More

  ನಿಷ್ಠೆಯಿಂದ ಕಾಯಕ ಮಾಡಿ

  ಹೂವಿನಹಡಗಲಿ: ಕಾಯಕ ನಿಷ್ಠೆಯಿಂದ ಮನುಷ್ಯನಲ್ಲಿ ಸಾಧಿಸುವ ಶಕ್ತಿ ಬರಲಿದೆ ಎಂದು ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
  ಪಟ್ಟಣದ ಗವಿಮಠದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ 184ನೇ ಶಿವಾನುಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

  ಕಾಯಕದ ಮೇಲೆ ಗೌರವ ಭಾವನೆ ಇರಲಿ

  ಕಾಯಕದ ಮೇಲೆ ಗೌರವ ಭಾವನೆಯನ್ನು ಹೊಂದಬೇಕು. ನಿಷ್ಠೆಯಿಂದ ನಿರಂತರವಾಗಿ ಮಾಡಿದ ಕಾಯಕ ವೃತ್ತಿ ಗೌರವ ಜತೆಗೆ ಮಾನಸಿಕ ಶಕ್ತಿ ಹೆಚ್ಚಿಸುತ್ತದೆ. ಬದುಕಿನ ಜಂಜಾಟಗಳಿಂದ ಮನುಷ್ಯ ಹಲವಾರು ಗೊಂದಲಕ್ಕೆ ಒಳಗಾಗುತ್ತಿದ್ದಾನೆ. ಸಂಕಷ್ಟಗಳಿಂದ ದೂರ ಉಳಿಯಲು ಕಾಯಕದ ಮೇಲೆ ನಿಷ್ಠೆ ತೋರಬೇಕು ಎಂದರು.

  ಇದನ್ನೂ ಓದಿ:

  ನಿಡಗುಂದಿ ಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ನಾವೆಲ್ಲರೂ ದೈವತ್ವದ ಮೇಲೆ ಹೆಚ್ಚಿನ ನಂಬಿಕೆ ಇಡಬೇಕು. ಪರಮಾತ್ಮನ ಸಂವಿಧಾನದ ಮುಂದೆ ಎಲ್ಲವೂ ಶೂನ್ಯವಾಗಿದೆ ಎಂದರು.
  ನಿವೃತ್ತ ಪ್ರಾಚಾರ್ಯ ಪರಮೇಶ್ವರಪ್ಪ ಮಾತನಾಡಿದರು. ಜಕಣಾಚಾರ್ಯ ಪ್ರಶಸ್ತಿ ಲಭಿಸಿದ ಶಿಲ್ಪಿ ಹಂಸಾನಂದಾಚಾರ್ಯ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಿವೃತ್ತ ಇಂಜಿನಿಯರ್ ಹರೀಶ್ವರಯ್ಯ, ನಿವೃತ್ತ ಹಿರಿಯ ಲೆಕ್ಕಾಧಿಕಾರಿ ಸುರೇಶ ಇಟ್ಟಿಗಿಮಠ, ಉಪನ್ಯಾಸಕರಾದ ಡಾ.ಅಶೋಕ, ಸಂಗೀತ ಹಿರೇಮಠ, ಶಿಕ್ಷಕರಾದ ಬನ್ನೆಪ್ಪ, ನಿಂಗಪ್ಪ, ಜಿ.ಎಸ್.ಸತೀಶ್ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 28

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts