More

    ಸಂಗೇದೇವರಕೊಪ್ಪದಲ್ಲಿ ಮನೆಗೆ ನುಗ್ಗುತ್ತಿದೆ ಚರಂಡಿ ನೀರು

    ಕಲಘಟಗಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆರಾಯನ ಆರ್ಭಟದಿಂದ ಗಟಾರದ ನೀರು ಮನೆಯೊಳಗೆ ನುಗ್ಗುತ್ತಿದ್ದು, ಗ್ರಾಮಸ್ಥರು ಗಬ್ಬು ವಾಸನೆಯಿಂದ ಪರದಾಡುವಂತಾಗಿದೆ.

    ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ಶಿಬಾರಗಟ್ಟಿ ಹತ್ತಿರದ ಮೇಲಿನ ಓಣಿಯಲ್ಲಿರುವ 20 ಮನೆಗಳಿಗೆ ಗಟಾರದ ನೀರು ನುಗ್ಗಿ ಪಾತ್ರೆ, ಆಹಾರ ಸಾಮಗ್ರಿಗಳು ನೀರಿನಲ್ಲಿ ಒದ್ದೆಯಾಗಿವೆ.

    ಗ್ರಾಮದ ಮೇಲಿನ ಓಣಿಯಲ್ಲಿನ ಮನೆಗಳ ಮುಂದಿರುವ ಸಣ್ಣ ಕಾಲುವೆಯನ್ನು ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡಬೇಕೆಂದು ವರ್ಷದ ಹಿಂದೆಯೇ ಮಣ್ಣು ತೆಗೆದು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದರಿಂದ ಅಲ್ಲಿನ ನಿವಾಸಿಗಳಿಗೆ ಸ್ಥಗಿತಗೊಂಡ ಕಾಮಗಾರಿಯಿಂದ ಸಾಕಷ್ಟು ತೊಂದರೆ ಉಂಟಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳನ್ನು ಅಂಗಲಾಚಿದರೂ ಕ್ಯಾರೇ ಎನ್ನುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

    ವರ್ಷದ ಹಿಂದೇ ಗಟಾರದ ಕಾಮಗಾರಿ ಮಾಡುತ್ತೇವೆಂದು ಮಣ್ಣು ತೆಗೆದು ಬಿಡಲಾಗಿದೆ. ಇದರಿಂದ ಮನೆಯೊಳಗೆ ಗಟಾರದ ನೀರು ಬರುತ್ತಿದೆ. ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಬೇಕು. – | ಬಸವರಾಜ ಕಂಟೆಪ್ಪನವರ, ಗ್ರಾಮಸ್ಥ

    ಅತಿಯಾದ ಮಳೆಯಿಂದ ನೀರಿನ ಪ್ರಮಾಣ ಹೆಚ್ಚಾಗಿದೆ. ಮನೆಗೆ ಹೊಕ್ಕ ಗಟಾರದ ನೀರನ್ನು ಹೊರಗೆ ಹಾಕಲಾಗುತ್ತಿದೆ. ಮಣ್ಣು ತೆಗೆದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡುತ್ತೇವೆ. – | ಶಂಭುಲಿಂಗ ಹೊಸಮನಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts