More

    ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

    ಬೆಂಗಳೂರು: ಕರ್ನಾಟಕ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದು ಡಬಲ್ ಇಂಜಿನ್ ಸರ್ಕಾರ ಎಂಬುದನ್ನು ನಿನ್ನೆಯಷ್ಟೇ ಮತ್ತೊಮ್ಮೆ ಪ್ರಸ್ತಾಪಿಸಿ, ಅದರಿಂದಾದ ಅಭಿವೃದ್ಧಿ ಕುರಿತು ರಿಪೋರ್ಟ್​ ಕಾರ್ಡ್ ಕೂಡ ತೆರೆದಿಟ್ಟಿದ್ದರು. ಇದೀಗ ಮೆಸೇಜಿಂಗ್ ಆ್ಯಪ್​ಗಳ ಪೈಕಿ ತೀರಾ ಅಡ್ವಾನ್ಸ್ಡ್​​ ಆಗಿರುವಂಥ ಟೆಲಿಗ್ರಾಂ ತಾಂತ್ರಿಕವಾಗಿ ಮತ್ತೊಂದು ದಾಪುಗಾಲಿಟ್ಟಿದ್ದು, ತಮ್ಮದೂ ಡಬಲ್ ಇಂಜಿನ್ ಎಂಬುದಾಗಿ ಹೇಳಿಕೊಂಡಿದೆ.

    ಅರ್ಥಾತ್, ನಿನ್ನೆಯಷ್ಟೇ ಹೊಸ ಅಪ್​ಡೇಟ್ಸ್​ ಬಿಟ್ಟಿರುವ ಟೆಲಿಗ್ರಾಂ, ಈಗಿರುವ ಬಹುತೇಕ ಫೀಚರ್ಸ್​ ಸಾಮರ್ಥ್ಯ ದುಪ್ಪಟ್ಟಾಗಿಸಿದೆ. ಸದ್ಯ 70 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಂ, ಈಗಿರುವುದರ ಜತೆಗೆ ಟೆಲಿಗ್ರಾಂ ಪ್ರೀಮಿಯಂ ಕೂಡ ಲೋಕಾರ್ಪಣೆ ಮಾಡಿದ್ದು, ಇದರಲ್ಲಿ ಇನ್ನಷ್ಟು ವಿಶೇಷ ಸೌಲಭ್ಯಗಳನ್ನು ನೀಡುತ್ತಿದೆ.

    ಮೀಡಿಯಾ ಮತ್ತು ಫೈಲ್​ ಸಾಮರ್ಥ್ಯ 2 ಜಿಬಿಯಿಂದ 4 ಜಿಬಿಗೆ ಹೆಚ್ಚಿಸಲಾಗಿದ್ದು, ಒಮ್ಮೆಗೆ 4 ಜಿಬಿ ಫೈಲ್​ ಟ್ರಾನ್ಸ್​ಫರ್ ಮಾಡಬಹುದಾಗಿದೆ. ಚಾನೆಲ್ ಸಾಮರ್ಥ್ಯವನ್ನು 500ರಿಂದ 1000ಕ್ಕೆ ಏರಿಸಿದೆ. ಪಿನ್ ಮಾಡುವ ಸಾಮರ್ಥ್ಯವನ್ನು 5 ರಿಂದ 10ಕ್ಕೆ, ಪಬ್ಲಿಕ್ ಲಿಂಕ್ ರಿಸರ್ವ್ ಮಾಡುವ ಸಾಮರ್ಥ್ಯವನ್ನು 10ರಿಂದ 20ಕ್ಕೆ, ಜಿಐಎಫ್​ ಫೈಲ್ ಸೇವ್ ಮಾಡಿಕೊಳ್ಳುವ ಸಾಮರ್ಥ್ಯವನ್ನು 200ರಿಂದ 400ಕ್ಕೆ ಏರಿಸಿದೆ.

    ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

    ಅಂದಹಾಗೆ ಈ ಡಬಲ್​ ಧಮಾಕಾ ಟೆಲಿಗ್ರಾಂ ಪ್ರೀಮಿಯರ್​ ಬಳಕೆದಾರರಿಗೆ ಮಾತ್ರ. ಅದಾಗ್ಯೂ ಪ್ರೀಮಿಯಂ ಬಳಕೆದಾರರು ಕಳಿಸಿರುವ 4 ಜಿಬಿ ಫೈಲ್ ಇತ್ಯಾದಿ ಕೆಲವು ಫೀಚರ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂಥ ಅವಕಾಶ ಈಗಾಗಲೇ ಇರುವ ಟೆಲಿಗ್ರಾಂ ಬಳಕೆದಾರರಿಗೆ ಇರಲಿದೆ. ಅಲ್ಲದೆ, ಈಗಿರುವ ಎಲ್ಲ ಫ್ರೀ ಫೀಚರ್​ಗಳು ಮುಂದುವರಿಯಲಿವೆ. ಅಂದಹಾಗೆ ಪ್ರೀಮಿಯಂ ಬಳಕೆದಾರರಿಗೆ ವೆರಿಫೈಡ್ ಬ್ಯಾಡ್ಜ್​ ಕೂಡ ಸಿಗಲಿದೆ. ಪ್ರೀಮಿಯಂ ಬಳಕೆಗೆ ಮಾಸಿಕ ಶುಲ್ಕ ಪಾವತಿಸಬೇಕು.

    ಟೆಲಿಗ್ರಾಂ ಆ್ಯಪ್ ಕೂಡ ಈಗ ಡಬಲ್ ಇಂಜಿನ್​!; ಎಲ್ಲ ದುಪ್ಪಟ್ಟು, ಏನದು ಹೊಸ ಅಪ್​ಡೇಟ್ಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts