More

    ಕಛೇರಿಯಲ್ಲೇ ಡ್ರಗ್ಸ್​ ಲ್ಯಾಬ್​ ಸ್ಥಾಪಿಸಿದ್ದ ಮಾದಕ ವ್ಯಸನಿ!

    ಸೂರತ್​​: ತನ್ನ ಕಛೇರಿಯಲ್ಲೇ ಡ್ರಗ್ಸ್​ ಉತ್ಪಾದಿಸುವುದಕ್ಕೆ ಮಿನಿ ಲ್ಯಾಬರೇಟರಿ ಮಾಡಿಕೊಂಡಿದ್ದ ಮಾದಕ ವ್ಯಸನಿಯೊಬ್ಬನನ್ನು ಗುಜರಾತ್​ ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್​ ವಿಡಿಯೋಗಳಿಂದ ಡ್ರಗ್​ ತಯಾರಿಸುವ ವಿಧಾನಗಳನ್ನು ಕಲಿತು ನಿಷೇಧಿತ ಮಾದಕ ವಸ್ತು ಮೆಥಾಂಫೆಟಮೀನ್​(ಮೆಥ್​)ಅನ್ನು ತಯಾರಿಸುತ್ತಿದ್ದ ಎನ್ನಲಾಗಿದೆ.

    ಬಂಧಿತನು ಗುಜರಾತಿನ ಸೂರತ್​ ನಗರದ ಸರ್ತಾನಾ ಎಂಬ ಪ್ರದೇಶದಲ್ಲಿನ ತನ್ನ ಕಛೇರಿಯಲ್ಲಿ ಮೆಥ್​​ ತಯಾರಿಸುವ ಪ್ರಯೋಗಾಲಯವನ್ನು ಸ್ಥಾಪಿಸಿದ್ದ. ವಿಚಾರಣೆ ವೇಳೆ ಈತ ತಾನು ಮಾದಕ ವ್ಯಸನಿಯಾಗಿರುವ ಬಗ್ಗೆ ಒಪ್ಪಿಕೊಂಡ. ರಾಜಸ್ಥಾನದ ಡ್ರಗ್​ ಡೀಲರ್​ಗಳ ಮಾರ್ಗದರ್ಶನ ಮತ್ತು ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಕಲಿತು ಈ ಕಾನೂನುಬಾಹಿರ ಕೆಲಸಕ್ಕೆ ಕೈಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗೆ ಸೂರತ್​ ಪೊಲೀಸರು ಬಂಧಿಸಿದ ಪ್ರವೀಣ್​ ಬಿಷ್ಣೋಯ್​​ ಎಂಬ ರಾಜಸ್ಥಾನ ಮೂಲದ ಡ್ರಗ್​ ಪೆಡ್ಲರ್​ನ ಬಂಧನದ ನಂತರ ಈತನ ಮಾಹಿತಿ ಹೊರಬಿದ್ದಿದೆ ಎನ್ನಲಾಗಿದೆ. (ಏಜೆನ್ಸೀಸ್​​)

    ಕಾಂಗ್ರೆಸ್​ ನಾಯಕರ ತಲೆದಂಡವಾಗುತ್ತೆ! ಬಿಟ್​​ಕಾಯಿನ್​ ಬಗ್ಗೆ ಉನ್ನತ ತನಿಖೆಗೆ ಸಿದ್ಧ ಎಂದ ಗೃಹ ಸಚಿವ

    1947ರಲ್ಲಿ ಯಾವ ಯುದ್ಧ ನಡೆಯಿತು ಹೇಳಿದರೆ, ಪದ್ಮಶ್ರೀ ವಾಪಸ್​ ಕೊಡುವೆ ಎಂದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts