More

    ಟ್ವಿಟರ್​ಗೆ ಎಲಾನ್ ಮಸ್ಕ್ ಮಾಲೀಕತ್ವ; ಮರಳಿ ಸಿಗುತ್ತಾ ನಟಿ ಕಂಗನಾಗೆ ಟ್ವಿಟರ್ ಅಕೌಂಟ್?

    ನವದೆಹಲಿ: ಮೈಕ್ರೋಬ್ಲಾಗಿಂಗ್ ವೇದಿಕೆ ಆಗಿರುವ ಟ್ವಿಟರ್​ಗೆ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಮಾಲೀಕತ್ವ ಹೊಂದಿದ ಬೆನ್ನಿಗೇ ನಟಿ ಕಂಗನಾ ರಣಾವತ್​ ಅವರಲ್ಲಿ ಒಂದು ಆಶಾಭಾವನೆ ಮೂಡಿದೆ. ಈ ಕುರಿತು ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.

    ಎಡ-ಬಲಗಳ ಸಂಘರ್ಷ, ಬಿಜೆಪಿ ಪರ ಬ್ಯಾಟಿಂಗ್ ಮಾತ್ರವಲ್ಲದೆ, ಆಗಾಗ ಟ್ವೀಟ್​ನಿಂದಾಗಿ ವಿವಾದಕ್ಕೆ ಒಳಗಾಗುತ್ತಿದ್ದ ನಟಿ ಕಂಗನಾ ರಣಾವತ್​ ಮೇಲೆ ಅದೇ ಕಾರಣಕ್ಕೆ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಇವೆಲ್ಲದರ ಹಿನ್ನೆಲೆಯಲ್ಲಿ ಕಳೆದ ವರ್ಷ ಕಂಗನಾ ಖಾತೆಯನ್ನು ಟ್ವಿಟರ್ ಬ್ಲಾಕ್ ಮಾಡಿತ್ತು.

    ಆದರೆ ಇದೀಗ ಎಲಾನ್ ಮಸ್ಕ್​ ಟ್ವಿಟರ್​ ಮಾಲೀಕತ್ವ ಹೊಂದುವ ಮೂಲಕ ಕಂಗನಾಗೆ ಖಾತೆ ಮರಳಿ ಸಿಗುವ ಭರವಸೆ ಮೂಡಿದಂತಿದೆ. ಅಲ್ಲದೆ ಕಂಗನಾ ಟ್ವಿಟರ್ ಖಾತೆ ರಿಸ್ಟೋರ್ ಮಾಡಿ ಕೊಡುವಂತೆ ಅಭಿಮಾನಿಯೊಬ್ಬರು ಎಲಾನ್​ ಮಸ್ಕ್​ಗೆ ಟ್ವಿಟರ್​​ನಲ್ಲಿ ಮನವಿ ಮಾಡಿಕೊಂಡಿರುವುದನ್ನು ಕಂಗನಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಆಕೆ ಮಸ್ಕ್​ ಟ್ವಿಟರ್ ಮಾಲೀಕತ್ವ ಹೊಂದಿದ ಸುದ್ದಿಯ ತುಣುಕನ್ನೂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಕಂಗನಾ ಟ್ವಿಟರ್​ಗೆ ಮರಳುವ ಸಾಧ್ಯತೆಗಳು ಗೋಚರಿಸಿವೆ.

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts