ಗಾಂಧಿ ಬಳಗದ ಕಾರ್ಯಕರ್ತರಿಂದ ಗವಿಮಠ ಆವರಣ ಸ್ವಚ್ಛತೆ

sweep activity in gavimattu ground done by geleyara balaga in koppal

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಗಾಂಧಿ ಬಳಗದ ಕಾರ್ಯಕರ್ತರು ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಜ.27ರಿಂದ 30ವರೆಗೆ ಗವಿಮಠ ಅಂಗಳದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿತು. ಮಂಗಳವಾರ ಹುತಾತ್ಮ ದಿನಾಚರಣೆಯನ್ನು ಸ್ವಚ್ಛತೆ ಮಾಡುವ ಮೂಲಕ ಆಚರಿಸಲಾಯಿತು.

ನಿತ್ಯ ಬೆಳಗ್ಗೆ 6 ಗಂಟೆಗೆ ಬಗದ ಸದಸ್ಯರು ಹಾಜರಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದರು. ಬಳಿಕ ಸ್ಥಳದಲ್ಲೇ ಗಾಂಧಿ ಹುತಾತ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಉಪನ್ಯಾಸಕ ಬಸವರಾಜ ಸವಡಿ ಮಾತನಾಡಿ, ಗಾಂಧೀಜಿಯವರನ್ನು ವಿರೋಧಿಸುವವರು ಸಿಗಬಹುದು. ಆದರೆ, ಗಾಂಧಿ ಚಿಂತನೆಗಳನ್ನಲ್ಲ. ಅವರ ಸರಳತೆ ಆಚರಣೆಗಳನ್ನು ನಾವೆಲ್ಲಾ ಅಳವಡಿಸಿಕೊಳ್ಳಬೇಕು ಗಾಂಧೀಜಿ ಚಿಂತನೆಗಳು ಸರ್ವಕಾಲಕ್ಕೂ ಶ್ರೇಷ್ಠ ಎಂದರು.

ಬಳಗದ ಸದಸ್ಯರಾದ ಪ್ರಕಾಶಗೌಡ, ಅಮರದೀಪ ಪಿ.ಎಸ್​, ಸೋಮಲಿಂಗಪ್ಪ ಮೆಣಸಿನಕಾಯಿ, ಶಿವಪ್ಪ ಜೋಗಿ, ನಾಗರಾಜನಾಯಕ ಡೊಳ್ಳಿನ, ಹೊಳಿಬಸಯ್ಯ, ಹನುಮಂತಪ್ಪ ಕುರಿ, ದುರಗಪ್ಪ, ರಾಮಣ್ಣ ಶ್ಯಾವಿ, ಜಗದೀಶ ಹಳ್ಳಿಕೇರಿ ಮಾತನಾಡಿದರು. ಗಾಯಕ ಯೋಗಾನರಸಿಂಹ ಪಿ.ಕೆ. “ರಘುಪತಿ ರಾವ ರಾಜಾರಾಂ’ ಸರ್ವಧರ್ಮ ಭಜನ್​ ಹಾಡಿದರು. ಪ್ರಾಣೇಶ ಪೂಜಾರ, ನಾಗರಾಜ ಜುಮ್ಮನ್ನವರ, ವಿರೇಶ ಮೇಟಿ, ಕಿರಣಕುಮಾರ, ಬಾಳಪ್ಪ ಕಾಳೆ, ಸುರೇಶ ಕಂಬಳಿ, ಮಂಜುನಾಥ ಕುದುರಿ, ನಿಂಗಪ್ಪ ಕಂಬಳಿ, ಯಲ್ಲಪ್ಪ, ನಾಗರಾಜ ಕುಷ್ಟಗಿ, ಯಮನೂರಪ್ಪ, ಹುಲಗಪ್ಪ ಕಟ್ಟಿಮನಿ ಇತರರಿದ್ದರು.

ಜಿಲ್ಲಾಡಳಿತದಿಂದ ಮೌನಾಚರಣೆ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಮಂಗಳವಾರ ಜಿಲ್ಲಾಡಳಿತದಿಂದ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಲಿನ್​ ಅತುಲ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ., ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಇತರ ಅಧಿಕಾರಿಗಳಿದ್ದರು.

ಗಾಂಧಿ ಬಳಗದ ಕಾರ್ಯಕರ್ತರಿಂದ ಗವಿಮಠ ಆವರಣ ಸ್ವಚ್ಛತೆ

Share This Article

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…

ನೀವು ಈ ದಿನಾಂಕಗಳಲ್ಲಿ ಹುಟ್ಟಿದ್ದೀರಾ? ಹಾಗಾದರೆ 2025ರಲ್ಲಿ ನಿಮಗೆ ಅದೃಷ್ಟೋ ಅದೃಷ್ಟ… ಹಣದ ಸುಗ್ಗಿ ಗ್ಯಾರಂಟಿ! Numerology

Numerology : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…