More

    ದೊಡ್ಡಮೋರಿ ವಿಸ್ತರಣೆಯಾಗದಿದ್ದರೆ ನೀರು ಪೂರೈಕೆ ಸ್ಥಗಿತ: ಸಾವಯವ ಕೃಷಿಕರ ಸಂಘದ ಎಚ್ಚರಿಕೆ

    ಮಳವಳ್ಳಿ: ಪಟ್ಟಣದ ಅನಂತ್ ರಾಮ್ ವೃತ್ತದಲ್ಲಿ ಮದ್ದೂರು-ಕೊಳ್ಳೇಗಾಲ ಮುಖ್ಯರಸ್ತೆ ನಡುವೆ ಹಾದು ಹೋಗಿರುವ ದೊಡ್ಡಮೋರಿ ವಿಸ್ತರಣೆ ಮಾಡಿಸದಿದ್ದರೆ ಮದ್ದೂರು ಪಟ್ಟಣಕ್ಕೆ ನೀರು ಪೂರೈಕೆ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು ಎಂದು ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.
    ತಾಲೂಕು ಕಚೇರಿಗೆ ನೂರಕ್ಕೂ ಹೆಚ್ಚು ನಾಗರಿಕರೊಡನೆ ತೆರಳಿ ತಹಸೀಲ್ದಾರ್ ಎಂ.ವಿಜಯಣ್ಣ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ಕಾವೇರಿ ನದಿಯಿಂದ ಪಟ್ಟಣ ಮಾರ್ಗವಾಗಿ ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲಾಗಿದೆ. ಈ ಕಾಮಗಾರಿ ವೇಳೆ ಅನಂತರಾಮ್ ವೃತ್ತದಲ್ಲಿ ದೊಡ್ಡ ಮೋರಿ ಬಳಿ ಕುಡಿಯುವ ನೀರಿನ ಪೈಪ್‌ಗಳನ್ನು ಮೇಲ್ಭಾಗಕ್ಕೆ ಅಳವಡಿಸಲಾಗಿದೆ. ಮಳೆ ಬಂದ ಸಂದರ್ಭದಲ್ಲಿ ಪಟ್ಟಣದ ಮೇಲ್ಭ್ಬಾಗದಿಂದ ಹರಿದು ಕೊಳಚೆ ನೀರು ಸರಾಗವಾಗಿ ಹೋಗಲಾಗದೆ ರಸ್ತೆಯ ಮೇಲೆ ಹರಿಯುತ್ತದೆ. ಈ ವೇಳೆ ಸುತ್ತಲಿನ ಪ್ರದೇಶದಲ್ಲಿರುವ ಶಾಲಾ-ಕಾಲೇಜು, ದೂರಸಂಪರ್ಕ ಇಲಾಖೆ, ಅಂಚೆ ಕಚೇರಿ ಸೇರಿದಂತೆ ಹತ್ತಾರು ವಾಣಿಜ್ಯ ಮಳಿಗೆಗಳ ಕಟ್ಟಡಗಳು ಜಲಾವೃತವಾಗುತ್ತಿವೆ. ಇದರಿಂದ ವರ್ತಕರಿಗೆ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳು ಹಾನಿಯಾಗುತ್ತಿರುವುದು ಒಂದೆಡೆಯಾದರೆ, ವಿದ್ಯಾರ್ಥಿಗಳಿಗೆ ರಜೆ ನೀಡಿ ಮನೆಗೆ ಕಳುಹಿಸುವಂತಾಗಿದೆ ಎಂದು ದೂರಿದರು.
    ವರ್ತಕರಾದ ಶಿವಲಿಂಗೇಗೌಡ, ಅಣ್ಣೇಗೌಡ, ರವಿ, ಸುರೇಶ್, ನಿವೃತ್ತ ಶಿಕ್ಷಕ ಶಿವಲಿಂಗೇಗೌಡ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts