More

    ‘ನಾವು ತೀರ್ಪು ಕೊಡುವವರೆಗೂ ಸುಮ್ಮನಿರಿ…’; ಸಚಿನ್​ ಪೈಲಟ್​ ಬಣವನ್ನು ಸದ್ಯಕ್ಕೆ ಸೇಫ್​ ಮಾಡಿದ ಹೈಕೋರ್ಟ್​

    ಜೈಪುರ: ಅನರ್ಹತೆಯಿಂದ ಪಾರು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿರುವ ರಾಜಸ್ಥಾನ ಮಾಜಿ ಡಿಸಿಎಂ ಸಚಿನ್​ ಪೈಲಟ್​ ಹಾಗೂ ಅವರ ಬಣದ 18 ಶಾಸಕರು ಸದ್ಯದ ಮಟ್ಟಿಗೆ ಸೇಫ್​ ಆಗಿದ್ದಾರೆ.

    ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಚಿನ್ ಪೈಲಟ್​ ಹಾಗೂ 18 ಎಂಎಲ್​ಎಗಳು ಸಲ್ಲಿಸಿದ ಅರ್ಜಿಯ ವಿಚಾರಣೆಯ ತೀರ್ಪನ್ನು ಶುಕ್ರವಾರ ನೀಡಲಿದ್ದೇವೆ. ಅಲ್ಲಿಯವರೆಗೆ ಸಚಿನ್​ ಪೈಲಟ್ ಹಾಗೂ ಅವರ ಬಣದ ಶಾಸಕರ ವಿರುದ್ಧ ಯಾವುದೇ ಕ್ರಮವನ್ನೂ ತೆಗೆದುಕೊಳ್ಳಬಾರದು ಎಂದು ಸ್ಪೀಕರ್​ಗೆ ಸೂಚಿಸಿದೆ.

    ಪಕ್ಷದಿಂದ ದೂರ ಉಳಿದು, ಶಾಸಕಾಂಗ ಪಕ್ಷದ ಎರಡು ಸಭೆಗಳಿಗೆ ಗೈರಾದ ಸಚಿನ್​ ಪೈಲಟ್​ ಮತ್ತು 18 ಎಂಎಲ್​ಎ ಗಳಿಗೆ ರಾಜಸ್ಥಾನ ಸ್ಪೀಕರ್​ ಅನರ್ಹತೆಯ ನೋಟಿಸ್ ನೀಡಿದ್ದರು. ಅದರ ವಿರುದ್ಧ ಈ ಬಣ ಹೈಕೋರ್ಟ್​ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ.

    ಇಂದು ಸಚಿನ್​ ಪೈಲಟ್​ ಹಾಗೂ ಶಾಸಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್​ ರೋಹಟಗಿ ಅವರು, ಸಚಿನ್​ ಪೈಲಟ್​​ ಬಣದ ವಿರುದ್ಧ ಅನರ್ಹತೆ ನೋಟಿಸ್​ ಜಾರಿ ಮಾಡುವಾಗ ಸ್ಪೀಕರ್​ ಯಾವುದನ್ನೂ ದಾಖಲೆಯಲ್ಲಿ ಇಲ್ಲ. ಅವರಿಗೆ ಯಾಕೆ ಅನರ್ಹತೆಯ ನೋಟಿಸ್​ ನೀಡಲಾಗಿದೆ ಎಂದೂ ಉಲ್ಲೇಖ ಮಾಡಿಲ್ಲ. ಅಷ್ಟೇ ಅಲ್ಲದೆ, ನೋಟಿಸ್​ಗೆ ಉತ್ತರಿಸಲು ನಿಯಮದ ಪ್ರಕಾರ ಕೊಡಬೇಕಾದಷ್ಟು ಸಮಯವನ್ನೂ ಸ್ಪೀಕರ್​ ಕೊಡಲಿಲ್ಲ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಆರೇಳು ತಿಂಗಳಲ್ಲಿ ಮನೆಮನೆಗೆ ರೇಷನ್‌: ದೆಹಲಿ ಸಚಿವ ಸಂಪುಟದಲ್ಲಿ ಅನುಮೋದನೆ

    ಇನ್ನು ಸ್ಪೀಕರ್​ ಪರ ವಾದ ಮಂಡಿಸಿದ ಅಭಿಷೇಕ್​ ಮನು ಸಿಂಘ್ವಿ, ಶಾಸಕರಿಗೆ ಅನರ್ಹತೆಯ ಎಚ್ಚರಿಕೆಯ ನೋಟಿಸ್​ ನೀಡಲಾಗಿದೆ. ಅವರನ್ನು ಸದನದಿಂದ ಅನರ್ಹ ಮಾಡುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅಷ್ಟಕ್ಕೂ ವಿಧಾನಸಭೆಯಲ್ಲಿ ಸ್ಪೀಕರ್​ ತೀರ್ಮಾನವೇ ಅಂತಿಮ. ಅವರೇ ಮುಖ್ಯಸ್ಥರು. ಹೈಕೋರ್ಟ್​ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.

    ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್​ ದಾಖಲೆಗಳನ್ನೆಲ್ಲ ಪರಿಶೀಲನೆ ಮಾಡಿದ್ದು, ಶುಕ್ರವಾರ ತೀರ್ಪು ನೀಡುವುದಾಗಿ ಘೋಷಿಸಿದೆ. ಅಲ್ಲಿಯವರೆಗೂ ಸ್ಪೀಕರ್ ಕೂಡ ತಟಸ್ಥವಾಗಿರಬೇಕು. ಸಚಿನ್​ ಪೈಲಟ್​ ಬಣದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. (ಏಜೆನ್ಸೀಸ್​)

    ಮನೇಲೇ ಇದ್ದೀನಿ, ಯಾವುದೇ ರೂಲ್ಸ್​ ಬ್ರೇಕ್​ ಮಾಡಿಲ್ಲ ಎಂದ ಸೋನಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts