More

    ಒಬ್ಬ ಸೋಂಕಿತನಿಂದ 30 ದಿನದಲ್ಲಿ 406 ಜನರಿಗೆ ಹಬ್ಬುತ್ತೆ ಕರೊನಾ, ಲಾಕ್​ಡೌನ್​ ಬೇಕಾ ಬೇಡವಾ?

    ನವದೆಹಲಿ: ನಮ್ಮ ಪ್ರದೇಶದಲ್ಲಿ ಕೋವಿಡ್​ 19 ಸೋಂಕಿತರು ಇಲ್ಲ. ಆದರೂ ನಮ್ಮ ಏರಿಯಾದಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಇದು ಅನ್ಯಾಯ ಎನ್ನುವವರಿಗೆ ಇಲ್ಲೊಂದು ಎಚ್ಚರಿಕೆ. ಅದೇನೆಂದರೆ, ಲಾಕ್​ಡೌನ್​ ನಿಯಮ ಜಾರಿಗೊಳಿಸದೇ ಇದ್ದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೋದರೆ, ಒಬ್ಬ ಕೋವಿಡ್​ 19 ಸೋಂಕಿತ 30 ದಿನಗಳಲ್ಲಿ ಅಂದಾಜು 406 ಜನರಿಗೆ ಸೋಂಕು ದಾಟಿಸಬಲ್ಲ!

    ಸಾಮಾಜಿಕ ಅಂತರ ಹಾಗೂ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಒಬ್ಬ ಸೋಂಕಿತನಿಂದ 406 ಜನರಿಗೆ ಸೋಂಕು ದಾಟುತ್ತದೆ. ಪರೀಕ್ಷೆ ನಂತರವೇ ಸೋಂಕು ತಗುಲಿರುವುದು ತಿಳಿಯುವುದರಿಂದ, ಆ ವೇಳೆಗಾಗಲೆ ಆಗಬಹುದಾದ ಎಲ್ಲ ಅನಾಹುತಗಳು ಆಗಿ ಹೋಗಿರುತ್ತವೆ.

    ಆತನ ಸಂಪರ್ಕದಲ್ಲಿ ಯಾರು ಯಾರಿದ್ದರು ಎಂಬುದನ್ನು ಪತ್ತೆ ಮಾಡುವುದು ಅಸಾಧ್ಯದ ಮಾತು. ಹಾಗಾಗಿ ಲಾಕ್​ಡೌನ್​ ನಿಯಮ ಪಾಲಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇಲ್ಲವಾದರೆ, ಮೂರನೇ ಹಂತದ ಸೋಂಕು ಹರಡುವಿಕೆಯ ಅಪಾಯಕ್ಕೆ ಆಹ್ವಾನವಿತ್ತಂತೆ.

    ಉದಾಹರಣೆಗೆ ಆರ್​0 (ಆರ್​ ನಾಟ್​-ರಿಪ್ರೊಡೆಕ್ಟಿವ್​ ನಂಬರ್​) ಅಂದರೆ ಯಾವುದೇ ಕಾಯಿಲೆಯ ಪ್ರಸರಣ ಪ್ರಮಾಣವನ್ನು ಗುರುತಿಸುವ ಮಾನಕ. ಕರೊನಾ ವೈರಸ್​ನ ಪ್ರಸರಣ ಪ್ರಮಾಣ 1.4ರಿಂದ 1.5ರ ನಡುವೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್​) ಅಧ್ಯಯನ ತಿಳಿಸಿದೆ.

    ಆರ್​0 ಅನ್ನು 2.5 ಎಂದು ಪರಿಗಣಿಸುವುದಾದರೆ ಒಬ್ಬ ಸೋಂಕಿತ 30 ದಿನಗಳಲ್ಲಿ 406 ಜನರಿಗೆ ಸೋಂಕು ದಾಟಿಸಬಲ್ಲ. ಅದೇ ಲಾಕ್​ಡೌನ್​ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿದಾಗ ಈ ಪ್ರಮಾಣ ಶೇ.75 ಕಡಿಮೆಯಾಗುತ್ತದೆ. ಆಗ ಒಬ್ಬ ಸೋಂಕಿತ 2.5 ಜನರಿಗೆ ಸೋಂಕು ದಾಟಿಸಬಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್​ವಾಲ್​ ವಿವರಿಸಿದ್ದಾರೆ.

    ಈಗ ಹೇಳಿ, ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಿಸಿರುವುದು ಒಳ್ಳೆಯದೋ ಅಥವಾ ಅದನ್ನು ಹಿಂಪಡೆದು ಎಂದಿನಂತೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾ? ಇನ್ನಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಿ ಕರೊನಾ ಪ್ರಸರಣದ ಪ್ರಮಾಣ ಕಡಿಮೆ ಮಾಡುವಿರಾ? ನಿರ್ಧಾರ ನಿಮ್ಮದು.

    ರಾಜ್ಯದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ, ಮಂಗಳವಾರ ಒಟ್ಟು 12 ಹೊಸ ಪ್ರಕರಣಗಳು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts