More

    VIDEO: ಅಗತ್ಯವಿದ್ದರಷ್ಟೇ ಮನೆಯಿಂದ ಹೊರಗೆ ಕಾಲಿಡಿ…ನಿಮಗೇನೇ ಮಾಹಿತಿ ಬೇಕಿದ್ದರೂ ಸಹಾಯವಾಣಿ 104ಕ್ಕೆ ಕರೆ ಮಾಡಿ..: ಸಿಎಂ ಸೂಚನೆ

    ಬೆಂಗಳೂರು: ಕರೊನಾ ವೈರಸ್ ಹಬ್ಬುತ್ತಿರುವುದಕ್ಕಿಂತ ವೇಗವಾಗಿ ಅದಕ್ಕೆ ಸಂಬಂಧಪಟ್ಟ ರೂಮರ್​ಗಳು, ಗಾಳಿಸುದ್ದಿಗಳು ಹರಡುತ್ತಿವೆ.

    ಸಾಮಾಜಿಕ ಜಾಲತಾಣಗಳಲ್ಲಂತೂ ಹಲವರು ಕರೊನಾ ತಜ್ಞರಾಗಿದ್ದನ್ನು ಕಾಣಬಹುದು. ಇಲ್ಲಸಲ್ಲದ ಮೆಸೇಜ್​ಗಳನ್ನು ಹರಿಬಿಡುತ್ತಿದ್ದಾರೆ. ಕರೊನಾ ನಿಯಂತ್ರಣಕ್ಕಿಂತ ಸರ್ಕಾರದ ಪಾಲಿಗೆ ಈ ವದಂತಿಗಳಿಂದ ಜನರು ಗಾಬರಿಯಾಗುವುದನ್ನು ತಪ್ಪಿಸುವುದೇ ದೊಡ್ಡ ಕೆಲಸವಾದಂತಾಗಿದೆ.

    ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನರು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

    ಕರೊನಾಗೆ ಸಂಬಂಧಪಟ್ಟಂತೆ ಸರ್ಕಾರದ ಅಧಿಕೃತ ಸೂಚನೆ, ಮಾಹಿತಿಗಳನ್ನು ಹೊರತುಪಡಿಸಿದರೆ ಇನ್ಯಾವುದೇ ವದಂತಿಗಳನ್ನು ನಂಬಬೇಡಿ. ನಿಮಗೆ ಏನೇ ಮಾಹಿತಿ ಬೇಕಿದ್ದರೂ, ನೀವು ಯಾವುದೇ ವಿಚಾರವನ್ನು ನಮಗೆ ತಿಳಿಸಬೇಕೆಂದರೂ ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಎಂದು ತಿಳಿಸಿದ್ದಾರೆ.

    ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲರೀತಿಯ ಕ್ರಮಗಳನ್ನೂ ಕೈಗೊಂಡಿದ್ದು, ಯಾರೂ ಆತಂಕಪಡಬೇಡಿ ಎಂದು ಹೇಳಿದ್ದಾರೆ.

    ಹಾಗೇ ಯಡಿಯೂರಪ್ಪನವರು ನೀಡಿದ ಸಲಹೆ ಹೀಗಿದೆ:

    • ಜನಜಂಗುಳಿಯಿಂದ ದೂರ ಇರಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಅಗತ್ಯವಿದ್ದರಷ್ಟೇ ಮನೆಯಿಂದ ಹೊರಗೆ ಕಾಲಿಡಿ.
    • ಸಾರ್ವಜನಿಕ ಸಭೆ ಸಮಾರಂಭಗಳನ್ನು ಆಯೋಜಿಸದಿರಿ. ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿರಿ.
    • ಪದೇಪದೆ ಮುಖ, ಬಾಯಿ, ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ಆಗಾಗ ಕೈತೊಳೆಯುತ್ತಿರಿ. ಮನೆ, ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಶುದ್ಧ ಕುಡಿಯುವ ನೀರನ್ನು ಸೇವಿಸಿ.
    • ವಿದೇಶದಿಂದ ಆಗಮಿಸಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. 14 ದಿನಗಳ ಕಾಲ ಪ್ರತ್ಯೇಕವಾಗಿರಿ. ಈ ಅವಧಿಯಲ್ಲಿ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣ ಕಂಡುಬಂದರೆ ಕೂಡಲೇ ವೈದ್ಯಕೀಯ ನೆರವು ಪಡೆದುಕೊಳ್ಳಿ. 

    2 ಲಕ್ಷದ ಗಡಿ ದಾಟಿದ ಕರೊನಾ ವೈರಸ್​ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆ 8 ಸಾವಿರಕ್ಕೆ ಹತ್ತಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts