖಲಾಗಿತ್ತು, ನಂತರ ಜೀವನ ಪರ್ಯಂತ ಜೈಲಿನಲ್ಲಿ ಇರುವ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

    ಈ ಘಟನೆ ನಡೆದಾಗ ಪೆರರಿವಾಲನ್‌ಗೆ ಇನ್ನೂ 19 ವರ್ಷ. ಇದೀಗ 29 ವರ್ಷ ಜೈಲಿನಲ್ಲಿ ಆತ ಇದ್ದಾನೆ. ತನ್ನ ಬಿಡುಗಡೆಗೆ ಕೋರಿ ಆತ ಸಲ್ಲಿಸಿರುವ ಮನವಿಗಳೆಲ್ಲೂ ತಿರಸ್ಕೃತವಾಗಿವೆ. ನಿನ್ನ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಆತನಿಗೆ ಹೇಳಲಾಗುತ್ತಿದೆ.

    ಇದನ್ನೂ ಓದಿ: ಬೆಣ್ಣೆ ಕದಿಯೋದೇ ಇವ್ರ ಕೆಲ್ಸ- ಕಾರಣ ಕೇಳದ್ರೆ ಅಚ್ಚರಿ ಪಡ್ತೀರಾ

    ಇದು ಪೆರರಿವಾಲನ್‌ ಕಥೆಯಾದರೆ, ಸಂಜಯ್‌ದತ್‌ 1993ರಲ್ಲಿ ಮುಂಬೈನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಅವರ ವಿರುದ್ಧವೂ ಅಕ್ರಮ ಶಸ್ತ್ರಾಸ್ತ್ರಗಳ ಕಾಯ್ದೆ ಅಡಿಯಲ್ಲಿಯೇ ಕೇಸು ದಾಖಲಾಗಿತ್ತು. ಕೆಲ ವರ್ಷ ಜೈಲಿನಲ್ಲಿ ಇದ್ದ ಅವರನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಲಾಗಿತ್ತು.

    ಇದೀಗ ಪೆರರಿವಾಲನ್‌ ಮುಂದಿರುವ ಪ್ರಶ್ನೆ ಎಂದರೆ, ಅವಧಿಗೂ ಮುನ್ನವೇ ಸಂಜಯ್‌ದತ್‌ನನ್ನು ಬಿಡುಗಡೆ ಮಾಡಿರುವಾಗ, ತನಗೇಕೆ ಸಾಧ್ಯವಿಲ್ಲ ಎನ್ನುವುದು. ಆತ ವಕೀಲರ ಮೂಲಕ ಕಲೆ ಹಾಕಿರುವ ಮಾಹಿತಿಯ ಪ್ರಕಾರ, ಸಂಜಯ್‌ದತ್‌ ಬಿಡುಗಡೆ ಸಮಯದಲ್ಲಿ ಕೇಂದ್ರ ಸರ್ಕಾರದ ಅನುಮತಿಯೇನೂ ಕೋರಿರಲಿಲ್ಲ, ಆದರೆ ತನಗ್ಯಾಕೆ ಈ ರೀತಿ ಕೇಂದ್ರ ಸರ್ಕಾರದ ನೆಪ ಹೇಳಲಾಗುತ್ತಿದೆ ಎನ್ನುವ ಪ್ರಶ್ನೆ ಎತ್ತಿದ್ದಾನೆ.

    ಸಂಜಯ್ ದತ್‌ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಈಗ ಅರ್ಜಿ ಸಲ್ಲಿಸಿದ್ದ. ಆದರೆ ಮಹಾರಾಷ್ಟ್ರ ಜೈಲು ಇಲಾಖೆಯಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲವಂತೆ. ಅದಕ್ಕಾಗಿಯೇ ಈಗ ಅದನ್ನು ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾನೆ. ಇರುವ ಅತ್ಯಲ್ಪ ಅವಧಿಯಲ್ಲಿಯೂ ಸಂಜಯ್‌ ದತ್ತ ಪರೋಲ್‌, ಪರ್ಲೊ ಪಡೆದು ಮೇಲಿಂದ ಮೇಲೆ ಹೊರಗಡೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ತನಗೆ ಎಲ್ಲವೂ ಮಾಹಿತಿ ಬೇಕು ಎಂದು ಅರ್ಜಿಯಲ್ಲಿ ಈತ ಕೋರಿದ್ದಾನೆ.

    ಆದ್ದರಿಂದ ಪರೋಕ್ಷವಾಗಿ ಸಂಜಯ್‌ದತ್‌ಗೆ ಈಗ ಸಂಕಟ ಎದುರಾಗಿದೆ. ಶೀಘ್ರದಲ್ಲಿಯೇ ಅರ್ಜಿ ವಿಚಾರಣೆ ಬರುವ ಸಾಧ್ಯತೆ ಇದೆ ಎಂದು ಪೆರರಿವಾಲನ್‌ ಪರ ವಕೀಲರು ತಿಳಿಸಿದ್ದಾರೆ. (ಏಜೆನ್ಸೀಸ್‌)

    ಮನೆಯಲ್ಲಿ ಚಪಾತಿ ತಿಂದ ನ್ಯಾಯಾಧೀಶ, ಮಗನ ಸಾವು!

    ಬೆಕ್ಕಿನ ಮೇಲೆ ವಾರಗಟ್ಟಲೆ ಗ್ಯಾಂಗ್‌ ರೇಪ್‌: ಒದ್ದಾಡಿ ಪ್ರಾಣಬಿಟ್ಟ ಜೀವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts