More

    ರಾಣೆಬೆನ್ನೂರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗೆ ನಮೋ ಚಾಲನೆ

    ರಾಣೆಬೆನ್ನೂರ: ಇಲ್ಲಿಯ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಚಾಲನೆ ನೀಡಿದರು.
    ನಗರದ ರೈಲ್ವೆ ನಿಲ್ದಾಣದಲ್ಲಿ ಮೋದಿಯವರು ಕಾಮಗಾರಿಗೆ ಚಾಲನೆ ನೀಡುವುದು ಹಾಗೂ ಭಾಷಣದ ಆಲಿಸಲು ವೇದಿಕೆ ಕಾರ್ಯಕ್ರಮದ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಕಾಮಗಾರಿಗೆ ಚಾಲನೆ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ನೋಡುಗರ ಗಮನ ಸೆಳೆದರು.
    ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬಾರದ ಸಂಸದ ಶಿವಕುಮಾರ ಉದಾಸಿ ಪತ್ರದ ಮೂಲಕ ಸಂದೇಶ ಕಳುಹಿಸಿದರು. ಅದನ್ನು ಅವರ ಆಪ್ತ ಕಾರ್ಯದರ್ಶಿ ರಾಜು ಪೇಟಕರ ಓದಿದರು. ‘ನರೇಂದ್ರ ಮೋದಿಜಿ ಅವರ ಅಮೃತ ಭಾರತ ಸ್ಟೇಷನ್ ಯೋಜನೆ ಎಂಬ ಮತ್ತೊಂದು ಅಭಿವೃದ್ಧಿ ಪರ ಕಾರ್ಯಕ್ರಮದಲ್ಲಿ ರಾಣೆಬೆನ್ನೂರ ನಿಲ್ದಾಣ ಅಭಿವೃದ್ಧಿ ಆಗುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ.
    ರಾಣೆಬೆನ್ನೂರ ಮಾತ್ರವಲ್ಲದೆ ದೇಶದ 554 ರೈಲು ನಿಲ್ದಾಣ, 1500 ಮೇಲ್ಸೇತುವೆ ಹಾಗೂ ಕೆಳಸೇತುವೆ ಕೂಡ ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಭಾಗದಲ್ಲಿ ಈಗಾಗಲೇ ಮೋಟೆಬೆನ್ನೂರ ಹತ್ತಿರದ ಮೇಲ್ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ರಾಣೆಬೆನ್ನೂರ-ದೇವರಗುಡ್ಡ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
    ರಾಣೆಬೆನ್ನೂರ ಶಿಕಾರಿಪುರ ನೂತನ ರೈಲು ಮಾರ್ಗಕ್ಕೂ ಮಂಜೂರಾತಿ ದೊರಕಿದ್ದು, ಸರ್ವೆ ಕಾರ್ಯ ನಡೆದಿದೆ. ಇದರ ನಡುವೆ ಬರುವ ರಟ್ಟಿಹಳ್ಳಿ ಪಟ್ಟಣದಲ್ಲಿ ಅನಗತ್ಯ ತೊಂದರೆ, ಗೊಂದಲ ಆಗದ ಹಾಗೆ ಜನರ ಆಸ್ತಿಗಳಿಗೆ ಚ್ಯುತಿ ಬರದ ಹಾಗೆ ಅಲ್ಲಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಕಾಮಗಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ’ ಎಂದು ವಿವರಿಸಿದರು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಾಗಶಾಂತಿ ಗ್ರುಪ್‌ನ ಅಧ್ಯಕ್ಷ ಬಸವರಾಜ ಪಾಟೀಲ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಪ್ರಮುಖರಾದ ಪ್ರಕಾಶಗೌಡ, ಕೆ. ಶಿವಲಿಂಗಪ್ಪ, ಎಂ.ಎಸ್. ಅರಕೇರಿ, ವಾಸುದೇವ ಲದ್ವಾ, ವಿ.ಪಿ. ಲಿಂಗನಗೌಡ್ರ, ಎಸ್.ಎಸ್. ಸಣ್ಣಗೌಡ್ರ, ಎಸ್.ಎಸ್. ರಾಮಲಿಂಗಣ್ಣನವರ, ಭಾರತಿ ಅಳವಂಡಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts