More

    ರೈಲ್ವೆ ಸ್ಟೇಶನ್​​ನಲ್ಲಿ ಡಿಆರ್​ಐ ಬಳಿ ಸಿಕ್ಕಿಬಿದ್ದ ಸ್ಮಗ್ಲರ್ಸ್​; 43 ಕೋಟಿ ರೂ.ಮೌಲ್ಯದ ಚಿನ್ನ ವಶ

    ನವದೆಹಲಿ: ಕಳ್ಳ ಸಾಗಣೆ ಮಾಡಲಾಗುತ್ತಿದ್ದ 43 ಕೋಟಿ ರೂ.ಮೌಲ್ಯದ 504 ಚಿನ್ನದ ಗಟ್ಟಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಶುಕ್ರವಾರ ವಶಪಡಿಸಿಕೊಂಡಿದ್ದು, ಎಂಟು ಜನರನ್ನು ಬಂಧಿಸಿದೆ. ಈ ಚಿನ್ನದ ಗಟ್ಟಿಗಳು ವಿದೇಶಿ ಮೂಲದ್ದು ಎಂದು ಮಾಹಿತಿ ನೀಡಿದೆ.

    ಇಲ್ಲಿಯವರೆಗೆ ವಶಪಡಿಸಿಕೊಂಡ ಚಿನ್ನದ ಸರಕುಗಳಲ್ಲಿ, ಇದೇ ಅತಿ ಹೆಚ್ಚು ಮೌಲ್ಯದ್ದು ಎಂದು ಡಿಆರ್​ಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.

    ಶುಕ್ರವಾರ ಡಿಬ್ರುಗಢ್​-ನವದೆಹಲಿ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ಬಂದ ಎಂಟು ಮಂದಿಯ ಬಳಿ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದರು. ಹಾಗೇ ನಕಲಿ ಆಧಾರ್​ ಕಾರ್ಡ್​ ಹೊಂದಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 4 ತಿಂಗಳಲ್ಲಿ 61 ಗರ್ಭಿಣಿಯರು, 877 ಶಿಶುಗಳ ಮರಣ…; ಆತಂಕಕಾರಿ ವರದಿ

    ಇದೀಗ ವಶಪಡಿಸಿಕೊಳ್ಳಲಾದ ಚಿನ್ನದ ಗಟ್ಟಿಗಳು ಶೇ.99.9ರಷ್ಟು ಅಸಲಿ. ಒಟ್ಟಾರೆ 83.621 ಕೆ.ಜಿ ತೂಕ ಹೊಂದಿವೆ. ಸುಮಾರು 43 ಕೋಟಿ ರೂಪಾಯಿಯಷ್ಟು ಮಾರುಕಟ್ಟೆ ಬೆಲೆ ಹೊಂದಿವೆ ಎಂದು ಇನ್ನೋರ್ವ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ಈ ಚಿನ್ನದ ಗಟ್ಟಿಗಳು ವಿದೇಶದಿಂದ ತರಲಾದವು. ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇವರ ಹಿಂದೆ ಇರುವ ಗ್ಯಾಂಗ್​ ಯಾವುದು. ಇವರನ್ನು ಯಾರು ದೆಹಲಿಗೆ ಕಳಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದ್ದಾರೆ.
    ಚಿನ್ನದ ಗಟ್ಟಿಗಳ ಮೇಲೆ ವಿದೇಶಿ ಗುರುತು ಇದೆ. ಮಯನ್ಮಾರ್​​ದಿಂದ ಮಣಿಪುರದ ಮೊರೇಹ್​ ಅಂತಾರಾಷ್ಟ್ರೀಯ ಭೂ ಗಡಿಯ ಮೂಲಕ ಭಾರತಕ್ಕೆ ತರಲಾಗಿದೆ ಎಂದು ಗುಪ್ತಚರ ದಳದ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಅಮ್ಮ, ಅಣ್ಣನನ್ನು ಕೊಂದ ಬಾಲಕಿ; ಮೊದಲು ವಾಶ್​ ರೂಂನಲ್ಲಿ ಮಾಡಿದ್ದೇನು? ಬೆಚ್ಚಿ ಬೀಳಿಸುವ ಡಬಲ್​ ಮರ್ಡರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts