More

    ವೈದ್ಯರು ಮನೆಯಲ್ಲಿ ಪೂಜೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ, ಹರಕೆಯಂತೂ ಕಟ್ಟಿಕೊಳ್ತಾರೆ !

    ಮೈಸೂರು: ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಭಾಷಣ ಮಾಡಿದ ಡಾ.ಸಿ.ಎನ್​.ಮಂಜುನಾಥ್ ಅವರು ವೈದ್ಯರ ಬದುಕಿನ ಚಿತ್ರಣವನ್ನು ನಾಡಿನ ಜನರೆದುರು ಬಿಚ್ಚಿಟ್ಟರು. ಸದ್ಯದ ಪರಿಸ್ಥಿತಿ, ಸಾಮಾಜಿಕ ಸ್ಥಿತಿಗತಿಗಳ ಪುಟ್ಟ ಅವಲೋಕನವನ್ನೇ ಮಾಡಿದ ಅವರು ಜೀವನಶೈಲಿಯ ವಿಷಯದಲ್ಲಿ ಸೂಚ್ಯವಾಗಿ ಸಮಾಜವನ್ನು ಎಚ್ಚರಿಸಿದ್ದಾರೆ.

    ಇದು ವೈದ್ಯರ ಬದುಕು !

    ವೈದ್ಯರು ಮನೆಯಲ್ಲಿ ಪೂಜೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಗಂಭೀರ ರೋಗಿಗಳ ಪರವಾಗಿ ಎಷ್ಟೋ ವೈದ್ಯರು ಹರಕೆ‌ ಕಟ್ಟಿಕೊಂಡಿದ್ದಾರೆ. ರೋಗಿಯ ಆರೋಗ್ಯವೇ ನನ್ನ ಭಾಗ್ಯ ಎಂದು ಹೇಳುವ ಅನೇಕ ವೈದ್ಯರು ನಮ್ಮ ನಡುವೆ ಇದ್ದಾರೆ ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದರು.

    ಕರೊನಾ ಕಳಂಕ ಅಲ್ಲ. ಆತಂಕವಾಗಿದೆ. ಕರೊನಾ ಸೋಂಕಿತರನ್ನು ಬೇರೆಯದ್ದೇ ರೀತಿಯಲ್ಲಿ ನೋಡಲಾಗುತ್ತಿದೆ. ಕರೊನಾಗೆ ಈ ವರ್ಷ ಲಸಿಕೆ ಸಿಗಲ್ಲ. ಮುಂದಿನ ಫೆಬ್ರವರಿ, ಜೂನ್ ವೇಳೆ ಲಸಿಗೆ ಸಿಗುವ ಸಾಧ್ಯತೆ ಇದೆ. ಮೂರನೇ ಹಂತದಲ್ಲಿ ಲಸಿಕೆ ಪ್ರಯೋಗ ನಡೆಯುತ್ತಿದೆ. ಸೋಂಕಿನ ಪ್ರಮಾಣ ಕಡಿಮೆ ಆಗಬಹುದು ಎಂದು ಭರವಸೆ ನೀಡಿದರು.

    ಇದನ್ನೂ ಓದಿ: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ

    ಕಾಲ ಬದಲಾಗಿಲ್ಲ. ಜನ ಬದಲಾಗಿದ್ದಾರೆ. ಜೀವನ ಶೈಲಿ ಬದಲಾಗಿದೆ. ನಾವು ಚಂದ್ರ, ಮಂಗಳಯಾನದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತ ಗೊತ್ತಿರೋದಿಲ್ಲ. ಫೇಸ್‌ಬುಕ್‌ನಲ್ಲೇ ಗೆಳೆಯರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತೇವೆ. ಆದರೆ ನಿಜವಾದ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಈ ರಾಶಿಯವರು ಮಾತನಾಡುವಾಗ ಎಚ್ಚರದಿಂದ ಇರಿ..ತಪ್ಪು ಅಭಿಪ್ರಾಯ ಮೂಡಬಹುದು

    ಸಾಮಾಜಿಕ ಜಾಲತಾಣಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಸಮಾಜ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡಬೇಕಿರುವ ಸೋಷಿಯಲ್ ಮೀಡಿಯಾಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ. ಸಮಾಜಕ್ಕೆ ಒಳಿತು ಮಾಡುವ ಕೆಲಸ ಸಾಮಾಜಿಕ ಜಾಲತಾಣಗಳಿಂದ ಆಗಬೇಕು. ಅವುಗಳನ್ನು ಬಳಸುವ ಜನರಿಂದಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

    ಚಾಮುಂಡೇಶ್ವರಿ ದೇವಿಯಲ್ಲಿ ನನ್ನದು ಮೂರೇ ಬೇಡಿಕೆ: ಡಾ.ಸಿ.ಎನ್​.ಮಂಜುನಾಥ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts