More

  ದರ್ಬಾರ್ ಹಾಲ್ ಎದುರು ತಡೆಗೋಡೆ ಬೇಡ

  ಸವಣೂರ: ಪಟ್ಟಣದ ನವಾಬರ ಕಾಲದ ದರ್ಬಾರ್ ಹಾಲ್ ಸೌಂದರ್ಯಕ್ಕೆ ಅಡ್ಡಿಯಾಗದಂತೆ ಕಂದಾಯ ಇಲಾಖೆ ತಡೆಗೋಡೆ ನಿರ್ವಿುಸಿಕೊಳ್ಳಬೇಕು ಎಂದು ಸವಣೂರ ಹಿತರಕ್ಷಣೆ ಸಮಿತಿ ಪದಾಧಿಕಾರಿಗಳು ಬುಧವಾರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

  ಸವಣೂರ ನವಾಬರ ಕಾಲದ ದರ್ಬಾರ್ ಹಾಲ್ ಎಂದು ಕರೆಯಲ್ಪಡುವ ಪುರಾತನ ಕಟ್ಟಡ ಕಾಲಾಂತರದಲ್ಲಿ ನ್ಯಾಯಾಲಯವಾಗಿ ಪರಿವರ್ತನೆಗೊಂಡಿತ್ತು. ಇದೀಗ ನವಾಬರ ಪಾರಂಪರಿಕ ಕಟ್ಟಡವನ್ನು ಕರ್ನಾಟಕ ಪ್ರವಾಸೋದ್ಯಮ ಯೋಜನೆಯಡಿ ಪೌರತ್ವ ಇಲಾಖೆ ಸಾಂಸ್ಕೃತಿಕ ಸಂಗ್ರಹಾಲಯವನ್ನಾಗಿ ಮಾಡಲು ಮುಂದಾಗಿದೆ. ಇಂತಹ ಸುಂದರ ಕಟ್ಟಡದ ಸೌಂದರ್ಯ ಪ್ರವಾಸಿಗರನ್ನು ಸೆಳೆಯಲು ಅಡ್ಡಿಯಾಗುವಂತೆ ಕಂದಾಯ ಇಲಾಖೆ ಜಾಗದಲ್ಲಿ ತಡೆಗೋಡೆ ನಿರ್ವಿುಸಲಾಗುತ್ತಿದೆ. ಇದನ್ನು ಕೈಬಿಟ್ಟು ಬೇರೆ ಸ್ಥಳದಲ್ಲಿ ತಡೆಗೋಡೆ ನಿರ್ವಿುಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

  ಸವಣೂರ ಹಿತ ರಕ್ಷಣೆ ಸಮಿತಿ ಅಧ್ಯಕ್ಷ ಬಿ.ಎಂ. ಪಾಟೀಲ, ಪದಾಧಿಕಾರಿಗಳಾದ ಜೀಶಾನಖಾನ್ ಪಠಾಣ, ಪರಶುರಾಮ ಈಳಗೇರ, ಪ್ರಕಾಶ ರ್ಬಾ, ಇಸಾಕಹ್ಮದ್​ಖಾನ್ ಪಠಾಣ, ಈರಣ್ಣ ಸಾಲಿಮಠ, ಪಾಂಡುರಂಗ ಮಹೇಂದ್ರಕರ, ಖಲಂದರ್​ಅಹ್ಮದ್ ಅಕ್ಕೂರ, ಸಿಕಂದರ ಹತ್ತೇವಾಲೆ, ನನ್ನೇಮಿಯಾ ಬನ್ನೂರ, ಮಕಬೂಲಅಹ್ಮದ್ ಪರಾಶ, ಅದ್ದು ಪರಾಶ, ನೀಜಾಮ ನಾಲಬಂದ, ಸಿಕಂದರ್ ಹತ್ತೆವಾಲೆ, ಅಲ್ತಾಫ್ ದುಖಾನದಾರ, ನಜೀರ ಹಕೀಮ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts