More

    ಗಂಗೂಲಿ, ದ್ರಾವಿಡ್ ವಿರುದ್ಧ ವೃದ್ಧಿಮಾನ್ ಸಾಹ ಅಸಮಾಧಾನ

    ನವದೆಹಲಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಕಡೆಗಣಿಸಲ್ಪಟ್ಟ ಬೆನ್ನಲ್ಲೇ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

    ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಕಾನ್ಪುರ ಟೆಸ್ಟ್ ಬಳಿಕ ದಾದಾ (ಗಂಗೂಲಿ), ‘ನಾನು ಬಿಸಿಸಿಐನಲ್ಲಿರುವವರೆಗೆ, ನಿನ್ನ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳಬೇಡ’ ಎಂದಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ಎಲ್ಲವೂ ಬದಲಾಗಿದ್ದು ಆಘಾತ ತಂದಿದೆ ಎಂದು 37 ವರ್ಷದ ಸಾಹ ಹೇಳಿದ್ದಾರೆ.

    ಇನ್ನು ದ್ರಾವಿಡ್ ಅವರನ್ನು ತಂಡದಿಂದ ಕೈಬಿಡುತ್ತಿರುವ ಬಗ್ಗೆ ನನಗೆ ಕರೆ ಮಾಡಿ ತಿಳಿಸಿದರು. ನಿವೃತ್ತಿ ಬಗ್ಗೆ ಚಿಂತಿಸುವಂತೆಯೂ ಸೂಚಿಸಿದರು. ನನ್ನ ವಯಸ್ಸು ಅಥವಾ ನಿರ್ವಹಣೆ ಇದಕ್ಕೆ ಕಾರಣವೇ ಎಂದು ಪ್ರಶ್ನಿಸಿದಾಗ ಅವರು, ಆಯ್ಕೆಗಾರರು ಯುವ ಪ್ರತಿಭೆಯತ್ತ ಗಮನಹರಿಸಿದ್ದಾರೆ ಎಂದರು. ಆದರೆ ನನ್ನಲ್ಲಿನ್ನೂ ಕೆಲ ವರ್ಷಗಳ ಕ್ರಿಕೆಟ್ ಉಳಿದಿದೆ ಎಂದೆ. ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಕೂಡ ನನ್ನನ್ನು ಇನ್ನು ಆಯ್ಕೆಗೆ ಪರಿಗಣಿಸುವುದಿಲ್ಲ ಎಂದಿದ್ದಾರೆ ಎಂದು ಭಾರತ ಪರ 40 ಟೆಸ್ಟ್‌ಗಳಲ್ಲಿ 3 ಶತಕ ಸಹಿತ 1,353 ರನ್ ಗಳಿಸಿರುವ ಮತ್ತು 92 ಕ್ಯಾಚ್, 12 ಸ್ಟಂಪಿಂಗ್ ಸಹಿತ 104 ಬಲಿ ಪಡೆದಿರುವ ಸಾಹ ಹೇಳಿದ್ದಾರೆ.

    ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts