More

    ಲೋಭಿಯಾಗಬೇಡಿ, ದಾನ ಮಾಡಿ: ಆರೋಗ್ಯ ತಪಾಸಣಾ ಶಿಬಿರದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಸಲಹೆ

    ರಾಮನಗರ: ಮಾನವ ಲೋಭಿಯಾಗದೆ ಗಳಿಸಿದ್ದಲ್ಲಿ ಒಂದಿಷ್ಟು ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿ ಹೇಳಿದರು.

    ನಗರದ ರೋಟರಿ – ಬಿಜಿಎಸ್ ಆಸ್ಪತ್ರೆಯಲ್ಲಿ ಬಿ.ಕೆ. ಕೃಷ್ಣಮೂರ್ತಿ ಚಾರಿಟಬಲ್ ಟ್ರಸ್ಟ್, ರೋಟರಿ ಸಿಲ್ಕ್ ಸಿಟಿ ಮತ್ತು ರೋಟರಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಸಂಯುಕ್ತವಾಗಿ ಬಿ.ಕೆ. ಕೃಷ್ಣಮೂರ್ತಿ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ನದಿ ತುಂಬಿ ಹರಿಯುತ್ತಿದ್ದರೂ ತಾನೆಂದು ಕುಡಿಯುವುದಿಲ್ಲ, ಮರ ಗಿಡಗಳು ಹಣ್ಣು ಹಂಪಲು ನೀಡಿದರೂ ತಾವೆಂದೂ ತಿನ್ನುವುದಿಲ್ಲ. ಆದರೆ, ಆದರೆ ಮನುಷ್ಯ ಮಾತ್ರ ಎಲ್ಲವೂ ತನಗೆ ಬೇಕು ಎಂದು ಲೋಭಿಯಾಗುತ್ತಾನೆ. ಇಂತಹ ಸ್ವಾರ್ಥ ಬದುಕು ಬೇಡ. ಮನುಷ್ಯ ಭೂಮಿ ಮೇಲಿರುವ ಬುದ್ದಿವಂತ ಪ್ರಾಣಿಯಾಗಿದ್ದು, ಎಲ್ಲರೊಳಗೆ ಒಂದಾಗಿ ಬದುಕುವ ಮೂಲಕ ಪ್ರಪಂಚದ ಒಳಿತನ್ನು ಕಾಣಬೇಕು ಎಂದರು.

    ಭಾರತ ವಿಕಾಸ್ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಮೂಲಕ ಬಿ.ಕೆ. ಕೃಷ್ಣಮೂರ್ತಿ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿದ್ದರು. ಅವರ ಕಾರ್ಯವನ್ನು ಮುಂದುವರಿಸಿರುವುದು ಶ್ಲಾಘನೀಯ. ಜನರು ಎಂದಿಗೂ ಆರೋಗ್ಯ ನಿರ್ಲಕ್ಷಿಸುವುದು ಸರಿಯಲ್ಲ. ಇಂತಹ ಶಿಬಿರಗಳ ಉಪಯೋಗ ಪಡೆದುಕೊಳ್ಳುವಂತೆ ಸ್ವಾಮೀಜಿ ತಿಳಿಸಿದರು.

    ರೋಟರಿ ಸಿಲ್ಕ್ ಸಿಟಿ ಪದಾದಿಕಾರಿಗಳಾದ ಗೋಪಾಲ್, ಸೋಮಶೇಖರ್ ರಾವ್, ಕೆ.ಶಿವರಾಜ್, ಬಿಜಿಎಸ್ ಆಸ್ಪತ್ರೆಯ ಸಿಬ್ಬಂದಿಗಳಾದ ವೇಣುಗೋಪಾಲ್, ಬಿ.ಕೆ. ಕೃಷ್ಣಮೂರ್ತಿ ಚಾರಿಟಬಲ್ ಟ್ರಸ್ಟ್​ನ ಗಿರಿಜಾಂಬ, ಪ್ರವೀಣ್, ರಾಘವೇಂದ್ರ, ಹರ್ಷವರ್ಧನ್ ಮುಂತಾದವರು ಇದ್ದರು.

    ಬಿಜಿಎಸ್ ಆಸ್ಪತ್ರೆ ಪುನರಾರಂಭ

    ರೋಟರಿ – ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮುಖ್ಯಸ್ಥ ಡಾ. ಓಂ ಪ್ರಕಾಶ್ ಮಾತನಾಡಿ, ರಾಮನಗರದ ರೋಟರಿ – ಬಿಜಿಎಸ್ ಆಸ್ಪತ್ರೆಯನ್ನು ಕೋವಿಡ್ ಕಾರಣದಿಂದಾಗಿ ಕೆಲದಿನ ಮುಚ್ಚಲಾಗಿತ್ತು. ಇದೀಗ ಆಸ್ಪತ್ರೆ ಆರಂಭವಾಗಿದ್ದು, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳು ಲಭ್ಯವಿವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts