ನಿರ್ದೇಶಕಿ ಕಂ ನೃತ್ಯ ನಿರ್ದೇಶಕಿ ಫರ್ಹಾ ಖಾನ್‌ಗೆ ಭಯಂಕರ ಸಿಟ್ಟು ಬಂದಿದೆ. ಅದಕ್ಕೆ ಕಾರಣ, ಹೌಸ್ ಅರೆಸ್ಟ್ ಆಗಿರುವ ಕೆಲವು ಸೆಲೆಬ್ರಿಟಿಗಳು ಪದೇಪದೇ ವರ್ಕೌಟ್ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೇಲಿಬಿಡುತ್ತಿದ್ದಾರೆ. ಕರೊನಾದಿಂದ ಜಗತ್ತೇ ತತ್ತರಿಸಿರುವಾಗ, ಆ ಬಗ್ಗೆ ಕಾಳಜಿ ಇರಲಿ ಎಂದು ಸೆಲೆಬ್ರಿಟಿಗಳಿಗೆ ರ‌್ಹಾ ಖಾನ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕರೊನಾದಿಂದ ಎಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಲ್ಲೇ ಇದ್ದಾರೆ. ಟೈಂಪಾಸ್ ಆಗದೆ ವರ್ಕೌಟ್ ಮಾಡುತ್ತಿರುವ ಅಥವಾ ಮನೆಗೆಲಸ ಮಾಡುತ್ತಿರುವ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಕತ್ರಿನಾ ಕೈಫ್, ರಾಕುಲ್ ಪ್ರೀತಿ ಸಿಂಗ್, ಜಾಕ್ವೆಲಿನ್ ರ್ನಾಂಡಿಸ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಶಿಲ್ಪಾ ಶೆಟ್ಟಿ, ಸಾರಾ ಅಲಿ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಾವು ಮನೆಯಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತಿರುವ ರ‌್ಹಾ ಖಾನ್, ಸ್ವಲ್ಪ ಖಾರವಾಗಿಯೇ ಪ್ರತಿಕ್ರಯಿಸಿದ್ದಾರೆ.
ಒಂದು ವೀಡಿಯೋದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ‘ಎಲ್ಲಾ ಸೆಲೆಬ್ರಿಟಿ ಮತ್ತು ಸ್ಟಾರ್‌ಗಳಲ್ಲಿ ನನ್ನದೊಂದು ಸವಿನಯ ಪ್ರಾರ್ಥನೆ. ದಯವಿಟ್ಟು ನೀವು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋಗಳನ್ನು ಹಾಕಿ ನಮ್ಮನ್ನು ಕೊಲ್ಲಬೇಡಿ. ಇಡೀ ಜಗತ್ತು ಕರೊನಾದಿಂದ ತತ್ತರಿಸಿದೆ. ನಿಮಗೆ ಅದರ ಬಿಸಿ ಮುಟ್ಟಿಲ್ಲ ಮತ್ತು ಮುಟ್ಟುವುದೂ ಇಲ್ಲ. ಅದೇ ಕಾರಣಕ್ಕೆ ನೀವು ನಿಮ್ಮ ಫಿಗರ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದೀರಿ. ಆದರೆ, ನಮಗೆ ನಮ್ಮದೇ ಆದ ಬೇರೆ ಕಾಳಜಿ ಇದೆ. ಹಾಗಾಗಿ ದಯಮಾಡಿ, ನಿಮ್ಮ ವರ್ಕೌಟ್ ವೀಡಿಯೋಗಳನ್ನು ಪೋಸ್ಟ್ ಮಾಡುವುದನ್ನು ನಿಲ್ಲಿಸಿ. ನಿಮಗೆ ಅದು ಸಾಧ್ಯವಾಗದಿದ್ದರೆ, ನಾನು ನಿಮ್ಮನ್ನು ಾಲೋ ಮಾಡುವುದನ್ನು ಬಿಡುತ್ತೇನೆ’ ಎಂದು ನೇರವಾಗಿ ಹೇಳಿದ್ದಾರೆ. ತಮ್ಮ ವೀಡಿಯೋದಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸದಿದ್ದರೂ, ಒಟ್ಟಾರೆ ಸೆಲೆಬ್ರಿಟಿಗಳು ನಡೆಯನ್ನು ನೇರವಾಗಿಯೇ ಖಂಡಿಸಿದ್ದಾರೆ.
ಫರ್ಹಾ ಖಾನ್ ಅವರ ಈ ನಿಲುವಿಗೆ ಬಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಟಿ ಟಬು, ನಿರ್ದೇಶಕಿ ಜೋಯಾ ಅಖ್ತರ್ ಸೇರಿದಂತೆ ಹಲವರು, ಫರ್ಹಾ ಖಾನ್ ಅವರನ್ನು ಬೆಂಬಲಿಸಿದ್ದಾರೆ.
ಕರೊನಾ ಎಫೆಕ್ಟ್ ಪರಿಣಾಮ ತಲೆಕೆಳಗಾದ ಲೆಕ್ಕಾಚಾರ!: ಯಾವ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ