ಕೊಪ್ಪಳ: ಅಂಗವಿಕಲತೆ ಬಂಡವಾಳವಾಗದಿರಲಿ. ಸವಾಲಾಗಿ ತೆಗೆದುಕೊಳ್ಳಿ. ಅಂದಾಗ ಸಾಧನೆ ಮಾಡಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಘನಶ್ಯಾಮ ಕಿವಿಮಾತು ಹೇಳಿದರು.
ನಗರದ ಗವಿಮಠದಲ್ಲಿ 21 ಜೋಡಿ ವಿಶೇಷ ಚೇತನರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾನುವಾರ ಮಾತನಾಡಿದರು.
ಸಮಾಜ ನಮ್ಮನ್ನು ಕುಂಟ, ಕುರುಡ ಎಂದೆಲ್ಲ ಕರೆಯುತ್ತದೆ. ಇತ್ತೀಚೆಗೆ ಅಂಗವಿಕಲ ಪದ ಬದಲಾಗಿ ವಿಕಲ ಚೇತನ, ವಿಶೇಷ ಚೇತನ ಪದದಿಂದ ಕರೆಯುತ್ತಿದ್ದಾರೆ. ನಮ್ಮ ದೌರ್ಬಲ್ಯ ಬಗ್ಗೆ ಚಿಂತಿಸದೆ, ಶಕ್ತಿ ಉಪಯೋಗಿಸಿಕೊಂಡು ಸಾಧನೆ ಮಾಡಬೇಕು. ಸಮಾಜವು ನಮ್ಮನ್ನು ಕೀಳಾಗಿ ಕಾಣದೆ ಬೆಂಬಲ ನೀಡಬೇಕು. ಕೈ&ಕಾಲು ಇದ್ದವರಿಗೆ ಮದುವೆ ಆಗುವುದು ಕಷ್ಟವಿದೆ.
ಆದರೆ, ಗವಿಶ್ರೀಗಳು ಅಂಗವಿಕಲರಿಗೆ ಮದುವೆ ಮಾಡಿಸುತ್ತಿರುವುದು ಶ್ಲಾನೀಯ. ಎಷ್ಟೇ ಕಷ್ಟ ಬಂದರೂ ವಿಚ್ಛೇಧನ ಪಡೆಯದಿರಿ. ದೇವವರು ನಮಗೆ ಕೆಲ ಅಂಗ ಕಿತ್ತುಕೊಂಡರು ವಿಶೇಷ ಶಕ್ತಿ ಕೊಟ್ಟಿದ್ದಾನೆ. ಜಾನ್ ಕ್ಲಿಂಟನ್, ವಿಲಿಯಂ ಶೇಕ್ಸ್ ಫಿಯರ್, ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿ ಅನೇಕರು ನಮಗೆಲ್ಲ ಮಾದರಿ ಆಗಲಿ ಎಂದರು.
ನಾನು ಕೊಪ್ಪಳದವಳು. ಶ್ರೀಗಳ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿರುವೆ. ಇಂದು ಅಧಿಕಾರಿಯಾಗಿ ಇದೇ ಜಿಲ್ಲೆಗೆ ಬಂದಿರುವೆ. ಮದುವೆ ಆಗುವ ಶ್ರವಣ ನೂನ್ಯತೆಯುಳ್ಳ ಮೂರು ಜೋಡಿಗಳಿಗೆ ಹೊಲಿಗೆ ಯಂತ್ರ, ಐದು ಜೋಡಿಗಳಿಗೆ 50 ಸಾವಿರ ರೂ. ಪ್ರೋತ್ಸಾಹಧನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಶ್ರೀದೇವಿ ನಿಡಗುಂದಿ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೊಪ್ಪಳ.
ನಮ್ಮ ಇಲಾಖೆ ಎಲ್ಲ ವರ್ಗದ ಜನರಿಗಾಗಿ ಕೆಲಸ ಮಾಡುತ್ತದೆ. ಇಂಥ ಇಲಾಖೆ ಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಒದಗಿದೆ. ನಿಸರ್ಗದ ಮಡಿಲಲ್ಲಿ ವಿಶೇಷ ಚೇತನರ ಮದುವೆ ಆಗುತ್ತಿರುವುದು ವಿಶೇಷ. ಶ್ರೀಗಳ ಕಾರ್ಯ ಶ್ಲಾಘನೀಯ.
ತಿಪ್ಪಣ್ಣ ಸಿರಸಗಿ. ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೊಪ್ಪಳ.
ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಒಮ್ಮೆ ಟಿಸುವ ಖುಷಿ ಕ್ಷಣ. ಸೆಲ್ಕೋ ಕಂಪನಿಯು ಸೌರಶಕ್ತಿ ಮೂಲಕ ಇಂಧನ ಉತ್ಪಾದನೆ ಮಾಡುವ ಜತೆಗೆ ಬಡತನ ನಿಮೂರ್ಲನೆಗೆ ಅದರ ಸಂಪನ್ಮೂಲ ಬಳಸಿಕೊಳ್ಳುವ ಧ್ಯೇಯ ಹೊಂದಿದೆ. ಇದರೊಂದಿಗೆ ಶಿಕ್ಷಣ, ಆರೋಗ್ಯ ಚಟುವಟಿಕೆಗಳಿಗೆ ನಮ್ಮ ಸಂಸ್ಥೆ ಸೇವೆ ಸಲ್ಲಿಸುತ್ತಿದೆ.
ಮಂಜುನಾಥ ಭಾಗವತ. ಸೆಲ್ಕೋ ಕಂಪನಿ ವಲಯ ವ್ಯವಸ್ಥಾಪಕ.