More

    ದೆಹಲಿ ಹಿಂಸಾಚಾರದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೂ ಹಾನಿ! ವರನಟ ಡಾ. ರಾಜ್​ಕುಮಾರ್​ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳು

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಂಗಳವಾರದಂದು ನಡೆದ ಹಿಂಸಾಚಾರದಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನಿಸಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಕೇವಲ ರಾಷ್ಟ್ರ ಧ್ವಜಕ್ಕಷ್ಟೇ ಅಲ್ಲದೆ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಂಡ ಕರ್ನಾಟಕದ ಸ್ತಬ್ಧ ಚಿತ್ರಕ್ಕೂ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದಾರೆ.

    ಇದನ್ನೂ ಓದಿ: ‘ಈ ರೀತಿ ಹೋರಾಡಲು ನಮ್ಮಿಂದ ಸಾಧ್ಯವಿಲ್ಲ’ ಹೋರಾಟದಿಂದ ಹಿಂದೆ ಸರಿದ ರೈತ ಸಂಘಟನೆಗಳು

    ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ವರನಟ ಡಾ. ರಾಜ್​ಕುಮಾರ್​ ಇದ್ದ ಸ್ತಬ್ಧ ಚಿತ್ರಕ್ಕೆ ಹಾನಿ ಮಾಡಲಾಗಿದೆ. ರಾಜ್​ಕುಮಾರ್​ ಪ್ರತಿಮೆಯನ್ನು ಕೆಳಗೆ ಬೀಳಿಸಿ ವಿರೂಪಗೊಳಿಸಲಾಗಿದೆ. ಹಾನಿಗೊಂಡಿರುವ ಸ್ತಬ್ಧ ಚಿತ್ರದ ವಿಡಿಯೋ ಇದೀಗ ದಿಗ್ವಿಜಯ ವಾಹಿನಿಗೆ ಲಭ್ಯವಾಗಿದೆ.

    ಇದನ್ನೂ ಓದಿ: 3 ದಿನಗಳ ಹಿಂದೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದಿದ್ದವ ರೈತ ಹೋರಾಟಕ್ಕೆ ಬಲಿಯಾದ!

    ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್​ ರ್ಯಾಲಿ ನಡೆಸಲು ರೈತರಿಗೆ ಅನುಮತಿ ನೀಡಲಾಗಿತ್ತು. ಒಂದು ಟ್ರ್ಯಾಕ್ಟರ್​ನಲ್ಲಿ ಮೂವರು ಕುಳಿತು ಶಾಂತಿಯುತವಾಗಿ ರ್ಯಾಲಿ ನಡೆಸಲು ಅನುಮತಿ ಇತ್ತು. ಆದರೆ ಪ್ರತಿಭಟನೆ ಬೇರೆಯದ್ದೇ ರೂಪ ತಾಳಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತ ಹೋರಾಟಗಾರರ, ಸಾಕಷ್ಟು ಸಾರ್ವಜನಿಕ ಆಸ್ಥಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು, 80ಕ್ಕೂ ಹೆಚ್ಚು ಪೊಲೀಸರು ಆಸ್ಪತ್ರೆ ಸೇರುವಂತಾಗಿದೆ. ಕಿಡಿಗೇಡಿಗಳು ಮಾಡಿರುವ ದಾಳಿಯ ಪರಿಣಾಮದ ವಿಡಿಯೋಗಳು ಒಂದೊಂದಾಗಿ ಲಭ್ಯವಾಗುತ್ತಿವೆ.

    ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts