More

    ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ|ಕೋರ್ಟ್ ಮೊರೆಹೋದ ಮಹಿಳೆ | ಟ್ರಾವೆಲ್ಏಜೆನ್ಸಿ ನಾಟ್ ರೀಚಬಲ್

    | ಜಗನ್ ರಮೇಶ್
    ಬೆಂಗಳೂರು: ಹೊಸ ಬಾಳಿನ ಕನಸಿನಲ್ಲಿದ್ದ ಆ ನವಜೋಡಿ ಮಧುಚಂದ್ರಕ್ಕೆಂದು ವಿದೇಶಕ್ಕೆ ತೆರಳಲು ನಿರ್ಧರಿಸಿ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಪ್ಯಾಕೇಜ್ ಬುಕ್ ಮಾಡಿತ್ತು. ಆದರೆ, ಕರೊನಾ ಹಾವಳಿಯಿಂದ ಅವರ ಯೋಜನೆಗಳೆಲ್ಲ ತಲೆಕೆಳಗಾದವು. ಈಗ ಆ ಜೋಡಿ ಹನಿಮೂನ್ ಪ್ಯಾಕೇಜ್​ಗೆ ಪಾವತಿಸಿದ್ದ ಹಣ ಹಿಂಪಡೆಯಲು ಪರದಾಡುತ್ತಿದೆ.

    ಇದು ಕೇವಲ ಒಂದು ಉದಾಹರಣೆಯಷ್ಟೆ. ಕರೊನಾ ವೈರಸ್ ಎಂಬ ಬೇಡದ ಅತಿಥಿಯ ಆಗಮನದಿಂದ ಲಕ್ಷಾಂತರ ಜನ ಸಂಕಷ್ಟ ಎದುರಿಸುತ್ತಿದ್ದರೆ, ಹಲವಾರು ತಿಂಗಳು ಮೊದಲೇ ಪ್ಯಾಕೇಜ್ ಬುಕ್ ಮಾಡಿಕೊಂಡಿದ್ದ ಪ್ರವಾಸಪ್ರಿಯರು, ಅತ್ತ ಪ್ರವಾಸವೂ ಇಲ್ಲದೆ, ಇತ್ತ ಹಣವೂ ಹಿಂಪಡೆಯಲಾಗದೆ ಒದ್ದಾಡುವಂತಾಗಿದೆ. ಕರೊನಾ ಪರಿಸ್ಥಿತಿಯನ್ನೇ ನೆಪವನ್ನಾಗಿಸಿಕೊಂಡ ಅನೇಕ ಟ್ರಾವೆಲ್ ಏಜೆನ್ಸಿಗಳು ಗ್ರಾಹಕರ ಹಣ ಹಿಂದಿರುಗಿಸಲು ಇಲ್ಲ ಸಲ್ಲದ ನೆಪ ಹೇಳಿ ಸತಾಯಿಸುತ್ತಿವೆ.

    ಗ್ರಾಹಕರೇನು ಮಾಡಬೇಕು?

    ಕೋವಿಡ್-19ನಂಥ ಅನಿರೀಕ್ಷಿತ ಸನ್ನಿವೇಶವನ್ನೇ ಬಂಡವಾಳವನ್ನಾಗಿಸಿಕೊಂಡು ಅನೇಕ ಟ್ರಾವೆಲ್ ಏಜೆನ್ಸಿಗಳು ಗ್ರಾಹಕರನ್ನು ವಂಚಿಸಲು ಮುಂದಾಗುತ್ತಿವೆ. ಗ್ರಾಹಕರು ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಯಾವುದೇ ಸಂಸ್ಥೆಗಳು ಷರತ್ತು ಮತ್ತು ನಿಬಂಧನೆಗಳ ಅನುಸಾರವೇ ನಡೆದುಕೊಳ್ಳಬೇಕಾಗುತ್ತದೆ. ಗ್ರಾಹಕರ ಹಣ ಮರುಪಾವತಿಸಲು ನಿರಾಕರಿಸುವುದು ಅಥವಾ ಮುಂದಿನ ದಿನಗಳಲ್ಲಿ ಪ್ರವಾಸ ಕೈಗೊಳ್ಳುವಂತೆ ಒತ್ತಾಯಿಸುವುದು ಅನುಚಿತ ವ್ಯಾಪಾರ ಪದ್ಧತಿಯಾಗುತ್ತದೆ. ಅಂಥ ಏಜೆನ್ಸಿಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬಹುದು. ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ ಪರಿಹಾರಕ್ಕೆ ಬೇಡಿಕೆ ಇಡಬಹುದು.
    – ಹರಿಶ್ಚಂದ್ರ ಮವ್ವಾರು, ಹೈಕೋರ್ಟ್ ವಕೀಲರು 

    ಹನಿಮೂನ್ ಆಸೆಗೆ ತಣ್ಣೀರೆರೆಚಿದ ಕರೊನಾ 

    ಮಾರ್ಚ್ ಅಂತ್ಯದಲ್ಲಿ ಮದುವೆಯಾಗಬೇಕಿದ್ದ ಜೋಡಿಯೊಂದು, ಮಧುಚಂದ್ರಕ್ಕಾಗಿ ಮಾರಿಷಿಯಸ್​ಗೆ ತೆರಳಲು ನಿರ್ಧರಿಸಿ ನಗರದ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಪ್ಯಾಕೇಜ್ ಬುಕ್ ಮಾಡಿತ್ತು. ಆದರೆ, ಆ ಹೊತ್ತಿಗಾಗಲೆ ಕರೊನಾ ಸೋಂಕು ವ್ಯಾಪಿಸುತ್ತಿದ್ದ ಕಾರಣ ಮದುವೆಯನ್ನೇ ಮುಂದೂಡಲಾಗಿತ್ತು. ಇತ್ತ ವಿಮಾನ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಆ ಜೋಡಿ ಹನಿಮೂನ್ ಯೋಚನೆಯನ್ನೇ ಕೈಬಿಟ್ಟಿತ್ತು. ಆದರೆ, ಪ್ಯಾಕೇಜ್ ರದ್ದುಪಡಿಸಿ ಹಣ ಹಿಂದಿರುಗಿಸಲು ನಿರಾಕರಿಸಿದ್ದ ಟ್ರಾವೆಲ್ ಏಜೆನ್ಸಿ, ಹಣದ ಬದಲಿಗೆ ವೋಚರ್​ಗಳನ್ನು ನೀಡುವುದಾಗಿ ತಿಳಿಸಿತ್ತಲ್ಲದೆ, ಅವುಗಳನ್ನು ಭವಿಷ್ಯದಲ್ಲಿ ಬಳಸಿಕೊಳ್ಳಬಹುದು ಎಂದು ತಿಳಿಸಿತ್ತು.

    ಇದನ್ನೂ ಓದಿ: ಪತ್ನಿ ವಿರುದ್ಧ ಕಿರಿಕ್​ ಮಾಡಿಕೊಂಡು, ಗೆಳತಿ ಮೇಲೆ ಗುಂಡುಹಾರಿಸಿ ಕಾರಿನಿಂದ ತಳ್ಳಿದ ಸಬ್​ಇನ್ಸ್​ಪೆಕ್ಟರ್​!

    ವೋಚರ್​ಗಳನ್ನು ಪಡೆಯಲು ನಿರಾಕರಿಸಿರುವ ಜೋಡಿ, ಸಂಸ್ಥೆಯ ಷರತ್ತು ಮತ್ತು ನಿಬಂಧನೆಗಳಲ್ಲಿ ವೋಚರ್​ಗಳನ್ನು ನೀಡುವ ಬಗ್ಗೆ ಉಲ್ಲೇಖಿಸಿಯೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹನಿಮೂನ್​ಗೆ ತೆರಳುವುದೇ ಸಂದೇಹವಾಗಿದೆ. ವಿದೇಶ ಪ್ರಯಾಣವೂ ಅಷ್ಟು ಸುರಕ್ಷಿತವಲ್ಲ. ಹಣದ ಬದಲಿಗೆ ವೋಚರ್​ಗಳನ್ನು ಪಡೆದುಕೊಂಡರೆ, ಮುಂದೆ ಬೇರೆ ಆಯ್ಕೆಗಳೇ ಇರುವುದಿಲ್ಲ. ಅನಿವಾರ್ಯವಾಗಿ ಭಯದ ನಡುವೆಯೇ ಹನಿಮೂನ್​ಗೆ ತೆರಳಬೇಕಾಗುತ್ತದೆ ಎಂದು ಅಳಲು ತೋಡಿಕೊಂಡಿದೆ.

    ಇದನ್ನೂ ಓದಿ: ನಾಲ್ಕನೇ ಮದುವೆಗೆ ಅಡ್ಡಿಯಾದ ನಾಲ್ಕುವರ್ಷದ ಮಗನನ್ನೇ ಕೊಲೆಮಾಡಿದಳು!

    ಕೋರ್ಟ್ ಮೊರೆ ಹೋದ ಮಹಿಳೆ 

    ತಂದೆ-ತಾಯಿಯನ್ನು ವಿದೇಶ ಪ್ರವಾಸಕ್ಕೆ ಕಳುಹಿಸಬೇಕೆಂದು ಆಸೆ ಹೊಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಟ್ರಾವೆಲ್ ಏಜೆನ್ಸಿಯೊಂದನ್ನು ಸಂರ್ಪಸಿ ಸಿಂಗಪುರ ಪ್ರವಾಸ ಪ್ಯಾಕೇಜ್ ಬುಕ್ ಮಾಡಿದ್ದರು. ಅದಕ್ಕಾಗಿ 60 ಸಾವಿರ ರೂ. ಮುಂಗಡ ಹಣವನ್ನೂ ಪಾವತಿಸಿದ್ದರು. ಎಲ್ಲವೂ ಅಂದುಕೊಂಡಂತಾಗಿದ್ದರೆ, ಏ.22ರಂದು ಆಕೆಯ ಪಾಲಕರು ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ, ಅಷ್ಟರಲ್ಲಾಗಲೆ ದೇಶದಲ್ಲಿ ಲಾಕ್​ಡೌನ್ ಘೋಷಣೆಯಾಗಿ ಅಂತಾರಾಷ್ಟ್ರೀಯ ವಿಮಾನಯಾನ ರದ್ದುಗೊಂಡಿತ್ತು.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಶುಲ್ಕದ ಹೆಸರಲ್ಲಿ ಮಕ್ಕಳನ್ನು ಭಿಕ್ಷೆಗೆ ಕಳುಹಿಸುವ ದಂಧೆ

    ಇದರಿಂದ, ಪ್ರವಾಸ ರದ್ದುಗೊಳಿಸುವಂತೆ ಏಜೆನ್ಸಿಗೆ ಮನವಿ ಮಾಡಿದ್ದರು. ಪ್ರವಾಸಕ್ಕೆ ಇನ್ನೂ ಸಮಯವಿದ್ದು, ಸ್ವಲ್ಪ ದಿನ ಕಾದು ನೋಡುವಂತೆ ಏಜೆನ್ಸಿ ತಿಳಿಸಿತ್ತು. ಈ ಮಧ್ಯೆ 55 ವರ್ಷ ಮೇಲ್ಪಟ್ಟವರು ಸಂಚರಿಸಿದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರವಾಸ ರದ್ದುಪಡಿಸಲು ನಿರ್ಧರಿಸಿದ ಮಹಿಳೆ ಸಂಪೂರ್ಣ ಹಣ ಮರು ಪಾವತಿ ಮಾಡುವಂತೆ ಕೋರಿದ್ದರು. ಆ ಮನವಿ ನಿರಾಕರಿಸಿದ್ದ ಏಜೆನ್ಸಿ ಮುಂದಿನ ದಿನಗಳಲ್ಲಿ ಮತ್ತೆ ಪ್ರವಾಸ ಕೈಗೊಳ್ಳುವಂತೆ ತಿಳಿಸಿತ್ತು. ಆದರೆ, ವಯಸ್ಸಾದ ಪಾಲಕರನ್ನು ಮತ್ತೆ ಪ್ರವಾಸಕ್ಕೆ ಕಳುಹಿಸಲು ಮಹಿಳೆ ಸಿದ್ಧವಿರಲಿಲ್ಲ. ಹೋಗಿಯೇ ಇರದ ಪ್ರವಾಸಕ್ಕೆ ಹಣ ಕಳೆದುಕೊಳ್ಳಲು ಬಯಸದ ಮಹಿಳೆ, ಕಡೆಗೆ ನಿಯಮಗಳ ಅನುಸಾರ ಅರ್ಧದಷ್ಟು ಹಣವನ್ನಾದರೂ ಹಿಂದಿರುಗಿಸುವಂತೆ ಮನವಿ ಮಾಡಿದ್ದರು. ಆ ಮನವಿಯನ್ನೂ ಒಪ್ಪದ ಕಾರಣ ಮಹಿಳೆ ಟ್ರಾವೆಲ್ ಏಜೆನ್ಸಿಯ ಅನುಚಿತ ವ್ಯಾಪಾರ ಪದ್ಧತಿ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

    ಇದನ್ನೂ ಓದಿ: ಬಾಗಿಲು ತೆರೆದಿದ್ದ ಅಂಗಡಿ ಮುಂದೆ ಸಾಷ್ಟಾಂಗ ನಮಸ್ಕಾರ..!

    ಟ್ರಾವೆಲ್ ಏಜೆನ್ಸಿ ನಾಟ್ ರೀಚಬಲ್

    ಬೇಸಿಗೆ ರಜೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮಲೇಶಿಯಾ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ಇಂಟರ್​ನೆಟ್​ನಲ್ಲಿ ಹುಡುಕಾಡಿ ಸ್ಥಳೀಯ ಏಜೆನ್ಸಿಯೊಂದನ್ನು ಸಂರ್ಪಸಿದ್ದರು. ಹೋಟೆಲ್ ರೂಂ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಸುತ್ತಾಡಲು ವಾಹನ ಇನ್ನಿತರ ಸೇವೆಗಳಿಗಾಗಿ 16 ಸಾವಿರ ರೂ. ಪಾವತಿಸಿ ಪ್ಯಾಕೇಜ್ ಬುಕ್ ಮಾಡಿದ್ದರು. ಲಾಕ್​ಡೌನ್ ಘೋಷಣೆಯಾದ ಬೆನ್ನಲ್ಲೇ ಏಜೆನ್ಸಿಗೆ ಇ-ಮೇಲ್ ಕಳುಹಿಸಿ, ಪ್ಯಾಕೇಜ್ ರದ್ದುಮಾಡುವುದಾಗಿ ತಿಳಿಸಿ ಹಣ ಮರು ಪಾವತಿಸಲು ಕೋರಿದ್ದರು. ಮನವಿ ಪರಿಶೀಲಿಸುವುದಾಗಿ ಪ್ರತಿಕ್ರಿಯಿಸಿದ್ದ ಏಜೆನ್ಸಿಯಿಂದ ನಂತರದ ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ದೂರವಾಣಿ ಮೂಲಕವೂ ಸಂರ್ಪಸಲು ಸಾಧ್ಯವಾಗುತ್ತಿಲ್ಲ. ಈಗ 16 ಸಾವಿರ ಹಿಂಪಡೆಯಲು ಮಲೇಶಿಯಾಗೆ ಹೋಗಿ ಬರಲು ಸಾಧ್ಯವೇ ಎಂದು ಅಸಹಾಯಕತೆಯಿಂದ ಪ್ರಶ್ನಿಸುತ್ತಾರೆ ಟೆಕ್ಕಿ.

    ಆರ್​ಟಿಒ ಅಧಿಕಾರಿಗಳಿಗೆ ಕಂಟ್ರೋಲ್ ರೂಂ ಡ್ಯೂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts