More

    ಕತ್ತೆಗಳ ಡ್ರಗ್ಸ್ ತೆಗೆದುಕೊಳ್ತಿದ್ದಾರೆ ಮಾದಕ ವ್ಯಸನಿಗಳು!

    ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಎಂಡಿಎಂಎ ಮಾತ್ರೆ ಹಾಗೂ ಎಲ್​ಎಸ್​ಡಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದರೆ, ಈ ಮಾದಕ ವಸ್ತುಗಳನ್ನು ಹಿಂದೆ ಗುಡ್ಡಗಾಡು ಪ್ರದೇಶದಲ್ಲಿ ಲಗೇಜು ಹೊತ್ತೊಯ್ಯುವ ಕತ್ತೆಗಳಿಗೆ ಶಕ್ತಿವರ್ಧಕವಾಗಿ ನೀಡಲಾಗುತ್ತಿತ್ತು ಎಂದು ತಜ್ಞರು ಹೇಳುತ್ತಾರೆ.

    ಎಂಡಿಎಂಎ ಮಾತ್ರೆ ಸೇವಿಸಿದ ವ್ಯಕ್ತಿ ಕನಿಷ್ಠ 2 ದಿನಗಳ ಕಾಲ ಪ್ರಜ್ಞಾವಸ್ಥೆಯಲ್ಲಿ ಇರುವುದಿಲ್ಲ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಉತ್ತರ ಭಾರತದ ವ್ಯಾಪಾರಿಗಳು ಕತ್ತೆಗಳ ಬೆನ್ನ ಮೇಲೆ ಮೂಟೆಗಳನ್ನಿಟ್ಟು ವಸ್ತುಗಳನ್ನು ಸಾಗಿಸುತ್ತಿದ್ದರು. ಗುಡ್ಡಗಾಡು ಪ್ರದೇಶದಲ್ಲಿ ಕತ್ತೆಗಳಿಗೆ ಈ ಮೂಟೆಗಳನ್ನು ಹೊತ್ತು ಸಾಗಲು ಕಷ್ಟವಾಗುತ್ತಿತ್ತು. ಅಂಥ ಸಂದರ್ಭದಲ್ಲಿ ಕತ್ತೆಗಳಿಗೆ ಶಕ್ತವರ್ಧಕವಾಗಿ ‘ಎಂಡಿಎಂಎ’ ಮಾತ್ರೆಗಳನ್ನು ನೀಡಲಾಗುತ್ತಿತ್ತು. ನಂತರ ಕುದುರೆಗಳಿಗೂ ‘ಎಂಡಿಎಂಎ’ ಡ್ರಗ್ಸ್ ನೀಡಲಾಗುತ್ತಿತ್ತು. ಈ ಹಿಂದೆ ವ್ಯಾಪಾರಿಗಳ ಬಳಿ ಹೆಚ್ಚಿನ ಪ್ರಮಾಣದ ಎಂಡಿಎಂಎ ಇರುತ್ತಿತ್ತು ಎಂದು ತಿಳಿದ್ದಾರೆ.

    ಇದನ್ನೂ ಓದಿ:  ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ|ಕೋರ್ಟ್ ಮೊರೆಹೋದ ಮಹಿಳೆ | ಟ್ರಾವೆಲ್ಏಜೆನ್ಸಿ ನಾಟ್ ರೀಚಬಲ್

    ಒತ್ತಡ ನಿವಾರಣೆಗಾಗಿ ಹೆಚ್ಚಿನ ಜನರು ಇತ್ತೀಚೆಗೆ ಡ್ರಗ್ಸ್​ಗೆ ದಾಸರಾಗುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಸೂಕ್ತ ಸಂಸ್ಕಾರ ಕಲಿಸಿ ಈ ಬಗ್ಗೆ ಜಾಗೃತಿ ಮೂಡಿಸಿದರೆ ಉತ್ತಮ. ಮಾದಕ ಜಾಲಕ್ಕೆ ದಾಸರಾಗುತ್ತಿರುವವರಲ್ಲಿ ಮಕ್ಕಳು ಹಾಗೂ ಯುವಕರ ಸಂಖ್ಯೆ ಹೆಚ್ಚುತ್ತಿದೆ.
    | ಪೂರ್ಣಿಮಾ ಪುರೋಹಿತ್, ಆಪ್ತ ಸಮಾಲೋಚಕರು

    ಈಗ ಕಿಟ್ಟಿ ಪಾರ್ಟಿಗಳು, ಪಬ್, ಡಾನ್ಸ್​ಬಾರ್​ಗಳಲ್ಲೂ ಡ್ರಗ್ಸ್ ಘಾಟು ಹೆಚ್ಚಾಗಿದೆ. ಎಂಡಿಎಂಎಗೆ ಬೇಡಿಕೆ ಹೆಚ್ಚಿದಂತೆ ಇದರ ಬೆಲೆಯೂ ಗಗನಕ್ಕೇರಿದೆ. ಎಂಡಿಎಂಎ ಮಾತ್ರೆಯೊಂದನ್ನು ಸಾವಿರಾರು ರೂ. ತೆತ್ತು ಖರೀದಿಸುವವರಿದ್ದಾರೆ. ಸದ್ಯ ಈ ಡ್ರಗ್ಸ್ ಬೇರೆಬೇರೆ ರೂಪದಲ್ಲಿ ಬಂದಿದ್ದು, ಕೆಂಪು, ಹಳದಿ, ನೀಲಿ, ಹಸಿರು, ಬಿಳಿ ಬಣ್ಣದಲ್ಲಿ ಪೂರೈಕೆಯಾಗುತ್ತಿವೆ. ಬೆಂಗಳೂರಿನಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ:  ಆರ್​ಟಿಒ ಅಧಿಕಾರಿಗಳಿಗೆ ಕಂಟ್ರೋಲ್ ರೂಂ ಡ್ಯೂಟಿ

    ಶ್ರೀಮಂತರ ನೆಚ್ಚಿನ ಡ್ರಗ್ಸ್ ಎಲ್​ಎಸ್​ಡಿ

    ಎಂಡಿಎಂಎ ನಂತರದ ಸ್ಥಾನದಲ್ಲಿರುವ ಎಲ್​ಎಸ್​ಡಿಗೆ ಹೆಚ್ಚಿನ ಬೆಲೆ ಇರುವುದರಿಂದ ಇದನ್ನು ‘ಶ್ರೀಮಂತರ ಡ್ರಗ್ಸ್’ ಎಂದೇ ಕರೆಯಲಾಗುತ್ತದೆ. ಭತ್ತ ಹಾಗೂ ಗೋಧಿಯಲ್ಲಿರುವ ಫಂಗಸ್ ಹೋಗಲಾಡಿಸಲು ಬಳಸುವ ಕ್ರಿಮಿನಾಶಕದಿಂದ ಎಲ್​ಎಸ್​ಡಿ ತಯಾರಿಸಲಾಗುತ್ತದೆ. ಅಮೆರಿಕದ ಅನಧಿಕೃತ ಪ್ರಯೋಗಾಲಯಗಳಲ್ಲಿ ಹೆಚ್ಚಾಗಿ ಎಲ್​ಎಸ್​ಡಿ ತಯಾರಿಸುತ್ತಾರೆ. ಪುಡಿ ರೂಪದಲ್ಲಿರುವ ಈ ವಸ್ತುವನ್ನು ದ್ರವ್ಯರೂಪಕ್ಕೆ ಬದಲಾಯಿಸಿ ಮಾರಾಟ ಮಾಡಲಾಗುತ್ತದೆ. ಈ ದ್ರವ್ಯ ಕಹಿಯಾಗಿರುತ್ತದೆ. 20ರಿಂದ 30 ಮೈಕ್ರೋ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಸೇವಿಸಿದ ವ್ಯಕ್ತಿ ಕನಿಷ್ಠ 12ರಿಂದ 13 ಗಂಟೆಗಳ ಕಾಲ ಪ್ರಜ್ಞಾವಸ್ಥೆಯಲ್ಲಿ ಇರುವುದಿಲ್ಲ. ವ್ಯಸನಿಗಳು ಎಲ್​ಎಸ್​ಡಿಯನ್ನು ಕೆಲ ಹೊತ್ತು ನಾಲಿಗೆಯ ಕೆಳಗೆ ಇಟ್ಟುಕೊಳ್ಳುತ್ತಾರೆ.

    ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ|ಕೋರ್ಟ್ ಮೊರೆಹೋದ ಮಹಿಳೆ | ಟ್ರಾವೆಲ್ಏಜೆನ್ಸಿ ನಾಟ್ ರೀಚಬಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts