More

    ‘ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!’

    ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣ ಸಂಬಂಧ ಇಷ್ಟು ದಿನ ನಟಿ ಸಂಜನಾ ಗಲ್ರಾನಿ ಅಲಿಯಾಸ್​ ಮಹಿರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ದಿನಕ್ಕೊಂದು ಗಂಭೀರ ಆರೋಪ ಮಾಡುತ್ತಿದ್ದರು. ಇದೀಗ ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಹೊಸ ಬಾಂಬ್​ ಸಿಡಿಸಿದ್ದಾರೆ.

    'ಅನುಶ್ರೀ ಅರೆಸ್ಟ್​ ಆಗದಂತೆ ತಡೆದಿರೋದು ಶುಗರ್​ ಡ್ಯಾಡಿ!'ಡ್ರಗ್ಸ್​ ಕೇಸ್​ ಪ್ರಕರಣದಲ್ಲಿ ಅನುಶ್ರೀ ಇತ್ತೀಚಿಗಷ್ಟೇ ಸಿಸಿಬಿ ವಿಚಾರಣೆ ಎದುರಿಸಿದ್ದರು. ‘ಸಿಸಿಬಿ ವಿಚಾರಣೆ ನಡೆಸಿದ್ದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ…’ ಎಂದು ಕಣ್ಣೀರು ಹಾಕುತ್ತ ಅನುಶ್ರೀ ಮಾತನಾಡಿದ್ದ ವಿಡಿಯೋ ತುಣುಕನ್ನು ಶುಕ್ರವಾರ ಬೆಳಗ್ಗೆ ತನ್ನ ಫೇಸ್​ಬುಕ್​ ಪೇಜ್​ನಲ್ಲಿ ಅಪ್ಲೋಡ್​ ಮಾಡಿದ್ದರು. ಇದರ ಬೆನ್ನಲ್ಲೇ ಸರಣಿ ಟ್ವೀಟ್​ ಮಾಡಿರುವ ಸಂಬರಗಿ, ”ಇಲ್ಲಿಯವರೆಗೆ ಅನುಶ್ರೀಯನ್ನು ಅರೆಸ್ಟ್ ಆಗದಂತೆ ಶುಗರ್​ ಡ್ಯಾಡಿ ತಡೆದಿದ್ದಾರೆ. ಇನ್ಮುಂದೆ ಅದೆಲ್ಲ ನಡೆಯೋದಿಲ್ಲ. ಆಕೆಯ ತಪ್ಪಿಗೆ ಕೆಲವೇ ದಿನಗಳಲ್ಲಿ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಹೊರಬರಲಿವೆ” ಎಂದಿದ್ದಾರೆ. ಇದೀಗ ಈ ಶುಗರ್​ ಡ್ಯಾಡಿ ಎಂಬ ಪ್ರಶ್ನೆ ಉದ್ಭವವಾಗಿದೆ.

    ಇದನ್ನೂ ಓದಿರಿ ಕಣ್ಣೀರಿಟ್ಟ ಅನುಶ್ರೀಗೆ ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ’ ಎಂದ ಮತ್ತೊಬ್ಬ ನಟಿ

    ”ಶುಗರ್​ ಡ್ಯಾಡಿ ಅಂದ್ರೆ ಹಣ, ದುಬಾರಿ ವಸ್ತು ಅಥವಾ ಇತರ ಉಡುಗೊರೆ ಕೊಟ್ಟು ಅದಕ್ಕೆ ಪ್ರತಿಯಾಗಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿ” ಎಂಬ ಪದದ ಅರ್ಥವನ್ನು ಸಂಬರಗಿಯೇ ಟ್ವೀಟ್ ಮಾಡಿದ್ದಾರೆ.

    ”ಅನುಶ್ರೀ ‘ರಿಂಗ್​ ಮಾಸ್ಟರ್​’ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ, ‘ಈ ಸಿನಿಮಾದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಅನುಶ್ರೀ ಮತ್ತು ಅವರ ಸ್ನೇಹಿತರು ಡ್ರಗ್ಸ್​ ಪೆಡ್ಲರ್​ಗೆ ಕರೆ ಮಾಡುತ್ತಾರೆ. ಆಗ ಆತನ ನಿಜ ಬಣ್ಣ ಬಯಲಾಗುತ್ತದೆ. ಸಿನಿಮಾದಂತೆ ಅನುಶ್ರೀ ನಿಜ ಜೀವನವೂ ಇದೆ” ಎಂದು ಆರೋಪಿಸಿದ್ದಾರೆ.

    ಸಿಸಿಬಿ ನೋಟಿಸ್​ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!

    ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts