More

    ಈ ವರ್ಷ ರಾಜ್ ಉತ್ಸವ ಇಲ್ಲ … ಮೊದಲ ಬಾರಿಗೆ ಮಿಸ್ ಆಗುತ್ತಿದೆ ಸಂಭ್ರಮ

    ಏಪ್ರಿಲ್ ತಿಂಗಳೆಂದರೆ ಕನ್ನಡಿಗರ ಪಾಲಿಗೆ ಅದು ಡಾ. ರಾಜ್ ತಿಂಗಳು ಎಂದೇ ಅರ್ಥ. ಮೊದಲೆಲ್ಲಾ ಏಪ್ರಿಲ್ 24ರಂದು ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಏಪ್ರಿಲ್ 12ರಂದು ಅವರು ನಿಧನರಾದಾಗ, ಪ್ರತಿ ವರ್ಷ ಆ ದಿನದಂದೂ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿತ್ತು. ಆದರೆ, ಕರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಈ ಬಾರಿ ಏಪ್ರಿಲ್ 12ರಂದು ಇಡೀ ಕರ್ನಾಟಕದಲ್ಲಿ ಡಾ. ರಾಜಕುಮಾರ್ ಅವರ ಪುಣ್ಯ ಸ್ಮರಣೆ ಇರುವುದಿಲ್ಲ. ಇನ್ನು ಲಾಕ್‌ಡೌನ್ ಮೇ ಒಂದರವರೆಗೂ ಮುಂದುವರೆಯುವುದು ಪಕ್ಕಾ ಆಗಿದೆ. ಹಾಗಾಗಿ, ಏಪ್ರಿಲ್ 24ರಂದು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನೂ ಆಚರಿಸುವಂತಿಲ್ಲ.

    ಹೌದು, ಈ ವರ್ಷ ಬಹಿರಂಗವಾಗಿ ಡಾ. ರಾಜ್ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆ ಬಹುತೇಕ ಸಂಶಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಏಪ್ರಿಲ್ 12 ಮತ್ತು 24ರಂದು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜಕುಮಾರ್ ಅವರ ಪುಣ್ಯಭೂಮಿಗೆ ಅವರ ಕುಟುಂಬದವರು ಭೇಟಿ ಕೊಟ್ಟು ಪೂಜೆ ಸಲ್ಲಿಸುತ್ತಿದ್ದರು. ಇನ್ನು ಡಾ. ರಾಜಕುಮಾರ್ ಅವರ ಸಾವಿರಾರು ಅಭಿಮಾನಿಗಳು ಅಲ್ಲಿ ಸೇರುತ್ತಿದ್ದರು. ಬರೀ ಡಾ. ರಾಜ್ ಪುಣ್ಯಭೂಮಿಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಡಾ. ರಾಜ್ ಅವರ ಅಭಿಮಾನಿಗಳು ಸೇರಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಿದ್ದರು. ಹಲವು ಶಿಬಿರಗಳನ್ನು ಆಯೋಜಿಸುತ್ತಾ, ಡಾ. ರಾಜ್ ಹೆಸರಲ್ಲಿ ಅನ್ನದಾನ ಮಾಡುತ್ತಾ, ತಮ್ಮದೇ ರೀತಿಯಲ್ಲಿ ರಾಜ್‌ಕುಮಾರ್ ಅವರನ್ನು ನೆನೆಯುತ್ತಿದ್ದರು. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದು ಮಿಸ್ ಆಗುವ ಸಾಧ್ಯತೆ ಇದೆ.

    ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ, ಡಾ. ರಾಜ್ ಅವರ ನಮನ ಇಡೀ ತಿಂಗಳು ನಡೆಯುತಿತ್ತು. ಆದರೆ, ಕರೊನಾ ಮತ್ತು ಲಾಕ್‌ಡೌನ್ ಆವರಿಸಿಕೊಂಡಿರುವದರಿಂದ, ಸದ್ಯಕ್ಕೆ ಅಲ್ಲೂ ಸಂಭ್ರಮ ಕಾಣುತ್ತಿಲ್ಲ.

    ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts