More

    ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

    ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​ (ಬಿಎಸ್​ಎನ್​ಎಲ್​) ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ ಎಂಬುದು ಒಮ್ಮೆ ದೊಡ್ಡ ಸುದ್ದಿಯಾಗಿದ್ದು, ಬಳಿಕ ಕೇಂದ್ರ ಸರ್ಕಾರ ಕೆಲವು ಷರತ್ತುಗಳ ಮೇಲೆ ಕೋಟ್ಯಂತರ ಅನುದಾನ ನೀಡಿ ನೆರವಾಗಿದ್ದೆಲ್ಲ ಈಗ ಹಳೇ ವಿಷಯ. ಈ ಮಧ್ಯೆ ಹಳೇದೊಂದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಎಸ್​​ಎನ್​ಎಲ್ ಅಷ್ಟೊಂದು ಹೀನಾಯ ಸ್ಥಿತಿಯಲ್ಲಿದೆಯೇ ಎಂಬ ಬೇಸರ ಮೂಡಿಸುವಂತೆ ಮಾಡಿದೆ.

    ಬಿಎಸ್​ಎನ್ಎಲ್​ ಬ್ರಾಡ್​ಬ್ಯಾಂಡ್​ ಗ್ರಾಹಕ ಕಮಲ್ ಶರ್ಮಾ ಎಂಬವರು 2019ರ ಸೆಪ್ಟೆಂಬರ್​ನಲ್ಲೇ ತಮ್ಮ ಲ್ಯಾಂಡ್​ಲೈನ್​ ಸಂಪರ್ಕ ಡಿಸ್​ಕನೆಕ್ಟ್​ಗೊಳಿಸಲು ಅರ್ಜಿ ಸಲ್ಲಿಸಿ, ಸಂಬಂಧಿತ ಎಲ್ಲವನ್ನೂ ಸಂಸ್ಥೆಗೆ ಒಪ್ಪಿಸಿದ್ದರೂ ಅವರಿಗೆ ಮರಳಿಸಬೇಕಾಗಿರುವ ಠೇವಣಿ ಮೊತ್ತವನ್ನು ಬಿಎಸ್​ಎನ್​ಎಲ್​ ಸಂಸ್ಥೆ ಇನ್ನೂ ಮರಳಿಸಿಲ್ಲ.

    ಈ ಬಗ್ಗೆ ಸಂಬಂಧಿತ ಗ್ರಾಹಕರು ನಿರಂತರ ಪ್ರಯತ್ನದಲ್ಲಿದ್ದೂ ಒಂದೂವರೆ ವರ್ಷ ಕಳೆದರೂ ಡೆಪಾಸಿಟ್​ ಮೊತ್ತ ಪಡೆಯಲು ಸಾಧ್ಯವಾಗದ್ದಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ. ಈ ಮಧ್ಯೆ ಇದಕ್ಕೆ ಸಂಬಂಧಿಸಿದಂತೆ ಬಿಎಸ್​ಎನ್​ಎಲ್ ತನ್ನ ಅಧಿಕೃತ ಹ್ಯಾಂಡಲ್​ ಮೂಲಕ ನೀಡಿರುವ ಪ್ರತಿಕ್ರಿಯೆ ಬಿಎಸ್​ಎನ್​ಎಲ್​ ದುರ್ಗತಿಗೆ ಕನ್ನಡಿ ಹಿಡಿದಂತಿದೆ. ಬಿಎಸ್ಎನ್​ಎಲ್​ ಗ್ರಾಹಕರಾಗಿದ್ದ ಶರ್ಮಾಗೆ ಬರೀ 3,161.65 ಪೈಸೆ ಬಿಎಸ್​ಎನ್​ಎಲ್​ನಿಂದ ಮರುಪಾವತಿ ಆಗಬೇಕಿದೆ. ಆದರೆ 2019ರ ಸೆಪ್ಟೆಂಬರ್​ನಿಂದ ಈ ಮೊತ್ತವನ್ನು ಕೊಡದೆ ಸತಾಯಿಸುತ್ತಿರುವ ಬಿಎಸ್​ಎನ್​ಎಲ್​, ತಮಗೆ ಫಂಡ್​ ಬಂದ ಬಳಿಕ ನೀವು ನಮೂದಿಸಿರುವ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದೆ.

    ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

    ಬಿಎಸ್​ಎನ್​ಎಲ್​ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. 2019ರ ಸೆಪ್ಟೆಂಬರ್​ನಿಂದ ಕೇಳಿಕೊಳ್ಳುತ್ತಿದ್ದರೂ ಡೆಪಾಸಿಟ್ ಅಮೌಂಟ್ ಕೊಡುವಷ್ಟು ಫಂಡ್​ ಬಿಎಸ್​ಎನ್​ಎಲ್​ನಲ್ಲಿ ಇಲ್ಲವೇ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts