More

    ನೋಡೋಕೆ ಟೆಡ್ಡಿ ಬೇರ್​; ಒಳಗಿತ್ತು 28 ಲಕ್ಷ ಮೌಲ್ಯದ ಡ್ರಗ್ಸ್​! ಅಂತೂ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಪೆಡ್ಲರ್​

    ಬೆಂಗಳೂರು: ಮುದ್ದಾಗಿ ಕಾಣುವ ಟೆಡ್ಡಿ ಬೇರ್​ಗಳನ್ನು ಏನಕ್ಕೆ ಬಳಸುತ್ತಾರೆ? ಮಕ್ಕಳ ಆಟಕ್ಕೆ ಬಳಸುತ್ತಾರೆ. ಮಕ್ಕಳಾಟದ ಟೆಡ್ಡಿ ಬೇರ್​ನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್​ ಸಾಗಿಸಲು ಪ್ರಯತ್ನಿಸುತ್ತಿದ್ದ ಖತರ್ನಾಕ್​ ಕಳ್ಳ ಇದೀಗ ಸಿಕ್ಕಿಬಿದ್ದಿದ್ದಾನೆ.

    ಇದನ್ನೂ ಓದಿ: ಹಳೆ ಶತಮಾನದ ಕಾನೂನಿಟ್ಟುಕೊಂಡು ಹೊಸ ಶತಮಾನ ನಿರ್ಮಿಸಲು ಸಾಧ್ಯವಿಲ್ಲ; ರೈತರನ್ನು ಉಲ್ಲೇಖಿಸದೆಯೇ ಪ್ರತಿಕ್ರಿಯಿಸಿದ ಮೋದಿ

    ಅಸ್ಸಾಂ ಮೂಲದ ಶಾಕೀರ್ ಹುಸೇನ್(34) ಒಬ್ಬ ಅಂತರ್ ರಾಜ್ಯ ಡ್ರಗ್‌ ಪೆಡ್ಲರ್​ನನ್ನು ಟೆಡ್ಡಿ ಬೇರ್​ನಲ್ಲಿ ಡ್ರಗ್ಸ್​ ಇಟ್ಟುಕೊಂಡು ಸಾಗಿಸುತ್ತಿದ್ದ. ಈತನ ಈತನ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲಸೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನ ಬಳಿ ಇದ್ದ 28 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಲಾಗಿದೆ. 2200 ಎಂಡಿಎಂಎ ಟ್ಯಾಬ್ಲೆಟ್ಸ್, 71 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಈತ ಒಂದು ಎಂಡಿಎಂಎ ಮಾತ್ರೆ 3-4 ಸಾವಿರಕ್ಕೆ ಮಾರಾಟ ಮಾಡುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಡ್ರಗ್ಸ್​ ಅನ್ನು ರೈಲಿನಲ್ಲಿ ಅಸ್ಸಾಂನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಕಳೆದ ಐದು ವರ್ಷಗಳ ಹಿಂದೆ ಈತ ಬೆಂಗಳೂರಿಗೆ ವಲಸೆ ಬಂದಿದ್ದು ಇಲ್ಲಿನ ಕೊತ್ತನೂರಿನ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ಯಾರಿಗೂ ಅನುಮಾನ ಬರದಂತೆ ಡ್ರಗ್ಸ್​ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಅಂದು ಉಗ್ರನ ಪತ್ನಿ, ಇಂದು ಜಿಲ್ಲಾ ಅಭಿವೃದ್ಧಿ ಪರಿಷತ್ ಅಭ್ಯರ್ಥಿ! ಉಗ್ರ ಬದುಕಿನಿಂದ ಶಾಂತಿಯುತ ಬದುಕಿಗೆ ಬಂದವಳ ಕಥೆ

    ಆರೋಪಿಯನ್ನು ಪತ್ತೆ ಹಚ್ಚಿ ಮಾದಕ ವಸ್ತು ವಶ ಪಡಿಸಿಕೊಂಡಿರುವ ಪೊಲೀಸ್​ ತಂಡಕ್ಕೆ 35 ಸಾವಿರ ರೂಪಾಯಿ ಬಹುಮಾನವನ್ನು ಬೆಂಗಳೂರು ಪೊಲೀಸ್​ ಆಯುಕ್ತರಾದ ಕಮಲ್​ ಪಂತ್​ ಘೋಷಿಸಿದ್ದಾರೆ.

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts