More

    ಕಳೆದೆರಡು ದಿನಗಳಲ್ಲಿ 647 ಕೋವಿಡ್​ 19 ಪ್ರಕರಣ ಪತ್ತೆ, ಎಲ್ಲವೂ ತಬ್ಲಿಘಿ ಜಮಾತ್​ನಿಂದ ಹರಡಿದ್ದು: ಆರೋಗ್ಯ ಸಚಿವಾಲಯ

    ನವದೆಹಲಿ: ಕಳೆದೆರಡು ದಿನಗಳಲ್ಲಿ 14 ರಾಜ್ಯಗಳಲ್ಲಿ ಒಟ್ಟು 647 ಕೋವಿಡ್​ 19 ಪ್ರಕರಣಗಳು ದೃಢಪಟ್ಟಿದೆ. ಇದಕ್ಕೆ ನವದೆಹಲಿಯ ನಿಜಾಮುದ್ದೀನ್​ನಲ್ಲಿ ಆಯೋಜನೆಗೊಂಡಿದ್ದ ತಬ್ಲಿಘಿ ಜಮಾತ್​ ಸಭೆ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​ ಈ ವಿಷಯ ತಿಳಿಸಿದ್ದಾರೆ. ತಬ್ಲಿಘಿ ಜಮಾತ್​ ಸಭೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ 12 ಜನರು ಕಳೆದ 24 ಗಂಟೆಗಳಲ್ಲಿ ಮೃತಪಟ್ಟಿರುವುದಾಗಿಯೂ ಹೇಳಿದ್ದಾರೆ.
    ಭಾರತದಲ್ಲಿ ಇದುವರೆಗೆ 2,301 ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದ್ದು, 56 ಮಂದಿ ಮೃತಪಟ್ಟಿದ್ದಾರೆ. ಗುರುವಾರದಿಂದ ಶುಕ್ರವಾರದ ನಡುವೆ 12 ಮಂದಿ ಸತ್ತಿದ್ದಾರೆ. ಗುರುವಾರದಿಂದೀಚೆಗೆ ಹೊಸದಾಗಿ 336 ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 157 ಜನರು ಕರೋನಾ ವೈರಸ್​ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಹೆಚ್ಚಾಗುತ್ತಿರುವ ಸೋಂಕಿನ ಪ್ರಕರಣಗಳನ್ನು ಗಮನಿಸಿದಾಗ, ನಿರ್ದಿಷ್ಟವಾದ ಕಾರಣ ಇರುವಂತೆ ತೋರುತ್ತಿದೆ ಎಂದು ಪರೋಕ್ಷವಾಗಿ ತಬ್ಲಿಘಿ ಜಮಾತ್​ ಸಭೆಯನ್ನು ಉಲ್ಲೇಖಿಸಿದರು.

    ದೇಶದಲ್ಲಿ ಲಾಕ್​ಡೌನ್​ ಘೋಷಿಸಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಸೋಂಕು ಹರಡುವಿಕೆ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

    ನರ್ಸ್​ಗಳ ಜತೆ ಅಸಭ್ಯವಾಗಿ ವರ್ತಿಸಿದ್ದ ತಬ್ಲಿಘಿ ಜಮಾತ್​ನ 6 ಸದಸ್ಯರು ಬೇರೆ ಆಸ್ಪತ್ರೆಗೆ ಶಿಫ್ಟ್​, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts