More

    ತುಂಗೆ ಸಂರಕ್ಷಿಸದಿದ್ದಲ್ಲಿ ಕುಡಿಯುವ ನೀರಿಗೂ ಕಂಟಕ

    ಶಿವಮೊಗ್ಗ: ನಗರದ ಜನತೆಗೆ ಜೀವನದಿ ತುಂಗೆಯಲ್ಲಿ ಬೇಸಿಗೆಗೆ ಮುನ್ನವೇ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು ಕಲುಷಿತಗೊಳ್ಳುತ್ತಿರುವ ತುಂಗಾ ನದಿಯನ್ನು ಸಂರಕ್ಷಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ಪರೋಪಕಾರಂ ಕುಟುಂಬದ ದೀಪಾ ಶ್ರೀಧರ್ ಕಳವಳ ವ್ಯಕ್ತಪಡಿಸಿದರು.

    ನಗರದ ಗುಂಡಪ್ಪ ಶೆಡ್‌ನ ಮಲ್ಲೇಶ್ವರ ನಗರದ ಮುಖ್ಯರಸ್ತೆಯ ಮ್ಯೂಸಿಕ್ ಪಾರ್ಕ್‌ನಲ್ಲಿ ಪರೋಪಕಾರಂ ಕುಟುಂಬದ 750ನೇ ಕಾರ್ಯಕ್ರಮದ ಭಾಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತುಂಗೆಯ ಒಡಲಿಗೆ ನಗರ, ಪಟ್ಟಣಗಳ ಕೊಳಚೆ ನೀರು ಸೇರುತ್ತಿದೆ. ಅಲ್ಲದೆ ನದಿ ಪಾತ್ರದಲ್ಲಿ ಸುರಿಯಲಾಗುತ್ತಿರುವ ಭಾರೀ ಪ್ರಮಾಣದ ತ್ಯಾಜ್ಯ ನದಿ ನೀರನ್ನು ಕಲುಷಿತಗೊಳಿಸುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದರು.
    ತುಂಗಾನದಿಯ ಜಲಮಾಲಿನ್ಯ ನಿಯಂತ್ರಣಕ್ಕಾಗಿ ಪರೋಪಕಾರಂ ಕುಟುಂಬ ಸಹ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಗತ್ಯ ಸಹಕಾರ ಹಾಗೂ ಆದ್ಯತೆ ನೀಡಲಿದೆ. ಹಣ-ಅಧಿಕಾರ, ಪ್ರಚಾರ-ಪ್ರಸಿದ್ಧಿ, ಪ್ರಶಸ್ತಿ-ಪುರಸ್ಕಾರದ ವ್ಯಾವೋಹವಿಲ್ಲದೆ ನಿಸ್ವಾರ್ಥ ಮನಸ್ಸಿನಿಂದ ಸಾಮಾಜಿಕ ಸೇವೆ ಮಾಡಬೇಕು. ಇಂತಹ ಸೇವೆಯಿಂದ ಮಾನಸಿಕ ಸಂತೃಪ್ತಿ ದೊರೆಯುತ್ತದೆ. ನಿಸ್ವಾರ್ಥ ಸೇವೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹೇಳಿದರು.
    ಪರೋಪಕಾರಂ ಕುಟುಂಬದ ಅನಿಲ್ ಹೆಗ್ಡೆ, ಎನ್.ಎಂ.ರಾಘವೇಂದ್ರ, ಕಾರ್ಪೆಂಟರ್ ಕುಮಾರ್, ನಿವೃತ್ತ ಯೋಧ ಕೆ.ಎಸ್.ವೆಂಕಟೇಶ್, ಆರ್.ಕಿರಣ್, ರಾಘವೇಂದ್ರ ಪೈ, ಕೆ.ಎಸ್.ಸುರೇಶ್, ವಿಜಯ್ ಕಾರ್ತಿಕ್, ವೈಶಾಖ, ಚರಿತಾ (ಚರ‌್ರಿ), ಸಚಿನ್ ನ್ಯಾಮತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts