More

    ರಕ್ತದಾನದಿಂದ ಜೀವ ರಕ್ಷಣೆಯ ಪುಣ್ಯ

    ಕಾರ್ಕಳ: ರಕ್ತದಾನ ಶ್ರೇಷ್ಠ ಕಾರ್ಯ. ಇದರಿಂದ ಇನ್ನೊಬ್ಬರ ಜೀವ ಉಳಿಸಿದ ಪುಣ್ಯ ದೊರೆಯುತ್ತದೆ ಎಂದು ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗ ಮುಖ್ಯಸ್ಥೆ ಡಾ.ವೀಣಾಕುಮಾರಿ ಹೇಳಿದರು.

    ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗ ಸಹಯೋಗದಲ್ಲಿ ಕೊಳಕೆ ಇರ್ವತ್ತೂರು ಬೆಳಕು ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಸ ಪ.ಪೂ ಕಾಲೇಜು ಸಾಣೂರು, ಯುವವಾಹಿನಿ ಕಾರ್ಕಳ ಘಟಕ, ಮುರತ್ತಂಗಡಿ ಬಾಲಾಂಜನೆಯ ಯುವಕ ಸಂಘ ಆಶ್ರಯದಲ್ಲಿ ರಕ್ತದಾನ ಶಿಬಿರ ಮತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯೋಧ ಹವಾಲ್ದಾರ್ ತಿಲಕ್ ಎಸ್.ಪಿ ಶಿಬಿರ ಉದ್ಘಾಟಿಸಿದರು. ಬೆಳಕು ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ಅಕ್ಷತಾ ಅಧ್ಯಕ್ಷತೆ ವಹಿಸಿದರು. ಟ್ರಸ್ಟ್ ವೆಬ್‌ಸೈಟನ್ನು ಸ.ಪ.ಪೂ ಕಾಲೇಜಿನ ಪ್ರಾಂಶುಪಾಲೆ ಸುಚೇತಾ ಕಾಮತ್ ಅನಾವರಣಗೊಳಿಸಿದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಸುರೇಶ್ ನಾಯಕ್, ಪತ್ರಕರ್ತ ಬಾಲಕೃಷ್ಣ ಭೀಮಗುಳಿ, ಉದ್ಯಮಿ ಶಶಿಕಾಂತ್ ಶೆಟ್ಟಿಗಾರ್, ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷ ಅರುಣ್ ಪೂಜಾರಿ, ಬಾಲಾಂಜನೆಯ ಯುವಕ ಸಂಘದ ಅಧ್ಯಕ್ಷ ಮಾಧವ ಭಂಡಾರ್ಕರ್, ಸಂಜೀವಿನಿ ಫೌಂಡೇಶನ್ ಜತೆ ಕಾರ್ಯದರ್ಶಿ ಸುಧೀರ್ ಪೂಜಾರಿ, ಟ್ರಸ್ಟಿಗಳಾದ ಮೋಹನ್ ಜೈನ್, ಸುರೇಶ್, ಚೇತನಾ ಉಪಸ್ಥಿತರಿದ್ದರು.

    ಹರೀಶ್ ವರದಿ ವಾಚಿಸಿದರು. ಭರತ್ ಪೂಜಾರಿ ಸ್ವಾಗತಿಸಿದರು. ಸತೀಶ್ ಮಾಂಟ್ರಾಡಿ ವಂದಿಸಿದರು. ಬೆಳಕು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts