More

    ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್​ ಪ್ರತಾಪ್ ಸವಾಲು

    ಬೆಂಗಳೂರು: ನಕಲಿ ವಿಜ್ಞಾನಿ ಎಂದು ಬಹಿರಂಗವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿರುವ ಡ್ರೋನ್​ ಪ್ರತಾಪ್, ಟೀಕಾಕಾರಿಗೆ ಟ್ವೀಟ್​ ಮೂಲಕ ತಿರುಗೇಟು ನೀಡಿದ್ದಾರೆ.

    ಇಂದು ಟ್ವೀಟ್​ ಮಾಡಿರುವ ಪ್ರತಾಪ್​, ನನ್ನ ಪೇಟೆಂಟ್​ ನೋಂದಣಿಯಾಗಲಿ ಆವಾಗ ಪ್ರತಾಪ್​ ಯಾರೆಂಬುದು ಎಲ್ಲರಿಗೂ ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ಟ್ವೀಟ್​ ಅನ್ನು ಹೆಚ್ಚು ರೀಟ್ವೀಟ್​ ಮಾಡಿ ಎಂದು ನೆಟ್ಟಿಗರ ಬಳಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ನಿಂತ್ಕೊಳ್ಳಿ ನಿಮ್ಗೆ ಕರೊನಾ ಇದೆ ಅಂದ್ರೂ ಬೈಕ್​ ಏರಿ ಪರಾರಿಯಾದ ಯುವತಿ!

    ಮತ್ತೊಂದು ಟ್ವೀಟ್​ನಲ್ಲಿ ಮಾಧ್ಯಮ ವಿರುದ್ಧ ಕಿಡಿಕಾರಿರುವ ಪ್ರತಾಪ್​, ನಾನು ತೊಂದರೆಯೇ ಅಲ್ಲ. ಹಸಿವು ಹೊಂದಿರುವ ಮಾಧ್ಯಮಗಳ ಬಹುದೊಡ್ಡ ಟಿಆರ್​ಪಿಯ ಲಕ್ಷಣವೇ ನಾನು. ತೊಂದರೆ ಏನೆಂದರೆ, ಯಾವುದೇ ನ್ಯೂಸ್​ ಪ್ರಕಟ ಮಾಡುವಾಗ ಮೂಲ ಸಂಶೋಧನೆಯನ್ನು ಸಹ ಮಾಡುವುದಿಲ್ಲ. ಕರ್ನಾಟಕದಲ್ಲಿ ತನಿಖಾ ಪತ್ರಿಕೋದ್ಯಮ ಸತ್ತಿದೆ. ಪ್ರತಾಪ್​ ಬಗ್ಗೆ ತಿಳಿಯಲು ವೆಬ್​ಸೈಟ್​ ಒಂದು ನಡೆಸಿದ ಫ್ಯಾಕ್ಟ್​ಚೆಕ್​ ಅನ್ನು ಆಯ್ದುಕೊಂಡಿವೆ ಎಂದು ಪ್ರತಾಪ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕೊಪ್ಪಳದಲ್ಲಿದೆ ಚೀನಾ ಸೇನೆಯ ನೇರ ಸಂಪರ್ಕ ಇರುವ ಕಂಪನಿ, ಅದು ಯಾವುದು ನೋಡಿ…

    ಮರುಬಳಕೆ ವಸ್ತುಗಳಿಂದ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್​ ಬಂದಿವೆ ಎಂದು ಅನೇಕ ವೇದಿಕೆಗಳಲ್ಲಿ ಹೇಳಿದ್ದ ಡ್ರೋನ್​ ಪ್ರತಾಪ್​ ಬಣ್ಣ ಬಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ತನ್ನ ಸಾಧನೆ ಸಾಬೀತು ಮಾಡಲು ಖಾಸಗಿ ಮಾಧ್ಯಮವೊಂದರ ಲೈವ್​ ಶೋನಲ್ಲಿ ಬಂದಿದ್ದ ಪ್ರತಾಪ್​, ಅಲ್ಲಿಯೂ ಸರಿಯಾಗಿ ಉತ್ತರ ನೀಡದೆ ಜನರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದ್ದಾರೆ. ಇದೀಗ ಪ್ರತಾಪ್​ ವಿರುದ್ಧ ದೂರುಗಳು ಸಹ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೋ ಕಾದು ನೋಡಬೇಕಿದೆ.

    ಟ್ರೋಲ್​ ಆಗುವ ಬಗ್ಗೆ ಮೊದಲೇ ಗೊತ್ತಿತ್ತಂತೆ: ಹೋಟೆಲ್​ ಮಾಲೀಕ-ಪ್ರತಾಪ್​ ನಡುವೆ ನಡೆದಿತ್ತು ರೋಚಕ ಮಾತುಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts