More

    ಯಾರೇನೇ ಅಂದ್ರು ಡೋಂಟ್​ ಕೇರ್​: ರಾಮ ಮಂದಿರ ಉದ್ಘಾಟನೆಗೆ ಹೋಗೇ ಹೋಗ್ತೀನೆಂದ ಹರ್ಭಜನ್​ ಸಿಂಗ್​

    ನವದೆಹಲಿ: ಯಾರೇನೇ ಮಾಡಲಿ ನಾನಂತೂ ಜನವರಿ 22ರ ಸೋಮವಾರದಂದು ನಡೆಯಲಿರುವ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂದಲ್ಲಿ ಭಾಗಿಯಾಗುತ್ತೇನೆ ಎಂದು ಟೀಮ್​ ಇಂಡಿಯಾದ ಮಾಜಿ ಸ್ಪಿನ್​ ಮಾಂತ್ರಿಕ, ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಹರ್ಭಜನ್​ ಸಿಂಗ್​ ಹೇಳಿದ್ದಾರೆ.

    ರಾಮಮಂದಿರ ಉದ್ಘಾಟನೆಗೆ ಬಹುತೇಕ ವಿರೋಧ ಪಕ್ಷಗಳು ಹಾಜರಾಗದಿರುವ ನಿಲುವು ತಳೆದಿವೆ. ಇದರಲ್ಲಿ ಎಎಪಿ ಕೂಡ ಒಂದು. ಆದರೆ, ಎಎಪಿ ಪಕ್ಷದ ನಾಯಕರಾಗಿರುವ ಹರ್ಭಜನ್​ ಸಿಂಗ್​ ಅದೆಲ್ಲವನ್ನು ಬದಿಗಿಟ್ಟು ರಾಮ ಮಂದಿರ ಉದ್ಘಾಟನೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

    ಯಾರು ಸಮಾರಂಭಕ್ಕೆ ಹೋಗುವುದು ಅಥವಾ ಹೋಗದಿರುವುದು ಮುಖ್ಯವಲ್ಲ; ಕಾಂಗ್ರೆಸ್ ಹೋಗಲಿ ಅಥವಾ ಹೋಗದಿರಲಿ ಅಥವಾ ಇತರೆ ಪಕ್ಷಗಳು ಹೋಗಲಿ ಅಥವಾ ಹೋಗದಿದ್ದರೂ, ನಾನುಂತೂ ಖಂಡಿತವಾಗಿಯೂ ಹೋಗುತ್ತೇನೆ. ದೇವರನ್ನು ನಂಬುವ ಭಕ್ತಕಾನಿ ಇದು ನನ್ನ ವೈಯಕ್ತಿಕವಾಗಿ ನಿಲುವಾಗಿದೆ. ನಾನು ರಾಮ ಮಂದಿರಕ್ಕೆ ಹೋಗುವುದರಲ್ಲಿ ಯಾರಿಗಾದರೂ ಸಮಸ್ಯೆಯಿದ್ದರೆ ಅವರು ಏನು ಬೇಕಾದರೂ ಮಾಡಬಹುದು ಎಂದು ಹರ್ಭಜನ್​ ತಿಳಿಸಿದರು.

    ಜನವರಿ 22ರ ರಾಮಮಂದಿರ ಉದ್ಘಾಟನೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸುವ ನಡುವೆಯೇ ಹರ್ಭಜನ್​ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿಯು ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಮತ್ತು 2024ರ ಲೋಕಸಭೆ ಚುನಾವಣೆಗೆ ಪ್ರಚಾರದ ಅಸ್ತ್ರವಾಗಿ ದೇವಾಲಯದ ಉದ್ಘಾಟನೆಯನ್ನು ಬಳಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ.

    ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ ರಾಮನ ಆಶೀರ್ವಾದವನ್ನು ಪಡೆಯಬೇಕು. ನಾನು ಖಂಡಿತವಾಗಿಯೂ ಆಶೀರ್ವಾದವನ್ನು ಪಡೆಯಲು ಹೋಗುತ್ತಿದ್ದೇನೆ ಎಂದು ಭಜ್ಜಿ ಹೇಳಿದರು.

    ಹರ್ಭಜನ್ ಸಿಂಗ್ ಅವರ ಈ ಹೇಳಿಕೆಯು ಅವರ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನವರಿ 22ರ ಉದ್ಘಾಟನೆ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ ಕೆಲವು ದಿನಗಳ ಬೆನ್ನಲ್ಲೇ ಹೇಳಿದ್ದಾರೆ. (ಏಜೆನ್ಸೀಸ್​)

    ರಾಹುಲ್ ಗಾಂಧಿ ಕೈಯಲ್ಲಿ ಗದೆ, ಮುಖಕ್ಕೆ ಹನುಮನ ಮಾಸ್ಕ್…ಈ ಫೋಟೋ ಅರ್ಥವೇನು?

    ಅವರೇನೋ ಕೇಳ್ಬಿಟ್ರು ಆದ್ರೆ ನನ್ನಿಂದ ರೂಮ್​ನಿಂದ ಹೊರಗೆ ಬರಲು ಆಗಲಿಲ್ಲ: ನಟಿ ಮೀನಾ ಓಪನ್​ ಟಾಕ್​

    ಕಾಲೇಜಿಗೆ ಹೋದಾಕೆ ನಾಪತ್ತೆ: 1 ತಿಂಗಳ ನಂತ್ರ ಪ್ರಿಯಕರನ​ ಡೆತ್​ನೋಟ್​ನಿಂದ ಭೀಕರ ಸಂಗತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts