More

    ತುಂಗಾ ನದಿಗೆ ಕಲುಷಿತ ನೀರು ತಡೆಗೆ ಮಾರ್ಚ್ ಅಂತ್ಯದ ಗಡುವು

    ಶಿವಮೊಗ್ಗ: ತುಂಗೆ ನಮ್ಮ ಜೀವನಾಡಿಯಾಗಿದ್ದು ಅದನ್ನು ಕಾಪಾಡುವ ಹೊಣೆ ನಮ್ಮೆಲ್ಲದ್ದಾಗಿದೆ. ಹಾಗಾಗಿ ಸರ್ಕಾರದಿಂದ ಮೂರು ಹಂತದಲ್ಲಿ ಸಿಗುವ ಅನುದಾನವನ್ನು ಬಳಸಿಕೊಂಡು ನದಿಗೆ ಕಲುಷಿತ ನೀರು ಸೇರದಂತೆ ತಡೆಯುವ ಕಾಮಗಾರಿಗಳನ್ನು 2024ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಶಾಸಕರ ಕರ್ತವ್ಯಭವನದಲ್ಲಿ ಮಂಗಳವಾರ ತುಂಗಾನದಿಗೆ ಕಲುಷಿತ ನೀರು ಸೇರ್ಪಡೆ ತಡೆಯುವ ನಿಟ್ಟಿನಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ರೂಪಿಸುವ ಸಂಬಂಧ ಅಧಿಕಾರಿಗಳ ಹಾಗೂ ಶುದ್ಧ ತುಂಗಾ ಅಭಿಯಾನದ ಸದಸ್ಯರ ವಿಶೇಷ ಸಭೆಯಲ್ಲಿ ಚರ್ಚೆ ನಡೆಸಿದ ಅವರು, ನದಿ ಚೆನ್ನಾಗಿದ್ದರೆ ಮನುಷ್ಯರ ಆರೋಗ್ಯವೂ ಚೆನ್ನಾಗಿರುತ್ತದೆ. ಆ ನಿಟ್ಟಿನಲ್ಲಿ ತುಂಗೆಯ ಮಲೀನವನ್ನು ತೊಡೆದುಹಾಕುವ ಕೆಲಸ ತ್ವರಿತವಾಗಿ ಆಗಬೇಕಿದೆ ಎಂದು ಹೇಳಿದರು.
    ಈ ಹಿಂದೆ ತುಂಗಾ ಉಳಿಸಿ ಹೋರಾಟ ನಡೆದಿತ್ತು. ಸಾಹಿತಿ ಯು.ಆರ್.ಅನಂತಮೂರ್ತಿ ಆ ಹೋರಾಟಕ್ಕೆ ಕೈಜೋಡಿಸಿದ್ದರು. ಇದೀಗ ಪರ್ಯಾವರಣ ಟ್ರಸ್ಟ್ ಮತ್ತು ನಿರ್ಮಲ ತುಂಗಾ ಅಭಿಯಾನ ಹೋರಾಟ ನಡೆಸುತ್ತಿವೆ. ನದಿ ಸ್ವಚ್ಛತೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಮೂಲಕ ಆಂದೋಲನ ತುದಿ ಮುಟ್ಟಬೇಕಿದ್ದು ಅದಕ್ಕೆ ನಾಗರೀಕರ ಸಹಕಾರವೂ ಬೇಕಿದೆ ಎಂದರು.
    ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಪರಿಸರವಾದಿ ಪ್ರೊ. ಬಿ.ಎಂ. ಕುಮಾರಸ್ವಾಮಿ, ಸಾಮಾಜಿಕ ಹೋರಾಟಗಾರ ಎಸ್.ಬಿ.ಅಶೋಕ್ ಕುಮಾರ್, ನಗರ ನೀರು ಸರಬರಾಜು ಎಇ ಸಿದ್ದಪ್ಪ, ತುಂಗಾ ಮೇಲ್ದಂಡೆ ಯೋಜನೆ ನಿರ್ದೇಶಕ ಜಿ.ಎಂ.ಪ್ರವೀಣ್, ಪಾಲಿಕೆ ಪರಿಸರ ಅಧಿಕಾರಿ ಅಮೋಘ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts