More

    2 ಲಕ್ಷದ ಗಡಿ ದಾಟಿದ ಕರೊನಾ ವೈರಸ್​ ಸೋಂಕಿತರ ಸಂಖ್ಯೆ; ಸಾವಿನ ಸಂಖ್ಯೆ 8 ಸಾವಿರಕ್ಕೆ ಹತ್ತಿರ

    ಬೆಂಗಳೂರು: ಚೀನಾದಲ್ಲಿ ಹುಟ್ಟಿದ ಕರೊನಾ ವೈರಸ್​ ವಿಶ್ವವ್ಯಾಪಿಯಾಗಿ ಹರಡಿದ್ದು ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳಿಕೆ ಕಾಣುತ್ತಲೇ ಸಾಗುತ್ತಿದೆ. ಇಂದಿಗೆ ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ದಾಟಿರುವುದು ವರದಿಯಾಗಿದೆ.

    ಚೀನಾದಲ್ಲಿ ಮೊದಲ ವೈರಸ್​ ಪತ್ತೆಯಾಗಿ ಇಂದಿಗೆ 78 ದಿನಗಳು ಕಳೆದಿವೆ. ಅಂದಿನಿಂದ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ವೈರಸ್​ ಇದೀಗ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ. ಚೀನಾದ ನಂತರ ಯುರೋಪಿಯನ್​ ದೇಶಗಳಲ್ಲಿ ವೈರಸ್​ನ ಪರಿಣಾಮ ಹೆಚ್ಚಾಗಿದೆ. ಇಟಲಿ, ಇರಾನ್​, ಸ್ಪೇನ್​ನಲ್ಲಿ ಸಾವಿರಾರು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಈ ದೇಶಗಳು ಸಾಮಾಜಿಕ ಕಾರ್ಯಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಇದುವರೆಗೆ ಪ್ರಪಂಚದಲ್ಲಿ 7,500ಕ್ಕೂ ಹೆಚ್ಚು ಸಾವು ಸಂಭವಿಸಿರುವುದು ವರದಿಯಾಗಿದೆ.

    ದೇಶದಲ್ಲಿ ಬುಧವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ವರದಿಯ ಪ್ರಕಾರ 147 ಜನರಲ್ಲಿ ಸೋಂಕು ತಗುಲಿದೆ. ಮೂರು ಜನರು ಮರಣ ಹೊಂದಿದ್ದಾರೆ. (ಏಜೆನ್ಸೀಸ್​)

    ಪೊಲೀಸರು ಸರ್ಕಾರದ ಕೈಗೊಂಬೆಗಳಾಗಿದ್ದಾರೆ; ಬಿಜೆಪಿ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಡಿಕೆಶಿ, ದಿಗ್ವಿಜಯ ಸಿಂಗ್​ ಗುಡುಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts