More

    ಡ್ರೈವರ್​ಲೆಸ್ ಕಾರ್​ಗಳಿಗೆ ಭಾರತ ಪ್ರವೇಶವಿಲ್ಲ ಎಂದಿದ್ದೇಕೆ ಸಚಿವ ನಿತಿನ್ ಗಡ್ಕರಿ?

    ನವದೆಹಲಿ: ಜಗತ್ತಿನ ಮುಂದುವರಿದ ದೇಶಗಳಲ್ಲಿ ಸದ್ದು ಮಾಡುತ್ತಿರುವ ಚಾಲಕ ರಹಿತ ಕಾರುಗಳನ್ನು ಭಾರತದಲ್ಲಿ ಯಾವುದೇ ಕಾರಣಕ್ಕೂ ಬರಲು ಬಿಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

    ಇದನ್ನೂ ಓದಿ:ತನಿಖೆಯನ್ನು ತಳ್ಳಿಹಾಕುವುದಿಲ್ಲ, ಕೆನಡಾ ಸಾಕ್ಷ್ಯ ಒದಗಿಸಬೇಕು: ಜೈಶಂಕರ್

    ಡ್ರೈವರ್ ಲೆಸ್ ಕಾರುಗಳನ್ನು ಭಾರತದಲ್ಲಿ ಅನುಮತಿಸದೆ ಎಲ್ಲೆಡೆ ಉತ್ತಮ ಚಾಲನಾ ಕಲಿಕಾ ತರಬೇತಿ ನೀಡಿದರೆ ಮುಂದಿನ ದಿನಗಳಲ್ಲಿ 50 ಲಕ್ಷ ಹೊಸ ಚಾಲಕರಿಗೆ ಉದ್ಯೋಗಾವಕಾಶ ನೀಡಬಹದು. ಸರ್ಕಾರ ಇಂಥ ಸಾರ್ಥಕ ಕೆಲಸಗಳಿಗೆ ಕೈ ಹಾಕಲಿದೆಯೇ ಹೊರತು ಡ್ರೈವರ್ ಲೆಸ್ ಕಾರುಗಳನ್ನು ಭಾರತಕ್ಕೆ ತಂದು ಜನರ ಹೊಟ್ಟೆ ಮೇಲೆ ಹೊಡೆಯುವ ನಿರ್ಧಾರ ಗಳನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು.

    ‘ದೇಶದಲ್ಲಿನ ಖಾಸಗಿ ವಾಹನಗಳಿಗೆ ಸದ್ಯದ ಮಟ್ಟಿಗೆ 22 ಲಕ್ಷ ಚಾಲಕ ಕೊರತೆಯಿದೆ. ಇದರ ಲಾಭವನ್ನು ಕ್ಯಾಬ್ ಮಾಲೀಕರು ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಹೊಸ ಪೀಳಿಗೆಯ ಚಾಲಕರನ್ನು ಸೃಷ್ಟಿ ಮಾಡಬೇಕಿದೆ. ಇದಕ್ಕಾಗಿ ನಾವು ಹೊಸ ತಂತ್ರಜ್ಞಾನವನ್ನು ತರಬೇಕಿಲ್ಲ. ಆದರೆ, ಯುವಕರಿಗೆ ಸೂಕ್ತ ರೀತಿಯಲ್ಲಿ ಚಾಲನಾ ತರಬೇತಿ ನೀಡಿದರೆ ಅವರ ಕೆಲಸಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅವರ ಬಾಳಿಗೂ ಅದು ನೆರವಾಗುತ್ತದೆ’ ಎಂದು ಗಡ್ಕರಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರವು ಶೀಘ್ರವೇ ಕ್ಯಾಬ್ ಆಯ್ಕೆ ವೆಬ್ ಸೈಟ್ ಆರಂಭಿಸಲಿದ್ದು, ದೇಶದ ಯಾವುದೇ ನಗರದಲ್ಲಿ ಪ್ರಯಾಣ ಬೆಳೆಸಲು ಬಯಸುವ ನಾಗರಿಕರು, ಎಲೆಕ್ಟ್ರಿಕ್ ಕಾರು, ಇಂಧನವುಳ್ಳ ಕಾರು ಅಥವಾ ದ್ವಿಚಕ್ರ ವಾಹನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಶಿವ ದೇಗುಲ ಪೂಜಾರಿಯ ಬರ್ಬರ ಹತ್ಯೆ- ದಾನಾಪುರ ಉದ್ವಿಗ್ನ – ಪೊಲೀಸ್​ ವಾಹನಕ್ಕೆ ಬೆಂಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts