More

    ದೊಡ್ಡಮ್ಮ, ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವ

    ಬೇಲೂರು: ತಾಲೂಕಿನ ಅರೇಹಳ್ಳಿಯ ತೊಳಲು ರಸ್ತೆಯಲ್ಲಿರುವ ಶ್ರೀ ಸಂತೆ ಕಾಳಮ್ಮ ದೇವಸ್ಥಾನದಲ್ಲಿ ದೊಡ್ಡಮ್ಮ ಹಾಗೂ ಚಿಕ್ಕಮ್ಮನವರ 20ನೇ ವರ್ಷದ ಜಾತ್ರಾ ಮಹೋತ್ಸವವು ಎರಡು ದಿನಗಳ ಕಾಲ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

    ಉತ್ತರಾಯನೆ ವಸಂತ ಋತು, ಚೈತ್ರ ಮಾಸ ಕೃಷ್ಣ ಪಕ್ಷದ ಶುಭ ದಿನದಂದು ಪ್ರಾರಂಭವಾದ ಪೂಜಾ ದೇವರ ಮಹೋತ್ಸವಕ್ಕೆ ಪೂರ್ವ ಭಾವಿಯಾಗಿ ವಾದ್ಯಗೋಷ್ಠಿಯೊಂದಿಗೆ ಸಕಲೇಶಪುರ ರಸ್ತೆಯಲ್ಲಿರುವ ಮಠದ ಕಲ್ಯಾಣಿಯಿಂದ ಶ್ರೀ ಸಂತೆ ಕಾಳಮ್ಮನವರಿಗೆ ಗಂಗಾಪೂಜೆ, 108 ಕಳಸದೊಂದಿಗೆ ನಡೆಮುಡಿ ಉತ್ಸವದೊಂದಿಗೆ ದೇವಾಲಯ ಪ್ರವೇಶಿಸಿ ಪುಣ್ಯದೇವಿ ಪೂಜೆ, ಉಮಾಮಹೇಶ್ವರಿ ಕಳಸ, ಅಮ್ಮನವರಿಗೆ ಮಹಾ ರುದ್ರಾಭಿಷೇಕ, ಗಣ ಹೋಮ, ಚಂಡಿಕಾ ಹೋಮ, ಕುಂಕುಮಾರ್ಚನೆ, ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

    ಜಾತ್ರೋತ್ಸವದ ಎರಡನೇ ದಿನವಾದ ಮಂಗಳವಾರ ಅಮ್ಮನವರಿಗೆ ಗಂಗಾಪೂಜೆ, ಪಂಚಾಭಿಷೇಕ, ಮಹಾ ಮಂಗಳಾರತಿ ನಂತರ ನೈವೇದ್ಯ ಸಮರ್ಪಿಲಾಯಿತು.

    ಗಾಣಿಗರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಅನಿಲ್, ಉಪಾಧ್ಯಕ್ಷ ರಾಜೇಶ್, ಮುಖಂಡರಾದ ರಂಗಸ್ವಾಮಿ, ನಿಂಗಣ್ಣ, ಸಂಘದ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts