More

    ಅತಿಯಾದ ಆತ್ಮವಿಶ್ವಾಸ ಬೇಡ

    ಮೂಡಿಗೆರೆ: ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಗೆಲುವುದಾಗಿ ಅತಿಯಾದ ಆತ್ಮವಿಶ್ವಾಸ ಬೇಡ. ಪ್ರತಿ ಹಂತದಲ್ಲೂ ಚುನಾವಣೆ ಗೆಲ್ಲಲು ಗರಿಷ್ಠ ಮಟ್ಟದ ಪ್ರಯತ್ನ ನಡೆಸಬೇಕು ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

    ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, 2004ರಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮೈಮರೆತ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡಿತು. ಹಾಗಾಗಿ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದರು.
    ಸ್ಥಳೀಯವಾಗಿ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲವನ್ನು ಜಿಲ್ಲಾಧ್ಯಕ್ಷರು ಆದಷ್ಟು ಬೇಗ ನಿವಾರಿಸಿ ಲೋಕಸಭಾ ಚುನಾವಣೆಗೆ ಸಜ್ಜಾಗಬೇಕು. ಪಕ್ಷದೊಳಗೆ ಅಶಿಸ್ತು ಸಹಿಸಲು ಸಾಧ್ಯವಿಲ್ಲ. ಪಕ್ಷದ ಕಚೇರಿಯನ್ನು ಗೌರವದಿಂದ ಬಳಸಿಕೊಳ್ಳಬೇಕು. ನಮ್ಮಲ್ಲಿ ಮನಸ್ತಾಪಗಳಿದ್ದರೂ ಒಂದೇ ಕುಟುಂಬದ ಸದಸ್ಯರಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
    ಬಿಜೆಪಿ ಮೂಡಿಗೆರೆಮಂಡಲ ಅಧ್ಯಕ್ಷ ಜೆ.ಎಸ್.ರಘು, ನಿಯೋಜಿತ ಅಧ್ಯಕ್ಷ ಟಿ.ಎಂ.ಗಜೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಣ್ಯಪಾಲ್, ನರೇಂದ್ರ, ರವೀಂದ್ರ ಬೆಳವಾಡಿ, ಮುಖಂಡರಾದ ಎಚ್.ಎಸ್.ಕವೀಶ್, ಎಂ.ಆರ್.ಜಗದೀಶ್, ಪ್ರೇಮ್‌ಕುಮಾರ್, ದೀಪಕ್ ದೊಡ್ಡಯ್ಯ, ಕೆಂಜಿಗೆ ಕೇಶವ, ರಾಜಪ್ಪ, ನಾರಾಯಣಗೌಡ, ಸಿ.ಎಚ್.ಲೋಕೇಶ್, ಜಯಂತ್, ಸುರೇಂದ್ರ, ಸುದರ್ಶನ್, ಎಚ್.ಆರ್.ಪ್ರಮೋದ್‌ಕುಮಾರ್, ಶಶಿಧರ್, ಕೆ.ಸಿ.ರತನ್, ಸುಜಿತ್, ಸಂತೋಷ್ ಕೋಟ್ಯಾನ್, ಅವಿನಾಶ್, ಮೋಹನ್, ಪಂಚಾಕ್ಷರಿ, ಭಾರತಿ ರವೀಂದ್ರ, ಶರತ್, ಧನಿಕ್, ಪ್ರಶಾಂತ್, ಯೋಗೇಶ್, ನಯನ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts