More

    ಗಡಿಯಲ್ಲಿ ಡ್ರೋನ್​ ಬಳಸಿ ನಿಗಾ; ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಸಹಕಾರ

    ನವದೆಹಲಿ: ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಚೀನಾ ಮತ್ತು ಭಾರತ ಯೋಧರು ಬಿರುಗಣ್ಣು ಬಿಟ್ಟುಕೊಂಡು ಕುಳಿತಿರುವ ಹಿನ್ನೆಲೆಯಲ್ಲಿ ಗಡಿಯುದ್ಧಕ್ಕೂ ಡ್ರೋನ್​ ಪಹರೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಅತಿಕ್ರಮಣದ ಮೇಲೆ ಹದ್ದಿನಕಣ್ಣು ಇಡುವುದು ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಡಿ ಭಾಗದಲ್ಲಿ ಡ್ರೋನ್​ ಪಹರೆ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಹೆಚ್ಚಿನ ಸಂಖ್ಯೆಯ ಡ್ರೋನ್​ಗಳನ್ನು ನಿಯೋಜಿಸುವಂತೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಎನ್​ಟಿಆರ್​ಒ) ಸೂಚಿಸಿದೆ. ಹೀಗೆ ಮಾಡುವುದರಿಂದ, ಯುದ್ಧದ ಪರಿಸ್ಥಿತಿಯ ಕುರಿತು ಹೆಚ್ಚು ಪಾರದರ್ಶಕ ಮಾಹಿತಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ

    ಇಸ್ರೇಲ್​ ಡ್ರೋನ್​ಗಳ ಬಳಕೆ: ಕೇಂದ್ರ ಸರ್ಕಾರ ಇಸ್ರೇಲ್​ನಿಂದ ಖರೀದಿಸಿರುವ ಹೆರಾನ್​ ಮಧ್ಯಮ ಎತ್ತರದ ಡ್ರೋನ್​ಗಳನ್ನು ಸದ್ಯ ಬಳಸಲಾಗುತ್ತಿದೆ. ಇವುಗಳ ಪಹರೆ ಕಾರ್ಯಕ್ಕೆ ಎನ್​ಟಿಆರ್​ಒ ತಾಂತ್ರಿಕ ಸಹಕಾರ ಒದಗಿಸುತ್ತಿದೆ.

    ಪಿಎಲ್​ಎ ಲೂಂಗ್​ ಎಂಬ ಶಸ್ತ್ರಸಜ್ಜಿತ ಡ್ರೋನ್​ನ ಪಡೆಯನ್ನು ರಚಿಸಿಕೊಂಡಿದೆ. ಆದರೆ, ಇದರ ಕಾರ್ಯಕ್ಷಮತೆಯ ಬಗ್ಗೆ ಅಷ್ಟೇನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ಸೇನಾಪಡೆಗೆ ಡ್ರೋನ್​ ಪಡೆಯನ್ನು ಸೇರ್ಪಡೆಗೊಳಿಸುವ ಚಿಂತನೆ ನಡೆಸಿದೆ. ಇದಕ್ಕಾಗಿ ಅದು ಇಸ್ರೇಲ್​ ಅಥವಾ ಅಮೆರಿಕದಿಂದ ಡ್ರೋನ್​ಗಳನ್ನು ಖರೀದಿಸುವ ಬಗ್ಗೆ ಆಲೋಚಿಸುತ್ತಿದೆ ಎನ್ನಲಾಗಿದೆ.

    ಕರ್ಫ್ಯೂ ನಡುವೆ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts