More

    ವೈದ್ಯರ ನೆರವಿಗೆ ಧಾವಿಸಿರುವ ಡಿಆರ್‌ಡಿಒ: ಸೋಂಕು ತಗುಲದಂತೆ ಉಪಕರಣ ಶೋಧನೆ

    ನವದೆಹಲಿ: ಕರೊನಾ ವೈರಸ್‌ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಯ ದೇಹವನ್ನು ಅದು ಸೇರಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ನೆರವಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಧಾವಿಸಿದೆ.

    ರೋಗಿಗಳಿಂದ ವೈದ್ಯರಿಗೆ ಸೋಂಕು ತಗುಲದಂತೆ ಈ ಉಪಕರಣ ಸಹಾಯ ಮಾಡಲಾಗಿದೆ. ಇದನ್ನು ‘ಎನ್‌ಕ್ಲೋಸರ್ ಫಾರ್ ಇಂಟ್ಯೂಬೇಶನ್ ಪ್ರೊಸೀಜರ್ – ಏರೋಸಾಲ್ ಕಂಟೈನ್‌ಮೆಂಟ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಇದನ್ನು ಡಿಆರ್‌ಡಿಓನ ಹೈದರಾಬಾದ್‌ನ ಸಂಶೋಧನಾ ಕೇಂದ್ರ ಮತ್ತು ಚಂಡೀಗಢದ ದಿ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ ಸಹಯೋಗದಲ್ಲಿ ರೂಪಿಸಲಾಗಿದೆ.

    ಸೋಂಕಿತರು ಸೀನಿದಾಗ ಅಥವಾ ಕೆಮ್ಮಿದಾಗ ಈ ಸೋಂಕು ಸುಲಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಶರೀರ ಸೇರುತ್ತದೆ. ಈ ಉಪಕರವು ವೈದ್ಯರು ತಲೆಯಿಂದ ದೇಹದವರೆಗೆ ರಕ್ಷಣೆ ಒದಗಿಸುತ್ತದೆ. ಇದರಿಂದಾಗಿ ಯಾವುದೇ ಕಾರಣಕ್ಕೂ ಸೋಂಕಿತರು ಸೀನಿದಾಗ ಅಥವಾ ಕೆಮ್ಮಿದಾಗ ಕಣಗಳು ವೈದ್ಯರ ದೇಹದೊಳಕ್ಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ ಎಂದು ಡಿಆರ್‌ಡಿಓ ಹೇಳಿದೆ. ಇದು ಅತ್ಯಂತ ಹಗುರವಾಗಿರುವ ಉಪಕರಣವಾಗಿದ್ದು, ಯಾವುದೇ ಕಾರಣಕ್ಕೂ ವೈದ್ಯರಿಗೆ ಭಾರ ಎನಿಸುವುದಿಲ್ಲ ಎಂದು ಅದು ಹೇಳಿದೆ. (ಏಜೆನ್ಸೀಸ್‌)

    ಮತ್ತೊಮ್ಮೆ ವಿಶ್ವದ ಗಮನ ಸೆಳೆದ ಭಾರತ: ರಾಷ್ಟ್ರಪತಿ, ಪ್ರಧಾನಿಯ ಟ್ವಿಟರ್‌ ಖಾತೆ ಫಾಲೋ ಮಾಡುತ್ತಿರುವ ಶ್ವೇತ ಭವನ

    ಇಪಿಎಫ್​ನಿಂದ ಹತ್ತೇ ದಿನದಲ್ಲಿ 280 ಕೋಟಿ ರೂ. ವಿತ್​ಡ್ರಾ: ಕೇಂದ್ರದ ನಿರ್ಧಾರದಿಂದ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಬಿಗ್​ ರಿಲೀಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts