More

    ಬದುಕುವ ಹಕ್ಕು ನೀಡಿರುವ ಸಂವಿಧಾನ

    ತರೀಕೆರೆ: ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ರಚನೆಯಾದ ಭಾರತದ ಸಂವಿಧಾನ ಸಾಮಾಜಿಕವಾಗಿ ಬದುಕುವ ಎಲ್ಲ ಹಕ್ಕುಗಳನ್ನು ನೀಡಿದೆ ಎಂದು ಪುರಸಭೆ ಅಧ್ಯಕ್ಷ ಪರಮೇಶ ಹೇಳಿದರು.
    ಪಟ್ಟಣದ ಪುರಸಭೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಪ್ರಸ್ತಾವನೆ ಲಕ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನದ ಪ್ರಸ್ತಾವನೆ ಲಕ ಸ್ಥಳೀಯ ಸಂಸ್ಥೆ ಆವರಣದಲ್ಲಿ ಅಳವಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭ ಆಗಿರುವ ಸಂವಿಧಾನದ ಆಶಯ ಬಿತ್ತುವ ಪ್ರಯತ್ನ ಮಾಡಲಾಗಿದೆ ಎಂದರು.
    ಸದಸ್ಯ ಟಿ.ದಾದಾಪೀರ್ ಮಾತನಾಡಿ, ಬದುಕುವ ಹಕ್ಕನ್ನು ಸಂವಿಧಾನ ರಕ್ಷಿಸುತ್ತಿದೆ. ಸರ್ಕಾರಿ ಕಚೇರಿಗಳು ಜಾತಿ, ಧರ್ಮದ ಶ್ರದ್ಧಾ ಕೇಂದ್ರಗಳಾಗದೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
    ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ವಿಶ್ವದಲ್ಲೇ ಭಾರತೀಯ ಸಂವಿಧಾನಕ್ಕೆ ಮಹತ್ವದ ಸ್ಥಾನವಿದೆ. ಎಲ್ಲರ ಹಕ್ಕು ರಕ್ಷಿಸುವ ಸಂವಿಧಾನ ಶ್ರೇಷ್ಠ ಗ್ರಂಥವಾಗಿದೆ. ಪ್ರತಿಯೊಬ್ಬರೂ ಸಂವಿಧಾನದ ಆಶಯ ಗೌರವಿಸುವುದು ಮಾತ್ರವಲ್ಲ, ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
    ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಪುರಸಭೆ ಸಮಾನತೆ ಕಾಪಾಡುವ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ಸಂವಿಧಾನದ ಪ್ರಸ್ತಾವನೆ ಲಕ ಕಚೇರಿಯಲ್ಲಿ ಅಳವಡಿಸಿರುವುದು ಬದ್ಧರಾಗಿ ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ತಿಳಿಸಿದರು.
    ಸದಸ್ಯ ಟಿ.ಎಂ.ರಂಗನಾಥ್, ಪರಿಸರ ಇಂಜಿನಿಯರ್ ತಾಹೀರಾ ತಸ್ನೀಮ್, ವ್ಯವಸ್ಥಾಪಕ ವಿಜಯಕುಮಾರ್, ಕಂದಾಯ ಅಧಿಕಾರಿ ಮಂಜುನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts