More

    ಶರಣ ಸೇನೆಗೆ ಇಂದು ಬಿ.ವೈ.ವಿಜಯೇಂದ್ರ ಚಾಲನೆ

    ಚಿತ್ರದುರ್ಗ: ಚಿತ್ರದುರ್ಗ ಕೇಂದ್ರ ಸ್ಥಳವನ್ನಾಗಿ ಹೊಂದಿರುವ ‘ಶರಣ ಸೇನೆ’ ರಾಜ್ಯ ಮಟ್ಟದ ಸಂಘಟನೆ ಮಾ.14 ರಿಂದ ಅಸ್ತಿತ್ವಕ್ಕೆ ಬರಲಿದೆ.

    ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ನಾನಾ ಮಠಾಧೀಶರು ಸಾನ್ನಿಧ್ಯವಹಿಸುವರು. ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಘಟನೆಗೆ ಚಾಲನೆ ನೀಡುವರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ನೂತನ ಸಂಘಟನೆ ಸ್ವರೂಪ, ಕಾರ‌್ಯ ಶೈಲಿ ಕುರಿತು ಮಾತನಾಡಿ, ಯುವಕರನ್ನು ಸಕ್ರಿಯವಾಗಿ ಸಾಮಾಜಿಕ ಕಾರ‌್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಪಕ್ಷಾತೀತ ಸಂಘಟನೆಯ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶರಣ ಸೇನೆ ಅಸ್ತಿತ್ವಕ್ಕೆ ಬರುತ್ತಿದೆ.

    ಶೀಘ್ರದಲ್ಲೇ ಎಲ್ಲ ಜಿಲ್ಲೆಗಳಲ್ಲೂ ಈ ಸಂಘಟನೆ ತಲೆ ಎತ್ತಲಿದೆ. ರಾಜ್ಯ ಹಾಗೂ ಮತ್ತು ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿ ಆಯ್ಕೆ, ಕಾರ‌್ಯಾಕಾರಿ ಸಮಿತಿಗಳು ರಚನೆಯಾಗಲಿದೆ. ರಾಜ್ಯದ ವಿವಿಧೆಡೆ 2-3 ಜಿಲ್ಲೆಗಳ ಸಾವಿರಾರು ಯುವಕರನ್ನು ಒಂದೆಡೆ ಸೇರಿಸಿ, ಕಾರ‌್ಯಾಗಾರ ನಡೆಸುವ ಮೂಲಕ ವಿಧಾಯಕ ಹಾಗೂ ರಚನಾತ್ಮಕ ಕಾರ‌್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯರು ಯುವಜನರಿಗೆ ಮಾರ್ಗ ದರ್ಶನ ನೀಡಲಿದ್ದಾರೆ ಎಂದರು.

    ಇಂದು ಆರಂಭ
    14 ರಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಶರಣ ಸೇನೆ ಹಾಗೂ ಸಾವಿರ ಯುವಕರಿಗಾಗಿ ಏರ್ಪಡಿಸಿರುವ ಯುವಶಕ್ತಿ ಅನಾವರಣ ಕಾರ್ಯಾಗಾರವನ್ನು ವಿಜಯೇಂದ್ರ ಉದ್ಘಾಟಿಸುವರು.

    ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಸಮ್ಮುಖವಹಿಸಲಿದ್ದಾರೆ. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ ಅವರು ಶರಣ ಸೇನೆ ಲೋಗೋ ಬಿಡುಗಡೆ ಮಾಡುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts