More

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ‘ಡೊಳ್ಳು’, ಇದೀಗ ನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು!

    ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಸಿನಿಮಾ ಬಿಡುಗಡೆಗೂ ಮೊದಲೇ ಈಗಾಗಲೇ ಸುದ್ದಿಯಲ್ಲಿದ್ದು, ಇದೀಗ ಚಿತ್ರನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು ಮಾಡಲಾರಂಭಿಸಿದೆ. ಅರ್ಥಾತ್, ಈ ಚಿತ್ರದ ಹೊಸ ಹಾಡು ‘ಮಾಯಾನಗರಿ’ಯನ್ನು ನಟ ಧನಂಜಯ ಇಂದು ಬಿಡುಗಡೆ ಮಾಡಿದ್ದಾರೆ.

    ‘ಮಯಾನಗರಿ’ ಹಾಡು ಬಿಡುಗಡೆ ಮಾಡಿದ ಧನಂಜಯ್​, ತಾವು ಬೆಂಗಳೂರಿಗೆ ಬಂದ ದಿನಗಳನ್ನು ನೆನಪಿಸಿಕೊಂಡರು. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಯಾನಗರಿಯ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಸಾಹಿತ್ಯ ರಚಿಸಿದ್ದರೆ, ಅನಂತ್ ಕಾಮತ್​ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಈ ಗೀತೆಗೆ ಧ್ವನಿಯಾಗಿದ್ದಾರೆ. ಈ ಮೂಲಕ ಸಾಗರ್ ಗಾಯಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.

    ಜನಪದ ಕಲೆ ಡೊಳ್ಳಿನ ಸುತ್ತ ಸಾಗುವ ಕಥಾಹಂದರ ಹೊಂದಿರುವ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ವಡೆಯರ್ ಮೂವೀಸ್ ಬ್ಯಾನರ್​ನಡಿ ನಿರ್ದೇಶಕ ಪವನ್ ವಡೆಯರ್ ಮತ್ತು ನಟಿ ಅಪೇಕ್ಷ ವಡೆಯರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ, ನಿಧಿ ಹೆಗ್ಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದ ಕಲಾವಿದರು ತಾರಾಗಣದಲ್ಲಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ‘ಡೊಳ್ಳು’ ಇದೇ 26ರಂದು ಬಿಡುಗಡೆ ಆಗಲಿದೆ.

    ಪವನ್ ವಡೆಯರ್ ಅವರ ಚೊಚ್ಚಲ ನಿರ್ಮಾಣ, ಸಾಗರ್ ಪುರಾಣಿಕ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಈ ಸಲ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಜೊತೆಗೆ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅಲ್ಲಿಯೂ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ 'ಡೊಳ್ಳು', ಇದೀಗ ನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts