More

    ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್

    ಬೆಂಗಳೂರು: ಕನ್ನಡದ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರ ಅಕಾಲಿಕ ಮರಣವನ್ನು ಕನ್ನಡಿಗರು ಇನ್ನೂ ಅರಗಿಸಿಕೊಳ್ಳು ಸಾಧ್ಯವಾಗುತ್ತಿಲ್ಲ. ನಟ ಪುನೀತ್ ಅವರ ನಿಧನದಿಂದ ಅವರ ಮೇಲಿನ ಅಭಿಮಾನ ಅವರ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆಯೇ ಹೊರತು ಒಂದು ಚುರು ಕಡಿಮೆಯಾಗಿಲ್ಲ. ಪ್ರತಿದಿನ ಅಪ್ಪು ಅವರನ್ನು ನೆನೆದು ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ಇನ್ನು, ಅಪ್ಪು ಅವರ ಮೇಲಿರುವ ಅಭಿಮಾನವನ್ನು ಅವರ ಅಭಿಮಾನಿಗಳು ಹಲವಾರು ರೀತಿಗಳಲ್ಲಿ ತೋರಿಸಲು ಆರಂಭಿಸಿದ್ದಾರೆ. ಕೆಲವರು ಪುನೀತ್ ಅವರ ದಾರಿಯಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.
    ಉಳಿದವರು ಅಪ್ಪು ಅವರಿಗೆ ಹಲವು ರೀತಿಗಳಲ್ಲಿ ವಿಶೇಷ ಗೌರವ ಸಲ್ಲಿಸುತ್ತಿದ್ದಾರೆ. ಅಲ್ಲದೆ ಅನೇಕ ಅಭಿಮಾನಿಗಳು ಅಪ್ಪು ಅವರ 3 ಡಿ ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಏರಿಯಾಗಳಿಗೆ, ರಸ್ತೆಗಳಿಗೆ, ವೃತ್ತಗಳಿಗೆ ಅಪ್ಪು ಅವರ ಹೆಸರನ್ನು ನಾಮಕರಣ ಮಾಡುತ್ತಿದ್ದಾರೆ. ಇದೇ ರೀತಿ, ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್​ನಲ್ಲಿ ಅಪ್ಪು ಅವರ ಒಂದು ಪ್ರತಿಮೆಯನ್ನು ಇರಿಸಲಾಗಿದೆ. ಆದರೆ, ಈ ಪ್ರತಿಮೆ ಬೇರೆ ಪ್ರತಿಮೆಗಳಂತೆ ಅಲ್ಲ. ಕಾರಣ, ಅಭಿಮಾನಿಗಳ ದೇವರಾದ ಅಪ್ಪು ಅವರ ಪ್ರತಿಮೆ ಇದೇ ಮೊದಲ ಬಾರಿಗೆ ಅವರ ತಂದೆ ಅಣ್ಣಾವ್ರ ಪ್ರತಿಮೆಯ ಜತೆಗೆ ಒಟ್ಟಿಗೆ ಇರಿಸಲಾಗಿದೆ.
    ಅಂದಹಾಗೆ, ಇದೇ ಪ್ರಥಮ ಬಾರಿಗೆ ಅಪ್ಪು ಅವರ ಪ್ರತಿಮೆಯನ್ನು ಅವರ ತಂದೆಯ ಪ್ರತಿಮೆಯ ಜತೆಗೆ ಒಟ್ಟಿಗೆ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಪ್ರತಿಮೆಗಳನ್ನು ಮಾಡಿದವರ ಹೆಸರು ಶಿವಕುಮಾರ್. ಇವರು ಬೆಂಗಳೂರಿನವರು. ಸದ್ಯ, ಡಾ.ರಾಜ್​ಕುಮಾರ್ ಹಾಗೂ ಡಾ.ಪುನೀತ್ ರಾಜ್​ಕುಮಾರ್ ಅವರ ಪ್ರತಿಮೆಗಳನ್ನು ಒಟ್ಟಿಗೆ ಕಂಡ ರಾಜ್ ಕುಟುಂಬದ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಜತೆಗೆ, ಇಬ್ಬರ ಪ್ರತಿಮೆಗಳು ಒಟ್ಟಿಗೆ ಇರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ

    ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್ ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್ ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್ ಪ್ರಥಮ ಬಾರಿಗೆ ಡಾ.ರಾಜ್​, ಪುನೀತ್ ಪ್ರತಿಮೆಗಳನ್ನು ಒಟ್ಟಿಗೆ ಕಂಡ ಅಭಿಮಾನಿಗಳು! ಫೋಟೋಗಳು ವೈರಲ್

    ಆರ್​ಆರ್​ಆರ್ ನೋಡಲು ಬಂದ ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಮನಕಲಕುತ್ತೆ!

    ಅತಿ ಆಸೆ ಗತಿ ಗೆಡಿಸುತ್ತೆ… ಥಿಯೇಟರ್​ನವರಿಗೆ ಟಾಂಗ್ ಕೊಟ್ಟ ಶಿವಣ್ಣ!

    ರಕ್ತದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಪೋಸ್ಟರ್​ ಬಿಡಿಸಿದ ಮಹಿಳೆ! ಆ ಮಹಿಳೆಯ ನಂಬರ್ ಕೇಳಿದ ವಿವೇಕ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts