More

    ಹಳೆ ಶತಮಾನದ ಕಾನೂನಿಟ್ಟುಕೊಂಡು ಹೊಸ ಶತಮಾನ ನಿರ್ಮಿಸಲು ಸಾಧ್ಯವಿಲ್ಲ; ರೈತರನ್ನು ಉಲ್ಲೇಖಿಸದೆಯೇ ಪ್ರತಿಕ್ರಿಯಿಸಿದ ಮೋದಿ

    ಲಖನೌ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಕಾವು ಹೆಚ್ಚಾಗುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಹಳೆಯ ಕಾಯ್ದೆಗಳ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಶತಮಾನಗಳ ಹಿಂದಿನ ಕಾಯ್ದೆ, ಕಾನೂನುಗಳನ್ನು ಇಟ್ಟುಕೊಂಡು ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ತಿದ್ದುಪಡಿಗಳು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಅಂದು ಉಗ್ರನ ಪತ್ನಿ, ಇಂದು ಜಿಲ್ಲಾ ಅಭಿವೃದ್ಧಿ ಪರಿಷತ್ ಅಭ್ಯರ್ಥಿ! ಉಗ್ರ ಬದುಕಿನಿಂದ ಶಾಂತಿಯುತ ಬದುಕಿಗೆ ಬಂದವಳ ಕಥೆ

    ಸೋಮವಾರದಂದು ಆಗ್ರಾ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ. ‘ಅಭಿವೃದ್ಧಿಗೆ ಸುಧಾರಣೆಗಳು ಬೇಕಾಗುತ್ತವೆ. ಹೊಸ ಆದೇಶಕ್ಕಾಗಿ ಮತ್ತು ಹೊಸ ಸೌಲಭ್ಯಗಳನ್ನು ನೀಡಲು ಸುಧಾರಣೆಗಳು ಬಹಳ ಅಗತ್ಯವಾಗಿವೆ. ಹಿಂದಿನ ಶತಮಾನದ ಕಾನೂನುಗಳೊಂದಿಗೆ ಮುಂದಿನ ಶತಮಾನವನ್ನು ನಿರ್ಮಿಸಲು ನಮಗೆ ಸಾಧ್ಯವಿಲ್ಲ. ಕಳೆದ ಶತಮಾನದಲ್ಲಿ ಉತ್ತಮವಾಗಿದ್ದ ಕೆಲವು ಕಾನೂನುಗಳು ಪ್ರಸ್ತುತ ಶತಮಾನದಲ್ಲಿ ಹೊರೆಯಾಗಿವೆ. ಸುಧಾರಣೆಗಳು ನಿರಂತರ ಪ್ರಕ್ರಿಯೆಯಾಗಿರಬೇಕು’ ಎಂದು ಅವರು ಹೇಳಿದರು. ಭಾಷಣದಲ್ಲಿ ರೈತರ ಬಗ್ಗೆ ಉಲ್ಲೇಖಿಸದೆಯೇ ರೈತ ಹೋರಾಟಕ್ಕೆ ಸಂಬಂಧಿಸುವ ಮಾತುಗಳನ್ನು ಪ್ರಧಾನಿಯವರು ಹೇಳಿದ್ದಾರೆ.

    ಇದನ್ನೂ ಓದಿ: 11 ದಿನಗಳ ಹಿಂದೆ ಪತನಗೊಂಡ ನೌಕಾ ವಿಮಾನದ ಪೈಲಟ್​ ಮೃತ ದೇಹ ಪತ್ತೆ; ಸಮುದ್ರದ ಆಳದಲ್ಲಿತ್ತು ದೇಹ

    ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಸುಧಾರಣೆಗಳು ಜನರಿಗೆ ಆತ್ಮ ವಿಶ್ವಾಸವನ್ನು ನೀಡಿವೆ ಎಂದು ಪ್ರಧಾನಿಯವರು ಹೇಳಿದರು. ‘ಈ ವಿಶ್ವಾಸವು ಇತ್ತೀಚಿನ ದಿನಗಳಲ್ಲಿ ಪ್ರತಿ ಚುನಾವಣೆಯಲ್ಲೂ ಕಂಡುಬಂದಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ಪ್ರತಿಯೊಂದು ಭಾಗದಲ್ಲೂ ಚುನಾವಣಾ ಫಲಿತಾಂಶಗಳಲ್ಲಿ ಈ ವಿಶ್ವಾಸದಿಂದಲೇ ಬಿಜೆಪಿಗೆ ಗೆಲುವು ಸಿಕ್ಕಿದೆ’ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts