More

    ರಿಷಭ್​ಗೆ ಡಬಲ್ ಸಂಭ್ರಮ!; ಶಿವಮ್ಮ ಚಿತ್ರಕ್ಕೆ ಬೂಸಾನ್ ಅಂತಾರಾಷ್ಟ್ರೀಯ ಪ್ರಶಸ್ತಿ

    ಬೆಂಗಳೂರು: ‘ಕಾಂತಾರ’ ಚಿತ್ರದ ಕಮರ್ಷಿಯಲ್ ಯಶಸ್ಸಿನ ಬೆನ್ನಲ್ಲೇ, ರಿಷಭ್ ಶೆಟ್ಟಿ ನಿರ್ವಣದ ಚಿತ್ರವೊಂದಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ‘ಕಥಾ ಸಂಗಮ’, ‘ಪೆಡ್ರೊ’ ಚಿತ್ರಗಳ ಬಳಿಕ ರಿಷಭ್ ಶೆಟ್ಟಿ ‘ಶಿವಮ್ಮ’ ಎಂಬ ಸಿನಿಮಾ ನಿರ್ವಿುಸಿದ್ದರು. ಈ ಚಿತ್ರ 27ನೇ ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನ್ಯೂ ಕರೆಂಟ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಜೈಶಂಕರ್ ಆರ್ಯರ್ ನಿರ್ದೇಶನದ ಮೊದಲ ಚಲನಚಿತ್ರವಿದು. ಈ ಹಿಂದೆ ‘ಕಥಾಸಂಗಮ’ ಚಿತ್ರದಲ್ಲಿ ‘ಲಚ್ಚವ್ವ’ ಎಂಬ ಸಣ್ಣ ಕಥೆಗೆ ಆಕ್ಷನ್ ಕಟ್ ಹೇಳಿದ್ದರು ಜೈ.

    ‘ಶಿವಮ್ಮ’, ಜೀವನ ನಿರ್ವಹಣೆಗೆ ಎನರ್ಜಿ ಡ್ರಿಂಕ್ ಮಾರಲು ಹೋಗುವ ಬಡ ಮಧ್ಯವಯಸ್ಕ ಮಹಿಳೆಯ ಸುತ್ತ ಸುತ್ತುವ ಕಥೆಯಾಗಿದ್ದು, ಶರಣಮ್ಮ ಚೆಟ್ಟಿ ಮತ್ತು ಚೆನ್ನಮ್ಮ ಅಬ್ಬಿಗೆರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಜೈ, ‘ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಈ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ‘ಶಿವಮ್ಮ’ ಜತೆಗೆ ಮತ್ತೊಂದು ಭಾರತೀಯ ಚಿತ್ರ ಕಾಶ್ಮೀರ ಮೂಲದ ಆಮಿರ್ ಬಷೀರ್ ನಿರ್ದೇಶಿಸಿರುವ ‘ದಿ ವಿಂಟರ್ ವಿಥಿನ್’ ಚಿತ್ರಕ್ಕೂ ಬೂಸಾನ್ ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.

    2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts