More

    ವಾಲ್ವ್​ ಇರುವ ಎನ್​95 ಮಾಸ್ಕ್​ಗಳನ್ನು ಬಳಸ ಬೇಡಿ, ಅನುಕೂಲಕ್ಕಿಂತ ಅನನಕೂಲವೇ ಹೆಚ್ಚು

    ನವದೆಹಲಿ: ಕೋವಿಡ್​-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್​ಗಳನ್ನು ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ, ಎನ್​95 ಮಾಸ್ಕ್​ ಮಾಲಿನ್ಯ ಸೇರಿ ಎಲ್ಲ ಬಗೆಯ ಸೋಂಕಿನಿಂದಲೂ ರಕ್ಷಣೆ ನೀಡುತ್ತವೆ ಎಂಬ ಕಾರಣಕ್ಕೆ ಜನರು ಅಂಥ ಮಾಸ್ಕ್​ಗಳನ್ನು ಬಳಸುತ್ತಿದ್ದಾರೆ.

    ಇದೊಂದು ರೀತಿಯಲ್ಲಿ ಒಳ್ಳೆಯದೇ. ಆದರೆ ಕೆಲವರು ವಾಲ್ವ್ಡ್​ ರೆಸ್ಪಿರೇಟರ್​ಗಳಿರುವ ಎನ್​95 ಮಾಸ್ಕ್​ಗಳನ್ನು ಬಳಸುತ್ತಿದ್ದಾರೆ. ಇಂಥ ಮಾಸ್ಕ್​ಗಳು ಕೋವಿಡ್​ನಂಥ ಮಾರಕ ಸೋಂಕಿನಿಂದ ರಕ್ಷಣೆ ಒದಗಿಸುವ ಬದಲು ಮತ್ತಷ್ಟು ಹೆಚ್ಚಿನ ಸೋಂಕು ಉಂಟು ಮಾಡುತ್ತವೆ. ಆದ್ದರಿಂದ ಅಂಥ ಮಾಸ್ಕ್​ಗಳನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

    ಹಾಗಾದರೆ ಎಂಥ ಮಾಸ್ಕ್​ಗಳು ಸುರಕ್ಷಿತ? ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ವಿಭಾಗದ ಮಹಾಪ್ರಧಾನ ನಿರ್ದೇಶಕ ಪ್ರೊ. ಡಾ. ರಾಜೀವ್​ ಗರ್ಗ್​ ಪ್ರಕಾರ, ಮನೆಯಲ್ಲೇ ತಯಾರಿಸಿದ ಮಾಸ್ಕ್​ಗಳನ್ನು ಧರಿಸುವುದು ಹೆಚ್ಚು ಸುರಕ್ಷಿತ. ಇಂಥ ಮಾಸ್ಕ್​ಗಳನ್ನು ತಯಾರಿಸುವುದು ಹೇಗೆ ಎಂಬ ಬಗ್ಗೆ ಆರೋಗ್ಯ ಸಚಿವಾಲಯದ ವೆಬ್​ಸೈಟ್​ನಲ್ಲಿ ವಿವರಿಸಲಾಗಿದೆ. ಅದನ್ನು ನೋಡಿಕೊಂಡು ಮಾಸ್ಕ್​ಗಳನ್ನು ಸ್ವತಃ ಸಿದ್ಧಪಡಿಸಿಕೊಂಡು ಸೋಂಕಿನಿಂದ ದೂರವುಳಿಯುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಅವರು ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳಿಗೆ ಪತ್ರವನ್ನೂ ರವಾನಿಸಿದ್ದಾರೆ.

    ಇದನ್ನೂ ಓದಿ: ಚೀನಾದಲ್ಲಿ ಚಿತ್ರಮಂದಿರ ಓಪನ್​; ಮೊದಲ ದಿನವೇ ದಾಖಲೆಯ ಟಿಕೆಟ್ ಮಾರಾಟ!

    ವಾಲ್ವ್ಡ್​ ರೆಸ್ಪಿರೇಟರ್​ಗಳಿರುವ ಎನ್​95 ಮಾಸ್ಕ್​ಗಳು ಕರೊನಾ ವೈರಾಣು ಪ್ರಸರಣವನ್ನು ತಡೆಯುವುದಿಲ್ಲ. ರೆಸ್ಪಿರೇಟರ್​ ಮೂಲಕ ವೈರಾಣುಗಳು ಹೊರಗೆ ಬಿಡುಗಡೆಯಾಗುತ್ತವೆ. ಜತೆಗೆ ವೈರಾಣುಗಳ ಒಳಪ್ರವೇಶಕ್ಕೂ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಇವುಗಳ ಬಳಕೆ ಸುರಕ್ಷಿತವಲ್ಲ ಎಂದು ಡಾ. ರಾಜೀವ್​ ಗರ್ಗ್​ ಪತ್ರದಲ್ಲಿ ವಿವರಿಸಿದ್ದಾರೆ.

    ಕಳೆದ ಏಪ್ರಿಲ್​ನಲ್ಲಿ ಕೂಡ ಕೇಂದ್ರ ಸರ್ಕಾರ ಮುಖ ಹಾಗೂ ಮೂಗು ಮುಚ್ಚುವಂಥ ಮನೆಯಲ್ಲೇ ತಯಾರಿಸಿದ ಮಾಸ್ಕ್​ಗಳನ್ನು ಬಳಸುವಂತೆ ಸಲಹೆ ನೀಡಿತ್ತು. ಅದರಲ್ಲೂ ವಿಶೇಷವಾಗಿ ಹೊರಗೆ ಹೋಗುವಾಗ ಇಂಥ ಮಾಸ್ಕ್​ಗಳನ್ನು ಧರಿಸುವುದು ಕಡ್ಡಾಯ ಎಂದೂ ಹೇಳಿತ್ತು.

    ಈ ಮಾಸ್ಕ್​ಗಳನ್ನು ಪ್ರತಿದಿನವೂ ಸ್ವಚ್ಛಗೊಳಿಸಿ, ಒಣಗಿಸಿ ಬಳಸಬೇಕು. ಹತ್ತಿಯ ಬಟ್ಟೆಗಳಿಂದ ಮಾಡಿದ ಮಾಸ್ಕ್​ಗಳು ಹೆಚ್ಚು ಸುರಕ್ಷಿತ ಎಂದು ಹೇಳಿತ್ತು. ಅಲ್ಲದೆ, ಮುಖವನ್ನೂ ಸಂಪೂರ್ಣವಾಗಿ ಮುಚ್ಚುವಂಥ ಮಾಸ್ಕ್​ಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಬಗೆಯನ್ನೂ ಕೂಡ ತಿಳಿಸಿತ್ತು.

    ‘ನಾವು ತೀರ್ಪು ಕೊಡುವವರೆಗೂ ಸುಮ್ಮನಿರಿ…’; ಸಚಿನ್​ ಪೈಲಟ್​ ಬಣವನ್ನು ಸದ್ಯಕ್ಕೆ ಸೇಫ್​ ಮಾಡಿದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts