More

    ಬಿಡುಗಡೆ ಆಗಲಿದೆಯೇ 2011ರ ಜಾತಿಗಣತಿ?; ಕೇಂದ್ರ ಸಚಿವರಿಂದಲೇ ಸ್ಪಷ್ಟನೆ

    ನವದೆಹಲಿ: ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ (ಸೋಷಿಯೋ ಎಕನಾಮಿಕ್ ಆ್ಯಂಡ್ ಕಾಸ್ಟ್​ ಸೆನ್ಸಸ್​- ಎಸ್​ಇಸಿಸಿ) 2011 ದೇಶಾದ್ಯಂತ ಬಹಳಷ್ಟು ಚರ್ಚೆಯಲಿದ್ದು, ಇದು ಬಿಡುಗಡೆ ಆಗಲಿದೆಯೇ ಇಲ್ಲವೇ ಎಂಬ ಕುರಿತೂ ಮಾತುಕತೆಗಳು ನಡೆಯುತ್ತಿವೆ. ಆದರೆ ಈಗ ಈ ಕುರಿತು ಕೇಂದ್ರ ಸಚಿವರೇ ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಈ ಈ ಕುರಿತ ಪ್ರಶ್ನೆಯೊಂದಕ್ಕೆ ಸದನದಲ್ಲಿ ಉತ್ತರಿಸಿದ್ದು, ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ಹಂತದಲ್ಲಿ ಜಾತಿ ಗಣತಿಯ ವಿವರ ಬಿಡುಗಡೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ ಕೇಂದ್ರ ಸರ್ಕಾರ ಎಸ್​ಸಿ-ಎಸ್​ಟಿ ಹೊರತಾಗಿ ಜಾತಿವಾರು ಎಣಿಕೆ ನಡೆಸಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ.

    ಜಾತಿ ಹೊರತಾದ ಎಸ್​ಇಸಿಸಿ 2011ರ ವಿವರ ಅಂತಿಮವಾಗಿದ್ದು, ಅದು http://www.ecc.gov.in ವೆಬ್​ಸೈಟ್​ನಲ್ಲಿ ಲಭ್ಯವಿದೆ. ಆದರೆ ಜಾತಿ ವಿವರವನ್ನು ಬಿಡುಗಡೆ ಮಾಡುವಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಹೇಳಿದ್ದಾರೆ.

    ಇನ್ನು 2021ರ ಜನಗಣತಿ ವಿಳಂಬದ ಕುರಿತ ಪ್ರಶ್ನೆಗೂ ಅವರು ಪ್ರತಿಕ್ರಿಯಿಸಿದ್ದು, ಆ ಕುರಿತ ವರದಿ ಆರೋಗ್ಯ ಇಲಾಖೆಯ ರಾಷ್ಟ್ರೀಯ ಜನಸಂಖ್ಯಾ ಆಯೋಗದ ಬಳಿ ಇದೆ. ಆದರೆ ಕೋವಿಡ್ ಪಿಡುಗಿನ ಸಂದರ್ಭದಲ್ಲಿ 2021ರ ಜನಗಣತಿ ಕುರಿತ ಕ್ಷೇತ್ರ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ತಿಳಿಸಲಾಗಿತ್ತು ಎಂಬುದನ್ನೂ ಹೇಳಿದ್ದಾರೆ.

    ಆಸ್ಪತ್ರೇಲಿ ಬಿಸಿನೀರಿಲ್ಲ, ಊಟ ಸರಿ ಇಲ್ಲ ಎಂದು ಹೇಳಿ ವೈದ್ಯಕೀಯ ಪರೀಕ್ಷೆಗೆ ಸಹಕರಿಸದ ನವ್ಯಶ್ರೀ..

    ಪಿಎಸ್​ಐ ಹಗರಣದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts