More

    ‘ರಾಮ ಮಂದಿರ ನಿರ್ಮಾಣಕ್ಕೆ ಸರ್ವ ಸಮದಾಯಗಳಿಂದಲೂ ದೇಣಿಗೆ ಸ್ವೀಕಾರ’

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಎಲ್ಲಾ ಸಮುದಾಯಗಳಿಂದಲೂ ದೇಣಿಗೆಗಳನ್ನು ಸ್ವೀಕರಿಸಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ.

    ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರದಿಂದ ರಚನೆಗೊಂಡಿರುವ ಟ್ರಸ್ಟ್‌. ದೇಣಿಗೆ ಕುರಿತಂತೆ ಈ ವಿವರಣೆ ನೀಡಿದೆ.

    “ಭಗವಾನ್ ರಾಮನಲ್ಲಿ ಭಕ್ತಿ ಮತ್ತು ನಂಬಿಕೆಯನ್ನು ಹೊಂದಿರುವವರಿಂದ ನಾವು ದೇಣಿಗೆ ಸ್ವೀಕರಿಸುತ್ತೇವೆ ಅದು ಯಾವುದೇ ಸಮಯದಾಯದವರೂ ಆಗಿರಬಹುದು. ಇದು ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ರೂಪಾಯಿಯಿಂದ ಒಂದು ಕೋಟಿ ರೂಪಾಯಿಗಳವರೆಗೆ ದೇಣಿಗೆಯನ್ನು ನಾವು ಸ್ವೀಕರಿಸುತ್ತೇವೆ’ ಎಂದು ಉಡುಪಿ ಪೆಜಾವಾರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಸೊಸೆಯ ದುಷ್ಟಶಕ್ತಿ ಓಡಿಸಲು ಮಾವನ ಸಾಯಿಸಿದ ‘ದೇವಮಾನವ’ ಅರೆಸ್ಟ್‌

    ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸ್ವಾಮೀಜಿ, ಸಂಪನ್ಮೂಲ ಕ್ರೋಡೀಕರಣದ ಪ್ರಯತ್ನದ ಭಾಗವಾಗಿ ಪ್ರತಿ ತಲೆಗೆ ಹತ್ತು ರೂಪಾಯಿ ಮತ್ತು ಮನೆಯಿಂದ 100 ರೂಪಾಯಿ ಸಂಗ್ರಹಿಸಲಾಗುವುದು. ಇದು ಕೇವಲ ಸಲಹೆಯಾಗಿದೆ, ಇದು ತೆರಿಗೆ ಅಲ್ಲ. ಮಂದಿರ ನಿರ್ಮಾಣದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಇದೊಂದು ರೀತಿಯಲ್ಲಿ ಸಹಕಾರಿಯಾಗಲಿದೆ ಅಷ್ಟೇ ಎಂದಿದ್ದಾರೆ.

    ಇನ್ನೂ ಹೆಚ್ಚಿನ ಹಣವನ್ನು ಕಾರ್ಪೋರೇಟ್‌ ಸಂಸ್ಥೆಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ. ಮುಂದಿನ ವಾರ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ದೇವಾಲಯ ನಿರ್ಮಾಣ ಕಾರ್ಯಗಳಿಗೆ ಸುಮಾರು 300 ಕೋಟಿ ರೂಪಾಯಿಗಳ ಖರ್ಚು ಆಗಲಿದ್ದು, ದೇವಾಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಖರ್ಚಾಗಲಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

    ನವೆಂಬರ್ 25ರ ಸುಮಾರಿಗೆ ನಿಧಿಸಂಗ್ರಹ ಅಭಿಯಾನವನ್ನು ನಡೆಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.

    ಕ್ವಾರಂಟೈನ್‌ ನಿಮಯ ಉಲ್ಲಂಘಿಸಿ ಆತಂಕ ಸೃಷ್ಟಿಸಿದವರೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts