More

    ಪಿಎಸ್​ಐ ಹಗರಣದ ಬಗ್ಗೆ ನನಗೆ ಮೊದಲೇ ಗೊತ್ತಿತ್ತು: ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

    ಉಡುಪಿ: ರಾಜ್ಯದಲ್ಲಿ ನಡೆದಿರುವ ಪಿಎಸ್​ಐ ಹಗರಣ ದಿನಕ್ಕೊಂದು ತಿರುವು ಪಡೆಯುತ್ತ, ಬಗೆದಷ್ಟೂ ಆಳ ಎಂಬಂತಾಗುತ್ತಿದ್ದು, ಇದೀಗ ಆ ಸಂಬಂಧವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಾಗೂ ಇದೀಗ ಆಪ್​ ಮುಖಂಡರಾಗಿರುವ ಭಾಸ್ಕರ್​ ರಾವ್ ಮಹತ್ವದ ಸಂಗತಿಯೊಂದನ್ನು ಹೇಳಿದ್ದಾರೆ.

    ಇಂದು ಉಡುಪಿಯಲ್ಲಿ ಮಾತನಾಡಿರುವ ಅವರು, ಪಿಎಸ್​ಐ ಹಗರಣದ ಕುರಿತು ನನಗೆ ಮೊದಲೇ ವಾಸನೆ ಇತ್ತು ಎಂಬುದಾಗಿ ತಿಳಿಸಿದ್ದಾರೆ. ನಾನು ಬೆಂಗಳೂರು ನಗರ ಪೋಲಿಸ್ ಆಯುಕ್ತ ಆಗಿದ್ದಾಗ ಅಮೃತ್ ಪೌಲ್ ಮುಂದಿನ ಕಮಿಷನರ್ ಆಗುತ್ತಾರೆ ಎಂಬ ಸುದ್ದಿ ಇತ್ತು. ಆಗಾಗ್ಯೆ ಮುಖ್ಯಮಂತ್ರಿ ಮನೆಗೆ ಬರುವಾಗ ಕೂಡ ನಾನು ಪ್ರಶ್ನೆ ಮಾಡಿದ್ದೆ. ಇದು ಹಗರಣ ಎಂಬುವುದಾಗಿ ನನಗೆ ಮೊದಲೇ ಗೊತ್ತಿತ್ತು ಎಂದಿರುವ ಅವರು, ರಾಜ್ಯಪಾಲರ ಬಳಿಗೆ ಈ ವಿಷಯವನ್ನು ಕೊಂಡೊಯ್ದ ಮೊದಲ ಪಕ್ಷ ಆಮ್​ ಆದ್ಮಿ ಎಂಬುದಾಗಿಯೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್; ರಾಹುಲ್​ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು..

    ಇನ್ನು ತನಿಖೆ ಆಗುವವರೆಗೂ ಪರೀಕ್ಷೆ ಮಾಡುವುದಿಲ್ಲ ಎನ್ನುವುದು ತಪ್ಪು ನೀತಿ. ನೀವು ಯುವಜನರಿಗೆ ಮೋಸ ಮಾಡುತ್ತಿದ್ದೀರಿ. ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆಯನ್ನು ನಡೆಸಿ ಎಂದಿರುವ ಅವರು, ಸಿಐಡಿ ಒಳಗೆ ಹೋದ ಮೇಲೆ ಹೋಂ ಮಿನಿಸ್ಟರ್ ಮತ್ತು ಸಿಎಂ ಇನ್ವೆಸ್ಟಿಗೇಶನ್ ಆಫೀಸರ್ ಆಗುತ್ತಾರೆ. ಇದು ನ್ಯಾಯಾಂಗದಲ್ಲಿ ತನಿಖೆ ಆಗಬೇಕು ಎಂದು ನಾನು ಮೊದಲೇ ಆಗ್ರಹ ಮಾಡಿದ್ದೆ. ನ್ಯಾಯಾಂಗ ತನಿಖೆ ಆರಂಭ ಆದ 24 ಗಂಟೆಗಳಲ್ಲಿ ಅಮೃತ್ ಪೌಲ್ ಬಂಧನವಾಗಿದೆ ಎಂದು ಅವರು ಹೇಳಿದ್ದಾರೆ.

    ಆಸ್ಪತ್ರೇಲಿ ಬಿಸಿನೀರಿಲ್ಲ, ಊಟ ಸರಿ ಇಲ್ಲ ಎಂದು ಹೇಳಿ ವೈದ್ಯಕೀಯ ಪರೀಕ್ಷೆಗೆ ಸಹಕರಿಸದ ನವ್ಯಶ್ರೀ..

    ಮುಂದಿನ ತಿಂಗಳು ಮದುವೆ ಆಗಬೇಕಿದ್ದವ ತಂದೆಯ ತಿಥಿಯ ಬೆನ್ನಿಗೇ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts