More

    ಡಾ. ದೇವಾನಂದ ಚವಾಣ್ ವ್ಯಂಗ್ಯ, ಕ್ಷೇತ್ರವೇ ಗೊತ್ತಿಲ್ಲದ ಬಿಜೆಪಿ ಅಭ್ಯರ್ಥಿಯಿಂದ ಮಹಾರಾಷ್ಟ್ರದಲ್ಲಿ ಪ್ರಚಾರ !

    ವಿಜಯಪುರ: ರಾಜ್ಯದ ಅವೈಜ್ಞಾನಿಕ, ಅತಿ ಉದ್ದದ ಕ್ಷೇತ್ರ ನಾಗಠಾಣದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಬ್ಬರ್ ಸ್ಟಾೃಂಪ್ ಆಗಿದ್ದರೆ, ಬಿಜೆಪಿ ಡಮ್ಮಿ ಆಗಿದೆ. ಅಸಲಿಗೆ ಬಿಜೆಪಿ ಅಭ್ಯರ್ಥಿಗೆ ಕ್ಷೇತ್ರದ ಹಳ್ಳಿಗಳ ಪರಿಚಯವೇ ಇಲ್ಲ. ಹೀಗಾಗಿ ನೆರೆಯ ಮಹಾರಾಷ್ಟ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಡಾ.ದೇವಾನಂದ ಚವಾಣ್ ವ್ಯಂಗ್ಯವಾಡಿದರು.

    ಬಿಜೆಪಿ ಅಭ್ಯರ್ಥಿಗೆ ನಾಗಠಾಣ ಕ್ಷೇತ್ರದ ಪರಿಚಯವಿಲ್ಲ. ಹೀಗಾಗಿ ಮಹಾರಾಷ್ಟ್ರದ ನಂದೂರಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ಇಂಥವರಿಂದ ಕ್ಷೇತ್ರದ ಭವಿಷ್ಯ ನಿರ್ಮಿಸಲು ಸಾಧ್ಯವೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ವ್ಯಂಗ್ಯವಾಡಿದರು.

    ನಾಗಠಾಣದಲ್ಲಿ ಜೆಡಿಎಸ್ ಪರ ಅಲೆ ಇದೆ ಎಂಬುದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಬರುತ್ತಿರುವವರ ಸಂಖ್ಯೆಯೇ ಸಾಕ್ಷಿ. ಕಾಂಗ್ರೆಸ್ ಮತ್ತು ಬಿಜೆಪಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎಂಬ ಸ್ಥಿತಿ ಇದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ದುರಬೀನು ಹಚ್ಚಿ ಹುಡುಕುವ ಸ್ಥಿತಿ ಇದ್ದರೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ಈವರೆಗೂ ಜನರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಜನ ಸ್ಪಷ್ಟ ತೀರ್ಮಾನ ಮಾಡಿದ್ದು ಜೆಡಿಎಸ್‌ಗೆ ಮತ್ತೆ ಅಧಿಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈಗಾಗಲೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಜೆಡಿಎಸ್ ಪ್ರಣಾಳಿಕೆಯನ್ನು ಜನರ ಮುಂದಿರಿಸಿದ್ದಾರೆ. ಜನ ಜೆಡಿಎಸ್ ಅಜೆಂಡಾ ಒಪ್ಪಿಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾಗಠಾಣ ಕ್ಷೇತ್ರಸಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮಂತ್ರಿ ಸ್ಥಾನ ನೀಡುವುದಾಗಿ ಕುಮಾರಣ್ಣ ನೀಡಿರುವ ಭರವಸೆ ನಾಗಠಾಣ ಕ್ಷೇತ್ರದ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ ಎಂದರು.

    ಅಭಿವೃದ್ಧಿಯೇ ಶ್ರೀರಕ್ಷೆ

    ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದೇನೆ. ಮಹಾತ್ಮ ಬಸವೇಶ್ವರರ ತತ್ವ, ಸಿದ್ದಾಂತದಡಿ ಹಾಗೂ ಜೆಡಿಎಸ್‌ನ ಜಾತ್ಯತೀತ ತತ್ವಕ್ಕೆ ಬದ್ದವಾಗಿ ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಂಡಿದ್ದಲ್ಲದೇ ಸರ್ವರ ಪ್ರಗತಿಗೆ ಕೈಲಾದ ಮಟ್ಟಿಗೆ ಶ್ರಮಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ವೇಗ ನೀಡಿದ್ದೆ. ಐತಿಹಾಸಿಕ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿದ್ದು, ನಂತರ ಬಂದ ಸರ್ಕಾರ ಅನುಷ್ಟಾನಗೊಳಿಸಲು ಸಹಕಾರಿಯಾಯಿತು. ಉಮರಾಣಿ ಬಾಂದಾರ ನಿರ್ಮಾಣ, 110 ಕೆವಿ ಸಾಮರ್ಥ್ಯದ 9 ವಿದ್ಯುತ್ ಘಟಕಗಳು, ಶಾಲಾ ಕೊಠಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರಗಳ ನಿರ್ಮಾಣ-ರಾಜ್ಯದಲ್ಲೇ ಅತಿ ಹೆಚ್ಚು ರಸ್ತೆಗಳ ಅಭಿವೃದ್ಧಿಗೊಳಿಸಲಾಗಿದೆ ಎಂದರು.

    ವೈಯಕ್ತಿಕ ನೆರವು

    ಕೋವಿಡ್ ಸಂಕಷ್ಟದಲ್ಲಿ ಕ್ಷೇತ್ರದೆಲ್ಲೆಡೆ ಆಹಾರ ಕಿಟ್ ವಿತರಣೆ ಮಾಡಿದ್ದನ್ನು, ಕೋವಿಡ್ ವಾರಿಯರ್ಸ್‌ಗೆ ನೆರವು ನೀಡಿದ್ದನ್ನು ಜನ ಸ್ಮರಿಸುತ್ತಿದ್ದಾರೆ. ಬಡ ರೋಗಿಗಳಿಗೆ ವೈಯಕ್ತಿಕ ನೆರವು, ಅನೇಕ ಪ್ರಕರಣಗಳಲ್ಲಿ ನಾನೇ ಖುದ್ದಾಗಿ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ಕೊಡಿಸಿದ್ದನ್ನು ಇದೀಗ ನೆನಪಿಸಿಕೊಂಡು ಜನ ಮತ ಚಲಾಯಿಸಲು ಉತ್ಸುಕರಾಗಿದ್ದಾರೆ. ಲಾಕ್‌ಡೌನ್ ವೇಳೆ ಮಹಾರಾಷ್ಟ್ರ-ಗೋವಾ ರಾಜ್ಯಗಳಿಗೆ ದುಡಿಯಲು ಹೋಗಿ ಸಂಕಷ್ಟದಲ್ಲಿ ಸಿಲುಕಿದವರನ್ನು ವಾಪಸ್ ಕರೆಯಿಸಿ ಅವರಿಗೆ ಆಹಾರ ಕಿಟ್ ವಿತರಿಸಿದ್ದು ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಭೀಮಾ ಪ್ರವಾಹ ಸಂದರ್ಭ ಸರ್ಕಾರ ನೆರವು ಒದಗಿಸಿದ್ದು ರೈತರು ಸ್ಮರಿಸುತ್ತಿದ್ದಾರೆ. ಇದೆಲ್ಲ ಗಮನಿಸಿದರೆ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

    ಮುಖಂಡರಾದ ಸುರೇಶ ವಾಲೀಕಾರ, ದಾನಪ್ಪ ಶಿವೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts