ಮಲಾಗ: ಮದ್ಯ ವ್ಯಸನಿಗಳು ಕುಡಿದ ಮತ್ತಿನಲ್ಲಿ ಏನೆಲ್ಲ ಅವಾಂತರ ಮಾಡುತ್ತಾರೆ ಎಂಬುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ತಾಜಾ ಉದಾಹರಣೆಯಾಗಿದೆ.
ಸ್ಪೇನ್ನ ಮಲಾಗದ ಯುವತಿಯೊಬ್ಬಳು ಕುಡಿದ ಮತ್ತಿನಲ್ಲಿ ಮೆಟ್ರೋ ಟ್ರ್ಯಾಕ್ ಮೇಲೆ ಸುಮಾರು 1 ಕಿ.ಮೀ ಕಾರು ಚಲಾಯಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಘಟನೆ ನ.7ರ ಶನಿವಾರದಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ‘ಇವತ್ತು ರಾತ್ರಿ ಏನಾಗತ್ತೋ?’; ಸರ್ಕಾರಿ ಇಲಾಖೆ ಹಾಗೂ ಹವಾಮಾನ ತಜ್ಞರಿಗೆ ಆತಂಕ
ರೈಲ್ವೆ ಕ್ರಾಸ್ ಬಳಿ ಬರುತ್ತಿದ್ದಂತೆ ಟ್ರ್ಯಾಕ್ ಕಡೆ ತಿರುವು ಪಡೆದುಕೊಳ್ಳುವ ಯುವತಿ ಸುಮಾರು ಒಂದು ಕಿ.ಮೀ ಕಾರು ಚಲಾಯಿಸಿದ್ದಾಳೆ. ಬಳಿಕ ಕಾರಿನ ಮೂರು ಚಕ್ರಗಳಿ ಪಂಕ್ಚರ್ ಆಗಿ ಸುರಂಗವೊಂದರ ಪ್ರವೇಶ ದ್ವಾರದ ಬಳಿ ನಿಂತಿರುವುದನ್ನು ಸೆಕ್ಯುರಿಟಿ ಗಾರ್ಡ್ ನೋಡುತ್ತಾರೆ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ.
ಸ್ಥಳಕ್ಕೆ ಆಗಮಿಸುವ ಪೊಲೀಸರು ಸೆಕ್ಯುರಿಟಿಗಳ ಸಹಾಯದಿಂದ ಕಾರನ್ನು ಟ್ರ್ಯಾಕ್ನಿಂದ ಹೊರ ತೆಗೆಯುತ್ತಾರೆ. ಬಳಿಕ ಯುವತಿಯನ್ನು ವಶಕ್ಕೆ ಪಡೆಯುತ್ತಾರೆ. ಆಕೆ ವಯಸ್ಸು 25. ಪರೀಕ್ಷಿಸಿದಾಗ ಆಕೆ ಮದ್ಯ ಸೇವಿಸಿದ್ದು ದೃಢವಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಟ್ರ್ಯಾಕ್ಗೆ ಯಾವುದೇ ಹಾನಿಯಾಗಿಲ್ಲ. ಈ ಒಂದು ಘಟನೆಯಿಂದ ಸುಮಾರು 2 ಗಂಟೆಗಳ ಕಾಲ ರೈಲು ಸೇವೆಯನ್ನು ರದ್ದು ಮಾಡಲಾಗಿತ್ತು. (ಏಜೆನ್ಸೀಸ್)